ನೇತ್ರದಾನ ಮಾಡಿ ಅಂಧರ ಬಾಳಿಗೆ ಬೆಳಕಾಗಿ : ಮಹೇಂದ್ರ ಕಾಪಸೆ ಕರೆ

0
0
loading...

 

ಕನ್ನಡಮ್ಮ ಸುದ್ದಿ-ವಿಜಯಪುರ: ಜ್ಞಾನ-ತಂತ್ರಜ್ಞಾನ ಎಷ್ಟೆ ಮುಂದವರೆದರು ಕಣ್ಣಿನಂತಹ ಬಹುಮುಖ್ಯ ಅಂಗವನ್ನು ಕೃತಕೆವಾಗಿ ತಯಾರಿಸಲು ಸಾಧ್ಯವಾಗಿಲ್ಲ. ಕಣ್ಣಿಲ್ಲಿದೆ ಜಗತ್ತನ್ನು ನೋಡುವ ಅವಕಾಶದಿಂದ ವಂಚಿತರಾದವರ ಬಾಳಿಗೆ ಬೆಳಕಾಗುವ ನಿಟ್ಟೆನಲ್ಲಿ ಮರಣದ ನಂತ್ತರ ತಮ್ಮ ಕಣ್ಣುಗಳನ್ನು ಮಣ್ಣು ಮಾಡಿದೆ ದಾನ ಮಾಡಿ ಅಂಧರ ಬಾಳಿಗೆ ಬೆಳಕಾಗಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಣ ಅಧಿಕಾರಿಗಳಾದ ಡಾ. ಮಹೇಂದ್ರ ಎಮ್ ಕಾಪಸೆ ಕರೆ ನೀಡಿದರು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಹಾಗೂ ನರ್ಸಿಂಗ ಕಾಲೇಜಗಳು, ಸಂಘ ಸಂಸ್ಥೆಗಳ, ಮತ್ತು ಅನುಗ್ರಹ ವ್ಹಿಜನ್ ಫೌಂಡೇಶನ ಟ್ರಸ್ಟ್ ವಿಜಯಪುರ ಇವರಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ ೩೩ನೇ ರಾಷ್ಟಿçÃಯ ನೇತ್ರದಾನ ಪಾಕ್ಷಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ ೧.೨೫ ಲಕ್ಷ ಪುರುಷರು, ಮಹಿಳೆಯರು ಮತ್ತು ಮಕ್ಕಳು ಮೃತ ವ್ಯಕ್ತಿಗಳ ದಾನ ಮಾಡಿದ ನೇತ್ರಗಳಿಂದ ದೃಷ್ಠಿ ಮರಳಿ ಪಡೆಯಲು ಕಾಯುತ್ತಿದ್ದಾರೆ ಇದು ತಂಬಾ ವಿಶಾದಕರ ವಿಷೇಯವಾಗಿದೆ ಆದ್ದರಿಂದ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಶಾಲಾ ಕಾಲೇಜುಗಳಲ್ಲಿ ನೇತ್ರ ದಾನ ಮಾಡಲು ಮನವಲಿಸಿ ಆರೋಗ್ಯ ಶಿಕ್ಷಣ ನೀಡಬೇಕೆಂದು ಹೇಳಿದರು.

ಅನುಗ್ರಹ ವ್ಹಿಜನ್ ಫೌಂಡೇಶನ್ ಟ್ರಸ್ಟ್ ವಿಜಯಪುರದ ಕಣ್ಣಿನ ತಜ್ಞ ವೈದ್ಯಾರಾದ ಡಾ.ಪ್ರಭುಗೌಡ ಬಿ.ಎಲ್ ಪಾಟೀಲ ರವರು ಮಾತನಾಡಿ, ನೇತ್ರ ದಾನ ಕುರಿತು ಯಾವದೇ ಮರಣ ಸಂಬಂದಿಸಿದಾಗ ತಾವು ದಯಾಮಾಡಿ ಹತ್ತಿರದ ಸಂಬಂಧಿಗಳಿಗೆ ನೇತ್ರದಾನ ಬಗ್ಗೆ ಮನವಲಿಸಿ ಅದರ ಮಹತ್ವ ಕುರಿತು ವಿವರವಾದ ಮಾಹತಿಯನ್ನು ನೀಡಿದರು. ಹಾಗೂ ಕಣ್ಣುದಾನ ಮಾಡುವವರು ಮುಂದೆ ಬಂದು ಇನ್ನೊಬ್ಬರ ಬಾಳಿಗೆ ಬೆಳಕಾಗಿ. ಮರಣದ ನಂತರ ಮಣ್ಣಾಗುವ ನಮ್ಮ ಕಣ್ಣನ್ನು ಇನ್ನೊಬ್ಬರಿಗೆ ದಾನ ಮಾಡಿದಲ್ಲಿ ನಮ್ಮ ಕಣ್ಣು ಜೀವತವಾಗಿಯೇ ಉಳಿಯಲಿದೆ ಎಂದು ಹೇಳಿದರು. ಇದಕ್ಕೂ ಮೊದಲು ಬೆಳಿಗ್ಗೆ ನಗರದ ಸಿದ್ದೆÃಶ್ವರ ದೇವಸ್ಥಾನದಿಂದ ಆರಂಭಗೊಂಡ ೩೩ನೇ ರಾಷ್ಟಿçÃಯ ನೇತ್ರದಾನ ಪಾಕ್ಷಿಕ ಕಾರ್ಯಕ್ರಮ ಜನಜಾಗೃತಿ ರ‍್ಯಾಲಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಮಹೆಂದ್ರ ಎಮ್ ಕಾಪಸೆ ಹಾಗೂ ಕಾರ್ಯಕ್ರಮ ಅನುಷ್ಠಾನ ಅಧಿಕಾರಗಳಾದ ಡಾ.ರಾಜೇಶ್ವರಿ ಗೋಲಗೇರಿ ರವರು ಜಂಟಿಯಾಗಿ ಚಾಲನೆ ನೀಡಿದರು.
ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿಗಳಾದ ಡಾ. ಸುರೇಶ ಚವ್ಹಾಣ, ಡಾ.ಸಂಪತ್ತ ಗುಣಾರಿ, ಡಾ.ಜ್ಯೊÃತಿ ಪಾಟೀಲ, ಡಾ. ಮಲ್ಲನಗೌಡ ಪಾಟೀಲ ಡಾ. ಮೀನಾಕ್ಷಿ ಸೊಣ್ಣದ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ.ಕೆ.ಡಿ.ಗುಂಡಬಾವಡಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಸುರೇಶ ಹೊಸಮನಿ, ಜಿಲ್ಲೆಯ ನಗರ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು, ಭಾಗವಹಿಸಿದ್ದರು. ಸರ್ಕಾರಿ ನರ್ಸಿಂಗ್ ಶಾಲೆಯ ಮತ್ತು ವಿವಿದ ನರ್ಸಿಂಗ್ ಕಾಲೇಜಗಳ ಉಪನ್ಯಾಸಕರು ಹಾಗೂ ಬಾಲಕರು ಮತ್ತು ಅನುಗ್ರಹ ವ್ಹಿಜನ್ ಫೌಂಡೇಶನ ಟ್ರಸ್ಟ್ನ ವೈದ್ಯಾಧಿಕಾರಿಗಳು ಹಾಗೂ ಸಂಯೋಜಕರಾದ ದತ್ತಾ ಹಿರೇಮಠ, ಉಪನ್ಯಾಸಕರು ಮತ್ತು ವಿದ್ಯಾರ್ಥಿ/ನೀಯರು ಹಾಗೂ ಇಲಾಖೆಯ ಅಧಿಕಾರಿಗಳು, ಡಿ.ಕೆ.ತೇಲಿ, ಕುಮಾರ ರಾಠೋಡ, ಸಿಬ್ಬಂದಿಯವರು ಹಾಜರಿದ್ದರು.

loading...