ಪಂಚಮಸಾಲಿ ಸಮಾಜ ಭೂಮಿಯಷ್ಟು ಸಮಾದಾನ ತಾಳ್ಮೆಯುಳ್ಳದ್ದು : ಲಕ್ಷಿö್ಮÃ ಹೆಬ್ಬಾಳಕರ

0
15
loading...

ಹುನಗುಂದ-ಪಂಚಮಸಾಲಿ ಸಮಾಜ ಭೂಮಿಯಷ್ಟು ಸಮಾಧಾನ,ತಾಳ್ಮೆ,ಸ್ವಾಭಿಮಾನದ ಮೂಲಕ ಬದುಕನ್ನು ಸಾಗಿಸುವ ರೈತರ ಮಕ್ಕಳು ಇಂತಹ ಜನಾಂಗದ ಮೇಲೆ ಅನ್ಯಾಯ, ದಬ್ಬಾಳಿಕೆ ನಡೆಯುತ್ತಿರುವುದು ದುರಂತ ಸಂಗತಿಯಾಗಿದೆ ಎಂದು ಶಾಸಕಿ ಲಕ್ಷಿö್ಮ ಹೆಬ್ಬಾಳಕರ ಹೇಳಿದರು.
ಅವರು ತಾಲೂಕಿನ ಕೂಡಲಸಂಗಮದ ಸಭಾ ಭವನದಲ್ಲಿ ಲಿಂಗಾಯತ ಪಂಚಮಸಾಲಿ ಪೀಠದಿಂದ ನಡೆದ ೯ನೇ ಬಸವ ಪಂಚಮಿ ಹಾಗೂ ಸರ್.ಸಿದ್ದಪ್ಪ ಕಂಬಳಿ ರಾಜ್ಯ ಮಟ್ಟದ ಪಂಚಮಸಾಲಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತ ನಾನು ಭಕ್ತ ಭಂಡಾರಿ ಬಸವೇಶ್ವರ ತತ್ವ ಸಿದ್ದಾಂತದ ಮೇಲೆ ರಾಜಕಾರಣ ಮಾಡತ್ತಾ ಬಂದಿದ್ದು ಅದರ ಮೇಲೆ ಅಧಿಕಾರಕ್ಕೆ ಬಂದಿದ್ದೆÃನೆ.ಭೂಮಿಯಷ್ಟು ತಾಳ್ಮೆಯುಳ್ಳ ಈ ಸಮಾಜದ ನಾಕಯರಿಗೆ ತೊಂದರೆ ಕೊಟ್ಟರೆ ಸಹಿಸಿಕೊಳ್ಳುವ ಗುಣವಿದೆ ಆದರೆ ಒಂದು ಸಾರಿ ಪಂಚಮಸಾಲಿ ಸಮಾಜ ತಿರುಗಿ ನಿಂತರೆ ಒಂದು ಗತಿ ಕಾಣಸದೇ ಬಿಡುವುದಿಲ್ಲ ಎಂದು ಎದುರಾಳಿಗಳಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.ಅಸಹನೆ ನಮ್ಮ ಸಮಾಜದ ಯಾವ ನಾಯಕರಿಗಿಲ್ಲ ಎಷ್ಟೆÃ ಪರೀಕ್ಷೆ ಮಾಡಿದರೂ ನಾವೇನು ಅನ್ನುವುದಿಲ್ಲ.ಯಾಕಂದರೆ ನಮ್ಮ ಸಮಾಜ ನಮಗೆ ಸಂಸ್ಕೃತಿ ಸ್ವಾಭಿಮಾನ ಕಲಿಸಿದೆ ಹೊರತು ನಿಮ್ಮಂತೆ ಅಸೂಹೆ ದ್ವೆÃಷದ ಮನೋಭಾವನೆ ನಮಗಿಲ್ಲ.ನಮ್ಮ ಸಮಾಜವನ್ನು ಸ್ವಾಭಿಮಾನದಿಂದ ಕಟ್ಟೊÃಣ ಬೇರೆ ಸಮಾಜವನ್ನು ಸಮಾನತೆ ಗೌರವದಿಂದ ಕಾಣೋಣ.ನಮ್ಮ ಸಮಾಜದ ನಾಯಕರ,ಜನರ ಮೇಲೆ ಕೆಲವರು ನಿರಂತರ ದಬ್ಬಾಳಿಕೆ, ಶೋಷಣೆ ಮಾಡುತ್ತ ಬರುತ್ತಿದ್ದಾರೆ ಇಂತವರಿಗೆ ಸಂಘಟನೆಯ ಮೂಲಕ ಉತ್ತರ ಕೊಡುವ ಕಾರ್ಯವನ್ನು ಸಮಾಜ ಬಾಂಧವರು ಮಾಡಬೇಕು. ಇಲ್ಲಿಯವರೆಗೆ ನಡೆದ ಕೆಟ್ಟ ಘಟನೆಗಳನ್ನು ಮರೆಯಿರಿ ಆದರೆ ಯಾರಾದರೂ ನಮ್ಮಗೆ ಅನ್ಯಾಯ ಮಾಡಿದರೆ ಸಂಘಟನೆಯೊಂದಿಗೆ ಉತ್ತರ ಕೊಡುವ ಕಾರ್ಯಕ್ಕೆ ನಾವು ಸಿದ್ದರಾಗಬೇಕು ಎಂದರು.

ಜಿಲ್ಲಾ ಪಂಚಾಯತ ಅಧ್ಯಕ್ಷೆ ವೀಣಾ ಕಾಶಪ್ಪನವರ ಮಾತನಾಡಿ ಪಂಚಮಸಾಲಿ ಸಮಾಜದ ನಾಯಕರ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆ,ದೌರ್ಜನ್ಯಗಳನ್ನು ಸಮಾಜ ಬಾಂಧವರು ಅರಿಯಬೇಕು. ನಮ್ಮ ಸಮಾಜಕ್ಕೆ ಯಾರೆ ತೊಂದರೆ ಕೊಟ್ಟರು ಅದನ್ನು ವಿರೋಧಿಸುವ ಕಾರ್ಯವನ್ನು ಸಮಾಜ ಭಾಂದವರು ಮಾಡಬೇಕು. ದುಷ್ಟಶಕ್ತಿಗಳ ಅಟ್ಟಹಾಸ ಅಡಗಿಸಲು ಕೈಗೆ ಖಡ್ಗ ಹಿಡಿಯುವುದು ಅನಿವಾರ್ಯವಾಗಿದೆ.ನಮ್ಮ ಸಮಾಜದ ನಾಯಕರು ಕಿಂಗ್ ಆಗೋಣ ಹೊರೆತು ಕಿಂಗ್‌ಮೇಕರಲ್ಲ.ಸಮಾಜದ ಯುವಕರು ಶೈಕ್ಷಣಿಕ,ರಾಜಕೀಯವಾಗಿ ಮುಂದೆ ಬರಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ಮಾತನಾಡಿ ರಾಜಕೀಯ ಶಕ್ತಿ ಇಲ್ಲದೆ ಸಮಾಜ ಕಟ್ಟುವುದು ಅಸಾಧ್ಯ. ನಾವೆಲ್ಲರೂ ಸಮಾಜ ಸಂಘಟನೆಗೆ ನಿರಂತರ ದುಡಿಯುತ್ತೆವೆ. ಸಮಾಜದ ಯುವಕರು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದಾಗಲೇ ಆರ್ಥಿಕವಾಗಿ ಪ್ರಗತಿ ಸಾಧಿಸಲು ಸಾಧ್ಯ ಎಂದರು.

ಸಮಾರಂಭದಲ್ಲಿ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಧರಿಯಪ್ಪ ಸಾಂಗ್ಲಿಕರ, ತಾಲ್ಲೂಕಾ ಅಧ್ಯಕ್ಷ ಶೇಖರಪ್ಪ ಬಾದವಾಡಗಿ, ಪಿ.ಎನ್.ಪಾಟೀಲ, ಬಸವರಾಜ ಬಿಸಗುಪ್ಪಿ, ಶಿವಾನಂದ ಅಬ್ದುಲ್‌ಪುರ, ಮುಖಂಡರಾದ ರಾಜಶೇಖರ ಮೇಣಸಿನಕಾಯಿ, ಜಿ.ಜಿ.ಬಾಗೇವಾಡಿ, ರೋಹಿಣಿ ಪಾಟೀಲ, ಶಂಕರಗೌಡ ಪಾಟೀಲ, ರಾಜುಗೌಡ ಪಾಟೀಲ ಮುಂತಾದವರು ಇದ್ದರು. ವೀರೇಶ ವಾಲಿ ಪ್ರಾರ್ಥಿಸಿದರು. ಅವರೇಶ ನಾಗೂರ ಸ್ವಾಗತಿಸಿದರು, ಶರಣು ಪಾಟೀಲ ನಿರೂಪಿಸಿ, ವಂದಿಸಿದರು.

loading...