ಪಂದ್ಯಾವಳಿ ಮೂಲಕ ಒಗ್ಗಟ್ಟು ಮೂಡಲಿ

0
0
loading...

 

ಬಾಗಲಕೋಟೆ: ಯುವಕರು ಕ್ರಿಕೆಟ್ ಆಟದಲ್ಲಿ ಭಾಗವಹಿಸಿ ಸದೃಢ ಆರೋಗ್ಯ ಪಡೆಯಬೇಕು ಅರ್ಬನ್ ಕೋ ಆಪರೇಟಿವ್ ಅಧ್ಯಕ್ಷ ಜಯಂತ ಕುರಂದವಾಡ ಹೇಳಿದರು.
ಶನಿವಾರ ನಗರದ ಸಕ್ರಿ ಕಾಲೇಜ್ ಮೈದಾನದಲ್ಲಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ನಗರದಲ್ಲಿ ಸಂಘಟನೆಯಿಂದ ೨ನೇ ಬಾರಿ ಪಂದ್ಯಾವಳಿ ಆಯೋಜಿಸುತ್ತಿರುವುದು ಶ್ಲಾಘನೀಯವಾಗಿದೆ. ಪಂದ್ಯಾವಳಿ ಮೂಲಕ ಸಮಾಜದಲ್ಲಿ ಒಗ್ಗಟ್ಟು ಮೂಡಲಿ ಎಂದರು.

ವಿದ್ಯಾ ಪ್ರಸಾರಕ ಮಂಡಳದ ಕಾರ್ಯದರ್ಶಿ ಸಂದೀಪ ಕುಲಕರ್ಣಿ ಅಧ್ಯಕ್ಷತೆ ವಹಿಸಿ ಈ ಪಂದ್ಯಾವಳಿ ಮೂಲಕ ಬ್ರಾಹ್ಮಣ ಸಮಾಜದ ಯುವ ಕ್ರಿಕೆಟ್ ಆಟಗಾರರಿಗೆ ಪೆÇ್ರÃತ್ಸಾಹ ದೊರೆಯಲಿದೆ. ಪಂದ್ಯಾವಳಿ ಮೂಲಕ ಹೊಸ ಪ್ರತಿಭೆಗಳು ಹೊರ ಹೊಮ್ಮುವ ಮೂಲಕ ಸಾಧನೆ ಮಾಡಲಿ ಎಂದು ಹಾರೈಸಿದರು.
ವಿಕೆಎಸ್‌ಎಸ್ ಅಧ್ಯಕ್ಷ ರಾಮ ಮನಗೂಳಿ, ಕಾರ್ಯದರ್ಶಿ ಪವನ ಸೀಮಿಕೇರಿ, ಕಿರಣ ಕುಲಕರ್ಣಿ, ಸಂತೋಷ ಚಾವರೆ, ಸಂಚಾಲಕ ಸಂಜೀವ ಗುಡಿ, ಅನಂತ ಮಳಗಿ, ಬಾಸ್ಕರ ಮನಗೂಳಿ, ಡಾ.ಸುಜಯ ಹೆರಂಜಲ್, ಆನಂದ ಕಲಮಡಿ ಇತರರು ಇದ್ದರು.

ನಾಕ್‌ಔಟ್ ಮಾದರಿಯಲ್ಲಿ ನಡೆದ ಪಂದ್ಯಾವಳಿಯಲ್ಲಿ ಬಜರಂಗ ತಂಡ, ವಿಜಯಧ್ವಜ ತಂಡ, ನವನಗರ ಯುನೈಟೆಡ್ ತಂಡ ಹಾಗೂ ಪಾಂಚಜನ್ಯ ತಂಡಗಳು ಗೆಲುವು ಸಾಸಿ ಸೆಮಿಫೈನಲ್‌ಗೆ ಪ್ರವೇಶ ಪಡೆದವು. ಸೆ.೯ ರಂದು ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ನಡೆಯಲಿವೆ. ಹಿರಿಯ ತರಬೇತುದಾರ ರವಿ ಮುಗದುಮ್, ಮುಪ್ಪಯ್ಯ ಮುಪ್ಪಯ್ಯನವರ ಹಾಗೂ ರಾಕೇಶ ಅಂಪೈರ್‌ಗಳಾಗಿ ಕಾರ್ಯ ನಿರ್ವಹಿಸಿದರು.

loading...