ಪರಿಸರ ಜಾಗೃತಿ ಮೂಡಿಸುವುದು ಅವಶ್ಯ

0
0
loading...

ಕನ್ನಡಮ್ಮ ಸುದ್ದಿ-ಬಂಕಾಪುರ: ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಿಂದಲೇ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ ಎಂದು ಶಿಕ್ಷಣ ಸಂಯೋಜಕ ಪರಮೇಶ ಬಾರಂಗಿ ಹೇಳಿದರು.
ಪಟ್ಟಣದ ಖಾದ್ರಿಯಾ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಲಿಟಲ್ ಪ್ಲಾವರ್ ಶಾಲೆಯ ಆವರಣದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಸಸಿ ನೆಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಮಾನವನಿಗೆ ನೈಸರ್ಗಿಕ ಸಂಪತ್ತು ಅಮೂಲ್ಯವಾದ ಸಂಪತ್ತಾಗಿದ್ದು ಮಾನವ ಬದುಕಿರುವುದೇ ಮರ ಗಿಡಗಳು ಆಮ್ಲಜನಕದಿಂದ ಎಂಬುದನ್ನು ಯಾರು ಮರೆಯಬಾರದು. ಇಂದಿನ ದಿನಮಾನಗಳಲ್ಲಿ ಮನೆಗೊಂದು ಮರ ಊರಿಗೊಂದು ವನ ನಿರ್ಮಾಣದಿಂದ ಮಾನವ ಪರಿಶುದ್ಧವಾದ ಆಮ್ಲಜನಕವನ್ನು ಪಡೆದು ಆರೋಗ್ಯಮಯ ಜೀವನವನ್ನು ಸಾಗಿಸಬಹುದಾಗಿದೆ ಎಂದು ಹೇಳಿದರು.ಖಾದ್ರಿಯಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಕೆ.ಎಂ.ಬೊಮ್ಮನಹಳ್ಳಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಪರಿಸರ ಜಾಗೃತಿ ಮೂಡಿಸುವ ಮೂಲಕ ಆರೋಗ್ಯವಂತ ನಾಡು ನಿರ್ಮಾಣಕ್ಕೆ ಪ್ರತಿಯೊಬ್ಬರು ಕೈಜೋಡಿಸುವುದು ಅವಶ್ಯವಾಗಿದೆ ಎಂದು ಹೇಳೀದರು.
ಸಂಸ್ಥೆ ಕಾರ್ಯದರ್ಶಿ ಎಂ.ಎಂ.ಬೊಮ್ಮನಹಳ್ಳಿ, ಉಪಾಧ್ಯಕ್ಷ ಎಂ.ಆರ್.ಗುಲ್ಮಿ, ಜೆ.ಎಂ.ಪಟೇಲ್, ರೆಹಮಾನ ಖಾಜಾಪುರ ಪಟೇಲ್, ಮುಖ್ಯ ಶಿಕ್ಷಕಿ ರೇಣುಕಾ ಸಣ್ಣಪೂಜಾರ ಇದ್ದರು.

loading...