ಪರಿಸರ ಸ್ನೇಹಿ ತೆಂಗಿನಕಾಯಿ ಗಣಪತಿ ಮೂರ್ತಿ ಪೂಜಿಸಿ

0
0
loading...

ಕನ್ನಡಮ್ಮ ಸುದ್ದಿ-ಧಾರವಾಡ: ಇತ್ತೀಚಿನ ದಿನಗಳಲ್ಲಿ ಮನೆ ಮನೆಗಳಲ್ಲಿ ಗಣೇಶ ಹಬ್ಬಕ್ಕೆ ಪೂಜಿಸುª Àಗಣೇಶ ಪೂರ್ತಿ ಹೆಚ್ಚಿನದಾಗಿ ಪಿ.ಓ.ಪಿಯಿಂದ ಮಾಡಿದ್ದಾಗಿದ್ದು ಇದರಿಂದ ಪರಿಸರಕ್ಕೆ ಹಾನಿಯಾಗುವದನ್ನು ತಪ್ಪಿಸಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸ್ವ ಸಹಾಯ ಸಂಘದ ಸದಸ್ಯರಿಗೆ ಆಯೋಜಿಸಿದ್ದ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪರಿಸರಕ್ಕ ಹಾನಿಯಾಗದಂತೆ ಪರ್ಯಾಯ ವ್ಯವಸ್ಥೆಗಾಗಿ ಪರಿಸರ ಸ್ನೇಹಿ ತೆಂಗಿನಕಾಯಿ ಗಣಪತಿ ಮೂರ್ತಿ ಕೆತ್ತನೆ ಮಾಡಿಸಲಾಗಿದೆ ಅದನ್ನು ಪೂಜಿಸಬಹುದಾಗಿದೆ. ಮಾರುಕಟ್ಟೆಯಲ್ಲಿ ನಾನಾ ರೂಪದಲ್ಲಿಕಲಾತ್ಮಕವಾಗಿ ಗಣೇಶನ ಮೂರ್ತಿಗಳು ಲಭ್ಯವಾಗಲಿದ್ದು ಪರಿಸರ ಸ್ನೇಹಿ ತೆಂಗಿನಕಾಯಿ ಗಣಪತಿ ಕಲಾತ್ಮಕವಾದ ಗೃಹ ಕೈಗಾರಿಕೆಯಿಂದ ಮಾಡಿದ್ದಾಗಿದೆ. ಈ ಮೂರ್ತಿಯನ್ನು ಪೂಜಿಸಿದ ನಂತರ ಹೊಲದ ಬದುಗಳಲ್ಲಿ ನಾಟಿ ಮಾಡುವುದರ ಮೂಲಕ ತೆಂಗಿನಗಿಡ ಬೆಳೆಸಿ ಫಲ ಪಡೆಯಬಹುದು. ಉತ್ಸವಕ್ಕೆ ಮಾತ್ರವಲ್ಲದೇ ವರ್ಷ ಪೂರ್ತಿ ಸಂಘದ ಸದಸ್ಯರು ಗೃಹ ಕೈಗಾರಿಕೆ ಮಾಡಿ ವಿವಿಧ ಮಳಿಗೆಯಲ್ಲಿ ಮಾರಾಟ ಮಾಡಬಹುದು ಎಂದರು. ಗ್ರಾಮಾಭಿವೃದ್ಧಿ ಯೋಜನೆ ಧಾರವಾಡ ಪ್ರಾದೇಶಿಕ ನಿರ್ದೇಶಕ ಸೀತಾರಾಮ ಶೆಟ್ಟಿ, ಜಿಲ್ಲಾ ನಿರ್ದೇಶಕ ದಿನೇಶ್‌ ಎಂ, ಯೋಜನಾಧಿಕಾರಿ ಉಲ್ಲಾಸ್‌ ಮೇಸ್ತ, ಶ್ರೀಮತಿ ಶಾಂತಾಗಡಕರ ಉಪಸ್ಥಿತರಿದ್ದರು.

loading...