ಪಿಒಪಿ ಗಣೇಶಮೂರ್ತಿ ವಶಕ್ಕೆ

0
0
loading...

ಗುಳೇದಗುಡ್ಡ: ಪರಿಸರದ ಮೇಲಾಗುವ ಹಾನಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಪ್ಲಾಸ್ಟ್ರ್ ಆಫ್ ಪ್ಯಾರಿಸ್‌ನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ತಯಾರಿಸುವುದನ್ನು ನಿಷೇಧಿಸಿದ್ದು, ನಿಷೇಧ ಜಾರಿಯಲ್ಲಿದ್ದರೂ ಪಿಒಪಿಯಿಂದ ಗಣೇಶಮೂರ್ತಿಗಳನ್ನು ತಯಾರಿಸಿರುವ ಕೆಲವು ಅಂಗಡಿಗಳ ಮೇಲೆ ಸ್ಥಳೀಯ ಪುರಸಭೆ ಮುಖ್ಯಾಧಿಕಾರಿ ಯೇಸು ಬೆಂಗಳೂರು ಅವರ ನೇತೃತ್ವದಲ್ಲಿ ಬುಧವಾರ ದಾಳಿ ನಡೆಸಿದ ಪುರಸಭೆ ಸಿಬ್ಬಂದಿ, ವಿವಿಧೆಡೆಗಳಿಂದ ಸುಮಾರು ೭೮ ಪಿಒಪಿಯಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಾಧಿಕಾರಿ ಯೇಸು ಬೆಂಗಳೂರು, ಕಳೇದ ಜೂನ್ ಗಣೇಶಮೂರ್ತಿಗಳನ್ನು ತಯಾರಿಸುವವರ ಸಭೆ ನಡೆಸಿ, ಪಿಒಪಿ ಗಣೇಶ ಮೂರ್ತಿಗಳನ್ನು ತಯಾರಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು. ಆದರೂ ಕೆಲವರು ಪಿಒಪಿಯಿಂದ ಗಣೇಶಮೂರ್ತಿಗಳನ್ನು ತಯಾರಿಸಿದ್ದರಿಂದ ಸುಮಾರು ೧೧ ಜನರಿಗೆ ನೋಟಿಸ್ ನೀಡಿಲಾಗಿತ್ತು. ಆದರೂ ಪಿಒಪಿ ಗಣೇಶಮೂರ್ತಿಗಳನ್ನು ತಯಾರಿಸಿದ್ದರಿಂದ ದಾಳಿ ಮಾಡಿ ಪಿಒಪಿ ಮೂರ್ತಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

ದಾಳಿಯಲ್ಲಿ ಪುರಸಭೆ ಸಿಬ್ಬಂದಿ ರಮೇಶ ಪದಕಿ, ಶರಣಯ್ಯ ಸರಗಣಾಚಾರಿ, ಅಶೋಕ ಚಿಂದಿ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.

loading...