ಪುರಸಭೆ ಚುನಾವಣೆ: ಬಹುಮತ ಸಾಧಿಸಿದ ಬಿಜೆಪಿ

0
0
loading...

ಕನ್ನಡಮ್ಮ ಸುದ್ದಿ-ಕುಮಟಾ: ಇಲ್ಲಿನ ಪುರಸಭೆಯ 22 ವಾರ್ಡ್‍ಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಸೋಮವಾರ ಪಟ್ಟಣದ ಎಪಿಎಂಸಿಯಲ್ಲಿ ನಡೆದಿದ್ದು, ಬಿಜೆಪಿ ಬಹುಮತ ಸಾಧಿಸಿದೆ. 23 ವಾರ್ಡ್‍ಗಳ ಪೈಕಿ 2ನೇ ವಾರ್ಡ್‍ನಲ್ಲಿ ಕಾಂಗ್ರೆಸ್‍ನ ಲಕ್ಷ್ಮೀ ಗೊಂಡ ಅವಿರೋಧ ಆಯ್ಕೆಯಾಗಿದ್ದರು. ಹಾಗಾಗಿ 22 ವಾರ್ಡ್‍ಗಳಲ್ಲಿ ಚುನಾವಣೆ ನಡೆದಿದ್ದು, ಅದರಲ್ಲಿ 16 ವಾರ್ಡ್‍ಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ, ಕಾಂಗ್ರೆಸ್ 6 ವಾರ್ಡ್‍ಗಳಲ್ಲಿ ಮತ್ತು ಜೆಡಿಎಸ್ 1 ವಾರ್ಡ್‍ನಲ್ಲಿ ಗೆಲುವು ಸಾಧಿಸಿರುವುದರಿಂದ 23 ವಾರ್ಡ್‍ಗಳ ಪೈಕಿ 16 ವಾರ್ಡ್‍ಗಳಲ್ಲಿ ಗೆಲುವು ಸಾಧಿಸುವ ಮೂಲಕ ಕುಮಟಾ ಪುರಸಭೆಯ ಆಡಳಿತ ಬಿಜೆಪಿ ವಶವಾಗಿದೆ.
1ನೇ ವಾರ್ಡ್‍ನಿಂದ ಬಿಜೆಪಿಯ ಗೀತಾ ಮುಕ್ರಿ ಆಯ್ಕೆಯಾಗಿದ್ದಾರೆ. 2ನೇ ವಾರ್ಡ್‍ನಲ್ಲಿ ಕಾಂಗ್ರೆಸ್‍ನ ಲಕ್ಷ್ಮೀ ಗೊಂಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 3ನೇ ವಾರ್ಡ್‍ನಲ್ಲಿ ಬಿಜೆಪಿಯ ಸಂತೋಷ ನಾಯ್ಕ, 4ನೇ ವಾರ್ಡ್‍ನಲ್ಲಿ ಬಿಜೆಪಿಯ ತುಳಸು ಗೌಡ, 5ನೇ ವಾರ್ಡ್‍ನಲ್ಲಿ ಕಾಂಗ್ರೆಸ್‍ನ ವಿನಯಾ ವಿನು ಜಾರ್ಜ್, 6ನೇ ವಾಡ್‍ನಿಂದ ಬಿಜೆಪಿಯ ರಾಜೇಶ ಪೈ, 7ನೇ ವಾರ್ಡ್‍ನಿಂದ ಬಿಜೆಪಿಯ ಮೋಹಿನಿ ಗೌಡ, 8ನೇ ವಾರ್ಡ್‍ನಿಂದ ಬಿಜೆಪಿಯ ಅನುರಾಧಾ ಬಾಳೇರಿ, 9ನೇ ವಾರ್ಡ್‍ನಿಂದ ಬಿಜೆಪಿಯ ಟೋನಿ ರೊಡ್ರಗೀಸ್, 10ನೇ ವಾರ್ಡ್‍ನಿಂದ ಬಿಜೆಪಿಯ ಸುಶೀಲ ಗೋವಿಂದ ನಾಯ್ಕ, 11ನೇ ವಾರ್ಡ್‍ನಲ್ಲಿ ಬಿಜೆಪಿಯ ಸೂರ್ಯಕಾಂತ ಗೌಡ, 12ನೇ ವಾರ್ಡ್‍ನಿಂದ ಬಿಜೆಪಿಯ ಸುಮತಿ ಭಟ್, 13ನೇ ವಾರ್ಡ್‍ನಲ್ಲಿ ಬಿಜೆಪಿಯ ಅಭಿ ಚಂದ್ರಹಾಸ ನಾಯ್ಕ, 14ನೇ ವಾರ್ಡ್‍ನಿಂದ ಬಿಜೆಪಿಯ ಕಿರಣ ಅಂಬಿಗ, 15ನೇ ವಾರ್ಡ್‍ನಲ್ಲಿ ಕಾಂಗ್ರೆಸ್‍ನ ಎಂ ಟಿ ನಾಯ್ಕ, 16ನೇ ವಾರ್ಡ್‍ನಿಂದ ಬಿಜೆಪಿಯ ಪಲ್ಲವಿ ಮಡಿವಾಳ, 17ನೇ ವಾರ್ಡ್‍ನಿಂದ ಕಾಂಗ್ರೆಸ್‍ನ ಎ ಬಿ ಮುಲ್ಲಾ, 18ನೇ ವಾರ್ಡ್‍ನಲ್ಲಿ ಬಿಜೆಪಿಯ ಮಹೇಶ ನಾಯ್ಕ, 19ನೇ ವಾರ್ಡ್‍ನಿಂದ ಕಾಂಗ್ರೆಸ್‍ನ ಆಶಾ ನಾಯ್ಕ, 20ನೇ ವಾರ್ಡ್‍ನಿಂದ ಜೆಡಿಎಸ್‍ನ ಛಾಯಾ ವೆಂಗುರ್ಲೆಕರ್, 21ನೇ ವಾರ್ಡ್‍ನಿಂದ ಬಿಜೆಪಿಯ ಅನಿಲ ಹರ್ಬಲಕರ್, 22ನೇ ವಾರ್ಡ್‍ನಿಂದ ಬಿಜೆಪಿಯ ಶೈಲಾ ಗೌಡ, 23ನೇ ವಾರ್ಡ್‍ನಿಂದ ಕಾಂಗ್ರೆಸ್‍ನ ಲಕ್ಷ್ಮೀ ಚಂದಾವರ ಆಯ್ಕೆಯಾಗಿದ್ದಾರೆ.

ಮತ ಎಣಿಕೆ ಮುಗಿದ ಬಳಿಕ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿಗಳು ಶಾಸಕ ದಿನಕರ ಶೆಟ್ಟಿ ಅವರ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಿದಲ್ಲದೆ ಸಿಹಿ ವಿತರಿಸಿ ಸಂಭ್ರಮಿಸಿದರು. ಬಳಿಕ ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಭರ್ಜರಿ ಮೆರವಣಿಗೆ ನಡೆಸಿದರು.
ಅದರಂತೆ ಕಾಂಗ್ರೆಸ್‍ನ ಗೆದ್ದ 6 ಅಭ್ಯರ್ಥಿಗಳು ವಿಜಯೋತ್ಸವ ಆಚರಿಸಿದರು. ಗೆಲುವು ಸಾಧಿಸಿದ ಜೆಡಿಎಸ್‍ಯ ಛಾಯಾ ವೆಂಗುರ್ಲೆಕರ್ ಅವರು ತಮ್ಮ ಬೆಂಬಲಿಗರೊಂದಿಗೆ ಸಂಭ್ರಮಿಸಿದರು. ಒಟ್ಟಾರೆ ಕುಮಟಾ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದ್ದು, 23 ವಾರ್ಡ್‍ಗಳ ಪೈಕಿ 16 ವಾರ್ಡ್‍ಗಳಲ್ಲಿ ಗೆಲುವು ಸಾಧಿಸುವ ಮೂಲಕ ಕುಮಟಾ ಪುರಸಭೆಯ ಆಡಳಿತ ಬಿಜೆಪಿ ವಶಕ್ಕೆ ಪಡೆದಿದೆ.

loading...