ಪೆಸಿಫಿಕ್ ಕಡಲ್ಕೊಳಕ್ಕೆ ಬಿದ್ದ ವಿಮಾನ, 47ಪ್ರಯಾಣಿಕರು ಸೇಫ್

0
0
loading...

ಮಜುರೋ(ಮಾರ್ಷಲ್ ದ್ವೀಪ)- ಪ್ರಯಾಣಿಕರ ವಿಮಾನವೊಂದು ಪೆಸಿಫಿಕ್ ದ್ವೀಪದ ಕಡಲ್ಕೊಳಕ್ಕೆ ಬಿದ್ದಿದ್ದು, 35 ಯಾನಿಗಳೂ ಮತ್ತು 12 ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರನ್‍ವೇನಲ್ಲಿ ಹಾರುತ್ತಿದ್ದ ವಿಮಾನವು ಮಾರ್ಷಲ್ ದ್ವೀಪದ ಮಜುರೋ ಬಳಿ ಹಠಾತ್ ನಾಪತ್ತೆಯಾಯಿತು. ಕೆಲ ನಿಮಿಷಗಳ ಬಳಿಕ ವಿಮಾನವು ಚೂಕ್ ಲ್ಯಾಗೂನ್‍ಗೆ (ಕಡಲ್ಕೊಳ ಅಥವಾ ದ್ವೀಪಗಳ ನಡುವೆ ನಿಂತ ನೀರನ ಕೊಳ) ಬಿದ್ದು ಮುಳುಗಳು ಆರಂಭಿಸಿತು. ಸುದ್ದಿ ತಿಳಿದ ಕೂಡಲೇ ದೋಣಿಗಳೊಂದಿಗೆ ದುರ್ಘಟನೆ ಸ್ಥಳಕ್ಕೆ ಧಾವಿಸಿದ ರಕ್ಷಣಾ ಕಾರ್ಯಕರ್ತರು 35 ಪ್ರಯಾಣಿಕರು ಮತ್ತು 12 ಸಿಬ್ಬಂದಿಯನ್ನು ರಕ್ಷಿಸಿದರು.

loading...