ಪೌಷ್ಠಿಕ ಆಹಾರಕ್ಕಾಗಿ ತಾಯಂದಿರು ಸಹಕರಿಸಿ: ವೀರಭದ್ರಯ್ಯ

0
0
loading...

ಪೌಷ್ಠಿಕ ಆಹಾರಕ್ಕಾಗಿ ತಾಯಂದಿರು ಸಹಕರಿಸಿ: ವೀರಭದ್ರಯ್ಯ
ಕನ್ನಡಮ್ಮ ಸುದ್ದಿ-ಸವದತ್ತಿ: ದೇಶದ ಅಭಿವೃದ್ದಿಗೆ ಜನಸಂಖ್ಯೆಯು ಒಂದು ಮೂಲವಾಗಿದೆ ಜನಸಾಮಾನ್ಯರು ಆರೋಗ್ಯವಂತರಾಗಿರಲು ಹೆಚ್ಚು ಪ್ರಮಾಣದಲ್ಲಿ ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳುವುದು ಹಾಗೂ ಸಾವಯವ ಆಹಾರವನ್ನು ಸೇವಿಸುವುದು ಅವಶ್ಯವಾಗಿದೆ ಎಂದು ನ್ಯಾಯಾಧೀಶ ಸಿ ವೀರಭದ್ರಯ್ಯ ಹೇಳಿದರು.
ಮಂಗಳವಾರ ತಾಲೂಕಾ ಪಂಚಾಯತ ಸಬಾಭವನದಲ್ಲಿ ಪೌಷ್ಠಿಕ ಆಹಾರ ಸಪ್ತಾಹ ಮತ್ತು ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಚಾಲನೆ ನೀಡಿ ಮಾತನಾಡಿದ ಅವರು
ಸದ್ಯದ ಪರಿಸ್ಥಿತಿಯಲ್ಲಿ ಎಲ್ಲರಲ್ಲೂ ಅಪೌಷ್ಠಿಕತೆ ಮನೆ ಮಾಡಿದ್ದು ಅದನ್ನು ದೂರ ಪಡಿಸಲು ಮತ್ತು ಗರ್ಭಿಣಿಯರಲ್ಲಿ ಪೌಷ್ಠಿಕತೆ ಹೆಚ್ಚಿಸುವ ದೃಷ್ಠಿಯಿಂದ ಇಂಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಮತ್ತು ತಾಯಂದಿರಿಗೆ ಸರಕಾರ ಎಲ್ಲ ರೀತಿಯ ಸಹಾಯ ಮಾಡುತ್ತಿವೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ನ್ಯಾಯಾಧೀ ಶೆÀ ಹೇಮಶ್ರಿÃ. ಡಿ. ರವರು ಜನರು ತಮ್ಮ ದೈನಂದಿನ ಜೀವನಲ್ಲಿ ಸರಿಯಾದ ಆಹಾರವನ್ನು ಪಡೆದಾಗ ಒಬ್ಬ ವ್ಯಕ್ತಿಯ ಸರಿಯಾದ ಆರೋಗ್ಯವನ್ನು ಪಡೆಯಲು ಸುಲಭವಾಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಉತ್ತಮವಾದ ಪೌಷ್ಠಿಕ ಆಹಾರವನ್ನು ಸೇವಿಸುವುದು ಆರೋಗ್ಯಕ್ಕೆ ಸಹಾಯಕಾರಿಯಾಗಿದೆ ಹಾಗೂ ತಮ್ಮ ದೇಹಕ್ಕೆ ಪೋಷಣೆಯನ್ನು ಹೆಚ್ಚಿಸಲು ಪೌಷ್ಠಿಕ ಆಹಾರದ ಅವಶ್ಯಕತೆ ಇದೆ ಎಂದು ಹೇಳಿದರು .
ಅಧ್ಯಕ್ಷತೆ ಭಾಷಣ ಮಾಡಿದ ತಾಲೂಕ ಪಂಚಾಯತ ಸಹಾಯಕ ನಿರ್ದೇಶಕರಾದ ಪ್ರವೀಣ ಸಾಲಿ ರವರು ಸದ್ಯದÀ ಪರಿಸ್ಥಿತಿಯಲ್ಲಿ ಜನರು ಜಾಹಿರಾತುಗಳಿಗೆ ಮೋರೆ ಹೋಗಿ ಚಾರ್ಟಗಳಂತಹ ಆಹಾರವನ್ನು ಸೇವಿಸಿ ತಮ್ಮ ಆರೋಗ್ಯ ತಾವೇ ಹಾಳು ಮಾಡಿಕೊಲ್ಳುತ್ತಿದ್ದಾರೆ ಆದರಿಂದ ಎಲ್ಲರೂ ಸಾವಯವ ಹಾಗೂ ಉತ್ತಮ ಪೌಷ್ಠಿಕಾಂಶಗಳಿರುವ ಆಹಾರದ ಕಡೆಗೆ ಹೆಚ್ಚುಇ ಗಮನ ಹರಿಸಬೇಕು ಗರ್ಭಿಣಿ ಸ್ತಿçà ಆರೋಗ್ಯದ ಬಗ್ಗೆ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಸಲಹೆ ಸೂಚನೆಯಗಳನ್ನು ಒದಗಿಸುವುದರಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿತ್ತಿದ್ದಾರೆ ಎಂದು ಹೇಳಿಸರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ, ಸರಕಾರಿ ಅಭಯೋಜಿಕಿಯರಾದ ಎಸ್.ಎನ್.ಪಾಟೀಲ, ನ್ಯಾಯವಾದಿ ಎಮ್.ಎಸ್.ವಂಟಮುರಿ, ಉಪಸ್ಥಿತರಿದ್ದರು. ಕಾರ್ಯಕ್ರಮ ಪ್ರಾರಂಭದಲ್ಲಿ ಶಿಶು ಅಭಿವೃದ್ಧಿಯೋಜನಾಧಿಕಾರಿ ಪಿ.ಎಸ್. ಹುಲ್ಲತ್ತಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಧುರಿ ಬಡಿಗೇರ ನಿರೂಪಿಸಿದರು, ಆರ್.ಸಿ.ರಾಮದುರ್ಗ ವಂದಿಸಿದರು.

loading...