ಪೌಷ್ಠಿಕ ಆಹಾರ ಸೇವನೆಯಿಂದ ಉತ್ತಮ ಆರೋಗ ಸಾಧ್ಯ: ಆನಂದ

0
0
loading...

ವಿಜಯಪುರ: ಪೌಷ್ಠಿಕ ಆಹಾರ ಸೇವನೆಯಿಂದ ಗರ್ಭದಲ್ಲಿರುವ ಶಿಶು, ಬಾಣಂತಿಯರು ಉತ್ತಮ ಆರೋಗ್ಯ ಕಂಡುಕೊಳ್ಳಲು ಸಾಧ್ಯ ಎಂದು ಸಿಡಿಪಿಓ ಡಾ.ಆನಂದ ದೇವರನಾವದಗಿ ಹೇಳಿದರು.
ಆದರ್ಶನಗರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಪ್ರಧಾನಮಂತ್ರಿ ಮಾತೃವಂದನಾ ಸಪ್ತಾಹ ಮತ್ತು ವಿಶ್ವ ಪೌಷ್ಠಿಕ ಆಹಾರ ಸಪ್ತಾಹದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪೌಷ್ಠಿಕ ಆಹಾರ ಸೇವನೆ ಆರೋಗ್ಯದ ಮಹತ್ವದ ಸೂತ್ರ. ಈ ನಿಟ್ಟಿನಲ್ಲಿ ಗರ್ಭೀಣಿ, ಬಾಣಂತಿಯರ ಆರೋಗ್ಯ ರಕ್ಷಣೆ ದೃಷ್ಟಿಯಿಂದಲೇ ಸರ್ಕಾರ ಈ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಪ್ರತಿಯೊಬ್ಬರು ಪೌಷ್ಠಿಕ ಆಹಾರದ ಮಹತ್ವ ಅರಿಯಬೇಕು, ಉತ್ತಮ ಆರೋಗ್ಯ ಕಂಡುಕೊಳ್ಳಬೇಕು ಎಂದು ಕರೆ ನೀಡಿದರು.

ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ಅನ್ನಪೂರ್ಣ ಕುಬಕಡ್ಡಿ ಅವರು, ಗರ್ಭೀಣಿ ಹಾಗೂ ಬಾಣಂತಿಯರ ಆರೋಗ್ಯ ದೃಷ್ಟಿಯಿಂದ ಕೈಗೊಳ್ಳಬೇಕಾದ ಆರೋಗ್ಯ ಸಲಹೆಗಳ ಕುರಿತು ಮಾಹಿತಿ ನೀಡಿದರು.

ವೈದ್ಯಾಧಿಕಾರಿ ರೇಷ್ಮಾ ಪರ್ವೀನ್, ಮೇಲ್ವಿಚಾರಕಿಯರಾದ ಅಶ್ವಿನಿ ಸನದಿ, ಶಹನಾಜಬೆಗಂ ಹೈದರಖಾನ, ಗಂಗೂಬಾಯಿ ರಾಠೋಡ, ಅಂಗನವಾಡಿ ಕಾರ್ಯಕರ್ತೆಯರು, ಗರ್ಭಿಣಿ, ಬಾಣಂತಿಯರು ಪಾಲ್ಗೊಂಡಿದ್ದರು.

loading...