ಪ್ರಮುಖ ರಸ್ತೆಯಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲು ಮನವಿ

0
0
loading...

 

ವಿಜಯಪುರ: ನಗರದ ಮುಖ್ಯ ವೃತ್ತಗಳಲ್ಲಿ ಹಾಗೂ ರಸ್ತೆಯ ಮದ್ಯದಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸುವಂತೆ ಆಗ್ರಹಿಸಿ ಡಾ. ಅಂಬೇಡ್ಕರ್ ಸ್ವತಂತ್ರ ಸೇನೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಎಸ್.ಬಿ ಶೆಟ್ಟಣ್ಣವರ ಅವರಿಗೆ ಮನವಿ ಸಲ್ಲಿಸಲಾಯಿತು.
ವಿಜಯಪುರದಲ್ಲಿ ಹಲವಾರು ಹಬ್ಬ ಹರಿದಿನಗಳು ಆಚರಣೆ ಮಾಡುತ್ತಿದ್ದು, ಅವುಗಳಲ್ಲಿ ಮುಖ್ಯವಾಗಿ ಮೊಹರಂ ಹಾಗೂ ಗಣೇಶೋತ್ಸವ ಹಬ್ಬಗಳನ್ನು ಬಹಳ ವಿಜೃಂಬಣೆಯಿಂದ ಹಾಗೂ ಶಾಂತಿಯುತವಾಗಿ ಆಚರಣೆ ಮಾಡುತ್ತಾರೆ. ಈ ಸಮಯದಲ್ಲಿ ಯಾವುದೇ ಅಹಿತರಕರ ಘಟನೆಗಳು ಜರುಗದಂತೆ ವಿಜಯಪುರ ನಗರದ ಪ್ರಮುಖ ವೃತ್ತಗಳಲ್ಲಿ ಸಿ.ಸಿ. ಟಿ.ವಿ. ಕ್ಯಾಮೆರಾ ಅಳವಡಿಸಬೇಕು ಎಂದು ರಾಜ್ಯಾಧ್ಯಕ್ಷ ವಿಠ್ಠಲ ವಡ್ಡರ ಆಗ್ರಹಿಸಿದರು.
ರಾಜ್ಯ ಉಪಾಧ್ಯಕ್ಷ ಖಾಲೀದ ಹುಸೇನ ಮಾತನಾಡಿ, ಈ ಹಬ್ಬಗಳಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸಿ.ಸಿ.ಟಿ. ಕ್ಯಾಮೆರಾ ಅಳವಡಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ಕಾರ್ಯಾಧ್ಯಕ್ಷ ಮತೀನ ಕುಮಾರ, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರವೀಣ ನಾಟೀಕಾರ, ಸೋಹೇಬ ಮುಲ್ಲಾ, ಆಸೀಪ ನದಾಫ, ವಿಶಾಲ ನಾಟೀಕಾರ, ಯೂನೂಸಖಾನ, ಆರೀಫ ಮುಂತಾದವರು ಉಪಸ್ಥಿತರಿದ್ದರು.

loading...