ಬದ್ಧತೆಯಿಂದ ಕಾರ್ಯನಿರ್ವಹಿಸಿದರೆ ಯಶಸ್ವಿ ಎಂಜಿನಿಯರ್ ಆಗಲು ಸಾಧ್ಯ: ಹೆಗಡೆ

0
0
loading...

ಆಲಮಟ್ಟಿ: ಆಲಮಟ್ಟಿ ಜಲಾಶಯದ ಬಲಭಾಗದ ಸೀತಿಮನಿಯಲ್ಲಿ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ (ಕೆಎಸ್‌ಐಎಸ್‌ಎಫ್)ಯ ಕಚೇರಿಯಲ್ಲಿ ಎಂಜಿನಿರ‍್ಸ್ ಡೇ ಶನಿವಾರ ಆಚರಿಸಲಾಯಿತು. ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿರುವ ಕೆಬಿಜೆಎನ್‌ಎಲ್ ಸಹಾಯಕ ಎಂಜಿನಿಯರ್ ಎಚ್.ಸಿ. ನರೇಂದ್ರ, ಖಾಸಗಿ ಎಂಜಿನಿಯರ್ ಸದಾನಂದ ಹೆಗಡೆ ಕೆಎಸ್‌ಐಎಸ್‌ಎಫ್ ವತಿಯಿಂದ ಕೆಎಸ್‌ಐಎಸ್‌ಎಫ್ ಆಲಮಟ್ಟಿ ಘಟಕದ ಮುಖ್ಯಸ್ಥ ಈರಣ್ಣ ವಾಲಿ ಸನ್ಮಾನಿಸಿದರು. ಸನ್ಮಾನ ಸ್ವಿÃಕರಿಸಿ ಮಾತನಾಡಿದ ಎಚ್.ಸಿ. ನರೇಂದ್ರ, ದೂರದೃಷ್ಠಿ, ದಕ್ಷತೆ ಹಾಗೂ ಬದ್ಧತೆಯಿಂದ ಕಾರ್ಯನಿರ್ವಹಿಸಿದರೆ ಮಾತ್ರ ಯಶಸ್ವಿ ಎಂಜಿನಿಯರ್ ಆಗಲು ಸಾಧ್ಯ ಎಂದರು.

ಪ್ರತಿಯೊಂದು ಸರ್ಕಾರದ ಯೋಜನೆ ಅನುಷ್ಠಾನಗೊಳಿಸುವಾಗ ದೂರದೃಷ್ಠಿಯಿಂದ ಮಾತ್ರ ಮುಂದೆ ಆಗುವ ತಾಂತ್ರಿಕ ತೊಂದರೆಗಳು ಗೊತ್ತಾಗಲಿವೆ, ಸಿವಿಲ್ ಕ್ಷೆÃತ್ರದಲ್ಲಿ ಈಗ ಸಾಕಷ್ಟು ಬದಲಾವಣೆಗಳಾಗುತ್ತಿವೆ, ಆ ಬದಲಾವಣೆಗಳಿಗೆ ನಾವು ಹೊಂದಾಣಿಕೆ ಮಾಡಿಕೊಂಡರೆ ಮಾತ್ರ ಯಶಸ್ಸು ಸಾಧ್ಯ ಎಂದರು. ಕೆಎಸ್‌ಐಎಸ್‌ಎಫ್ ಆಲಮಟ್ಟಿ ಘಟಕದ ಮುಖ್ಯಸ್ಥ ಈರಣ್ಣ ವಾಲಿ ಮಾತನಾಡಿ, ಆಲಮಟ್ಟಿ ಜಲಾಶಯದ ಭದ್ರತೆಗೆ ನಿಯೋಜನೆಗೊಂಡಿರುವ ಸರ್ಕಾರದ ಕೆಎಸ್‌ಐಎಸ್‌ಎಫ್ ಘಟಕ, ಆಲಮಟ್ಟಿ ಕೆಬಿಜೆಎನ್‌ಎಲ್ ಅಧಿಕರಿಗಳ ಸಂಯೋಜನೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದೆÃವೆ, ಅಣೆಕಟ್ಟು ಸುರಕ್ಷತೆಯ ತಾಂತ್ರಿಕ ಕಾರ್ಯನೆರವೇರಿಸುತ್ತಿರುವ ಹಾಗೂ ಭದ್ರತೆಗೆ ಸಾಕಷ್ಟು ಸಲಹೆ ನೀಡುವ ನರೇಂದ್ರ ಹಾಗೂ ಸಮಾಜಮುಖಿ ಕಾರ್ಯಗಳ ಜೊತೆ ಗುಣಮಟ್ಟ ಕಾಮಗಾರಿ ನಿರ್ವಹಿಸುತ್ತಿರುವ ಖಾಸಗಿ ಕಂಪನಿಯ ಎಂಜಿನಿಯರ್ ಸದಾನಂದ ಹೆಗಡೆ ಅವರನ್ನು ಸನ್ಮಾನಿಸುತ್ತಿರುವುದು ನಮ್ಮ ಹೆಮ್ಮೆ ಎಂದರು. ಪಿಎಸ್‌ಐ ಶಿವಲಿಂಗ ಕುರೆನ್ನವರ, ಎಎಸ್‌ಐ ಗಾಳಪ್ಪಗೋಳ ಇತರರು ಇದ್ದರು.

loading...