ಬಯಲು ಶೌಚ ಮುಕ್ತ ದೇಶ ಮಾಡಿ: ಸಚಿವ ರಮೇಶ

0
0
loading...

ವಿಜಯಪುರ: ದೇಶವು ಸ್ವಚ್ಛವಾಗಿದ್ದರೆ ಸಮಸ್ತ ಜನರು ಆರೋಗ್ಯವಂತವಾಗುತ್ತಾರೆ ಎಂದು ನಂಬಿದ್ದ ಮಹಾತ್ಮಾ ಗಾಂಧೀಜಿಯವರ ಕನಸನ್ನು ನನಸಾಗಿಸಿ ದೇಶವನ್ನು ಬಯಲು ಶೌಚ ಮುಕ್ತ ದೇಶವನ್ನಾಗಿ ಮಾಡಲು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ನಮ್ಮ ಸರ್ಕಾರ ಕಂಕಣಬದ್ಧವಾಗಿದೆ ಎಂದು ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆ ಸಚಿವ ರಮೇಶ ಜಿಗಜಿಣಗಿ ಹೇಳಿದರು.
ಸಿಂದಗಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ಜಿಲ್ಲಾ ಪಂಚಾಯತ್, ತಾಲೂಕಾ ಪಂಚಾಯತ್ ಸಿಂದಗಿ ಹಾಗೂ ಗ್ರಾಮ ಪಂಚಾಯತ್ ಕೊಕಟನೂರ ಇವರ ಸಹಯೋಗದಲ್ಲಿ ಆಯೋಜಿಸಿದ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಹಾತ್ಮ ಗಾಂಧೀಜಿಯವರು ಸ್ವಚ್ಛ ಹಾಗೂ ಸುಂದರ ದೇಶದ ಕನಸು ಕಂಡಿದ್ದರು. ಅವರ ಸ್ವಚ್ಛ ಭಾರತ ಕನಸನ್ನು ಸಾಕಾರಗೊಳಿಸಲು ಕೇಂದ್ರ ಸರ್ಕಾರ ಶ್ರಮಿಸುತ್ತಿದೆ. ಕೇವಲ ಸರ್ಕಾರದ ಯೋಜನೆಯಾಗಿದ್ದ ಸ್ವಚ್ಛತಾ ಕಾರ್ಯಕ್ರಮವನ್ನು ಗಂಭೀರವಾಗಿ ಪರಿಗಣಿಸಿದ ಪ್ರಧಾನಿ ನರೇಂದ್ರ ಮೋದಿಯವರು ಹೊಸ ಆವಿಷ್ಕಾರ, ಹೊಸ ತಂತ್ರಜ್ಞಾನ, ಹೊಸ ಸಂಶೋಧನೆಗಳ ಮೂಲಕ ಸ್ವಚ್ಛ ಭಾರತ ಅಭಿಯಾನ ಕೈಗೊಳ್ಳಲಾಗಿದೆ. ಅದರಲ್ಲೂ ಶಾಲಾ ಬಾಲಕಿಯರ ಜಾಗೃತಿ ಅಭಿಯಾನ ಶ್ಲಾಘನೀಯವಾಗಿದ್ದು, ಈ ಯೋಜನೆಯು ಜನ ಆಂದೋಲನವಾಗಿ ರೂಪುಗೊಂಡಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಶೇ.೮೪.೨೭ ರಷ್ಟು ಶೌಚಾಲಯ ಸೌಲಭ್ಯ ಕಲ್ಪಿಸಲಾಗಿದೆ. ೨೦೧೪ ರಿಂದ ಈವರೆಗೆ ೧.೪೧ ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ೧೧೮ ಗ್ರಾಮಗಳನ್ನು ಬಯಲು ಶೌಚ ಮುಕ್ತ ಪ್ರದೇಶಗಳೆಂದು ಘೊಷಿಸಲಾಗಿದೆ. ಜಿಲ್ಲೆಯಲ್ಲಿ ಆದ್ಯತೆ ಮೇಲೆ ಸ್ವಚ್ಛ ಭಾರತ ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ಕೇವಲ ಶೌಚಾಲಯಗಳನ್ನು ನಿರ್ಮಿಸಿದೆ ಬಳಕೆ ಕುರಿತು ಸಾರ್ವಜನಿಕರನ್ನು ಪ್ರೆÃರೇಪಿಸಬೇಕು ಎಂದು ಹೇಳಿದರು.
ಕಳೆದ ೨೦೧೭ರಿಂದ ಆರಂಭಗೊಂಡ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮ ಆರಂಭಿಸಿದ್ದು, ಈ ವರ್ಷವೂ ಸೆ.೧೫ ರಿಂದ ಅಕ್ಟೊÃಬರ್೨ ರವರೆಗೆ ಆಯೋಜಿಸಿ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಾರ್ವಜನಿಕರಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಸಿಇಒ ವಿಕಾಸ ಸುರಳಕರ, ಕನ್ನೊಳ್ಳಿ ಜಿ.ಪಂ ಸದಸ್ಯ ಭುವನೇಶ್ವರಿ ಬಗಲಿ, ಕೊಕಟನೂರ ತಾ.ಪಂ ಸದಸ್ಯೆ ಸೋನುಬಾಯಿ, ಗ್ರಾಮಪಂಚಾಯತ್ ಅಧ್ಯಕ್ಷೆ ರಜಾಕಬಿ ಮುಲ್ಲಾ, ಜಿ.ಪಂ ಉಪಕಾರ್ಯದರ್ಶಿ ದುರಗೇಶ ರುದ್ರಾಕ್ಷಿ, ಮಾಜಿ ಶಾಸಕ ರಮೇಶ ಭೂಸನೂರ ಇತರರು ಉಪಸ್ಥಿತರಿದ್ದರು. ರಾಜಶೇಖರ ಧೈವಾಡಿ ನಿರೂಪಿಸಿದರು. ಕ್ಷೆÃತ್ರ ಶಿಕ್ಷಣಾಧಿಕಾರಿ ಆರೀಫ್ ವಂದಿಸಿದರು.

loading...