ಬಸನಗೌಡ ಯತ್ನಾಳ ಸರಿಯಾಗಿ ಮಾತನಾಡಲಿ: ಎಂ.ಬಿ ಪಾಟೀಲ

0
0
loading...

 

ವಿಜಯಪುರ: ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದ್ದಕ್ಕೆಲ್ಲ ಉತ್ತರ ಕೊಡಲಾಗುವುದು. ಅವರು ಮಾತನಾಡುವಾಗ ನನ್ನ ಪರ್ಮಿಶನ್ ಕೇಳುವುದು ಅಗತ್ಯವಿಲ್ಲ. ಆದರೆ ಮಾತನಾಡುವುದು ಸರಿಯಾಗಿ ಮಾತನಾಡಬೇಕು ಎಂದು ಎಂದು ಮಾಜಿ ಸಚಿವ ಎಂ.ಬಿ ಪಾಟೀಲ ತಿರುಗೇಟು ನೀಡಿದರು.
ವಿಜಯಪುರ ಬಾಗಲಕೋಟೆ ಅವಳಿ ಜಿಲ್ಲೆಯ ಸ್ಥಳೀಯ ಸಂಸ್ಥಗಳ ಕ್ಷೆÃತ್ರದ ವಿಧಾನ ಪರಿಷತ್ ಉಪಚುನಾವಣೆಯಲ್ಲಿ ಮತ ಚಲಾಯಿಸಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದಡಿu.

ಬಿಜೆಪಿ ಕೇಲ ನಾಯಕರು ಕಾಂಗ್ರೆಸ್ ಜೆಡಿಎಸ್ ಸಮಿಶ್ರ ಸರ್ಕಾರಕ್ಕೆ ಉರುಳಿಸಲು ಆಪರೇಷನ್ ಕಮಲ ಮಾಡಿ, ಬಿಜೆಪಿ ಸರ್ಕಾರ ರಚನೆ ಮಾಡುವ ಹಗಲಗನಸು ಕಾಣುತ್ತಿದ್ದಾರೆ. ಹಗಲಗನಸು ನಿಜವಾಗಲ್ಲ. ಆಪರೇಷನ್ ಕಮಲಕ್ಕೆ ಕಾಂಗ್ರೆಸ್-ಜೆಡಿಎಸ್ ಯಾವ ಶಾಸಕರು ಬಲಿಯಾಗುದಿಲ್ಲ. ಸಮಿಶ್ರ ಸರ್ಕಾರ ಆಡಳಿತ ಐದು ವರ್ಷ ಸಂಪೂರ್ಣ ನಿರ್ವಹಿಸಲಿದೆ ಎಂದು ತಿಳಿಸಿದರು.

ಬೆಳಗಾವಿಯಲ್ಲಿ ಹೆಬ್ಬಾಳ್ಕರ್-ಜಾರಕಿಹೊಳಿ ನಡುವಿನ ಕಿತ್ತಾಟಕ್ಕೆ ಪ್ರತಿಕ್ರಿಯೆ ನೀಡಿದ ಎಂ.ಬಿ ಪಾಟೀಲ. ಸಚಿವ ರಮೇಶ ಜಾರಕಿಹೊಳಿಹಾಗೂ ಶಾಸಕಿ ಲಕ್ಷಿö್ಮ ಹೆಬ್ಬಾಳ್ಕರ ನಡವಿನ ರಾಜಕೀಯ ಬೆಳವಣಿಗೆಯಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಅಲ್ಲಿ ನಡೆದ ರಾಜಕೀಯ ವಿಚಾರದಲ್ಲಿ ನಾವು ಯಾರು ಹಸ್ತಕ್ಷೆÃಪ ಮಾಡುವುದಿಲ್ಲ. ಜಾರಕಿಹೊಳಿ ಅವರೇ ಹೇಳಿದ್ದಾರೆ. ನಮ್ಮ ವಿಷಯಕ್ಕೆ ಯಾರು ಹಸ್ತಕ್ಷೆÃಪ ಮಾಡಬಾರದು ಹೇಳಿದ್ದಾರೆ ಎಂದರು.
ಎಲ್ಲ ಪಕ್ಷದಲ್ಲಿವೂ ಸಣ್ಣಪುಟ್ಟ ವಿಚಾರಗಳು ಇದ್ದೆÃ ಇರುತ್ತದೆ. ಬಿಜೆಪಿಯಲ್ಲಿ ಕೆ.ಎಸ್ ಈಶ್ವರಪ್ಪ ವಿರುದ್ಧ ಬಿ.ಎಸ್ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ ವಿರುದ್ಧ ಸದಾನಂಡ ಗೌಡರ ಹೇಗೆ ಗದ್ದಲ ಇತ್ತು ಹಾಗೇ ಇದು ಸಣ್ಣಪುಟ್ಟ ಮನಸ್ತಾಪ ಇರುವುದು ಸಹಜ. ಈ ಸಮಸ್ಯೆಯನ್ನು ಅಧ್ಯಕ್ಷ ದಿನೇಶ ಗೂಂಡುರಾವ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಬಗೆ ಹರಿಸಲಿದ್ದಾರೆ ಎಂದು ಎಂ.ಬಿ ಪಾಟೀಲ ಹೇಳಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಯೂರೋಪ ಪ್ರವಾಸ ಎರಡು ತಿಂಗಳ ಮುಂಚೆ ನಿಗಧಿಯಾಗುತ್ತು. ಅನಿವಾರ್ಯ ಕಾರಣದಿಂದ ಯೂರೋಪ ಪ್ರವಾಸಕ್ಕೆ ಹೋಗಬೇಕಾಗಿತ್ತು. ಅದಕ್ಕೆ ಹೋಗಿದ್ದಾರೆ. ಅವರ ಒಂದು ಓಟ ಬದಲಿಗೆ ನೂರ ಓಟ ಹಾಕಿಸುತ್ತೆÃನೆ ಎಂದು ಹೇಳಿದ್ದರು. ನಿರೀಕ್ಷೆಂತೆ ಸುನೀಲಗೌಡರು ಗೆಲುವು ಆಗಲಿದೆ ಎಂದು ತಿಳಿಸಿದರು.

loading...