ಬಸವ ಐಕ್ಯ ಮಂಟಪದ ಬಳಿ ಹೋಮ ಹವನ ಮಾಡಿದ್ದನ್ನು ಖಂಡಿಸಿ ಮನವಿ

0
0
loading...

ವಿಜಯಪುರ: ಕೂಡಲ ಸಂಗದ ಬಸವ ಐಕ್ಯ ಮಂಟಪದ ಬಳಿ ಹೋಮ ಹವನ ಮಾಡಿದ್ದನ್ನು ಖಂಡಿಸಿ ವಿಜಯಪುರದಲ್ಲಿ ರಾಷ್ಟಿçÃಯ ಬಸವ ಸೈನ್ಯ ಜಿಲ್ಲಾ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಸೋಮುಗೌಡ ಕಲ್ಲೂರ ಮಾತನಾಡಿ, ಬಸವಾದಿ ಶರಣರು ಹೋಮ-ಹವನ, ಮಡಿ-ಮೈಲಿಗೆ ಮೇಲು ಕೀಳು ಅಸಮಾನತೆ ವಿರುದ್ಧ ಹೋರಾಡಿ, ಮೂಢನಂಬಿಕೆಗಳನ್ನು ತೊಲಗಿಸಲು ಶ್ರಮಿಸಿದರು. ಆದರೆ ವಿಶ್ವಗುರು ಕಾರಣಿಕ ಪುರುಷ. ಬಸವಣ್ಣನವರು ಲಿಂಗಕ್ಯರಾದ ಐಕ್ಯ ಮಂಪಟದ ಬಳಿಯೇ ಕೆಲವು ಸಂಪ್ರದಾಯವಾದಿಗಳು ಹೋಮ-ಹವನ ಮಾಡಿ ಕೂಡಲ ಸಂಗಮ ಕ್ಷೆÃತ್ರದ ಪ್ರಾವಿತ್ಯತೆ ಹಾಳುಗೆಡವುತ್ತಿರುವುದು ಖಂಡನೀಯ ಎಂದು ಆಕ್ರೊÃಶ ವ್ಯಕ್ತಪಡಿಸಿದರು.

ಬಸವೇಶ್ವರ ದೇವಸ್ಥಾನ ಆಡಳಿತ ಮಂಡಳಿ ಕೂಡಲ ಸಂಗಮದವರು ಹೋಮ ಹವನಕ್ಕೆ ಆಸ್ಪದ ನೀಡಬಾರ ಎಂದು ಒತ್ತಾಯಿಸಿದರು.
ಆನಂದಕುಮಾರ ಜಂಬಗಿ, ನಗರ ಘಟಕದ ಅಧ್ಯಕ್ಷ ಆನಂದ ಜಂಬಗಿ, ಶಿವು ಭೂತನಾಳ, ಪ್ರಕಾಶ ಆರ್.ಕೆ. ರವಿ ಕಲಬುರ್ಗಿ ಸೇರಿದಂತೆ ಮುಂತಾದವರು ಈ ಸಂದರ್ಭದಲ್ಲಿ ಇದ್ದರು.

loading...