ಬಸ್ ಸೌಲಭ್ಯವಿಲ್ಲದೇ ವಿದ್ಯಾರ್ಥಿಗಳ ಪರದಾಟ

0
1
loading...

ಕನ್ನಡಮ್ಮ ಸುದ್ದಿ-ಕುಮಟಾ: ಸರ್ವ ಶಿಕ್ಷಣ ಅಭಿಯಾನ ಆರಂಭವಾದಾಗಿನಿಂದ ಜನ ಸಾಮಾನ್ಯರಲ್ಲಿ ಶಿಕ್ಷಣದ ಮಹತ್ವ ಕುರಿತು ಜಾಗೃತಿ ಹೆಚ್ಚಿದೆ. ಅದಕ್ಕನುಗುಣವಾಗಿ ವಿದ್ಯಾರ್ಜನೆ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಲೆ ಸಾಗಿದೆ. ಅಷ್ಟಕ್ಕೂ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುನವಾಗಿ ಬಸ್ ಸೌಲಭ್ಯ ವಿಲ್ಲದ್ದರಿಂದ ಶಾಲಾ ಕಾಲೇಜುಗಳಿಗೆ ತೆರಳುವ ಗ್ರಾಮೀಣ ವಿದ್ಯಾರ್ಥಿಗಳು ನಿತ್ಯ ತೊಂದರೆ ಅನುಭವಿಸುವಂತಾಗಿದೆ.
ತಾಲೂಕಿನ ಗೋಕರ್ಣ, ಹಿರೇಗುತ್ತಿ ಮಿರ್ಜಾನ, ಬರ್ಗಿ, ಕೋಡ್ಕಣಿ ಮುಂತಾದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸರಕಾರಿ ಹಾಗೂ ಸರಕಾರಿ ಅನುದಾನಿತ ಶಾಲಾ ಕಾಲೇಜು, ಖಾಸಗಿ ಶಾಲಾ ಕಾಲೇಜು, ಐಟಿಐ, ಡಿಪ್ಲೋಮಾ ಮುಂತಾದ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ಕುಮಟಾ ಪಟ್ಟಣವನ್ನೇ ಅವಲಂಭಿಸಿದೆ.

ಒಂದು ಕಾಲೇಜು ಬೆಳಗ್ಗೆ 8.30 ಗಂಟೆಗೆ ಆರಂಭವಾದರೆ, ಇನ್ನೊಂದು 9ಕ್ಕೆ ಮಗದೊಂದು 9:30 ಕ್ಕೆ ಆರಂಭವಾಗುತ್ತದೆ. ಒಟ್ಟಾರೆ ಈ ಸಮಯ ಕಾಲೇಜು ತಲುಪಲು ವಿದ್ಯಾರ್ಥಿಗಳು ನಿತ್ಯ ತೊಳಲಾಡಬೇಕಿದೆ. ಖಾಸಗಿ ಶಾಲಾ ವಿಧ್ಯಾರ್ಥಿಗಳಿಗೆ ಶಾಲಾ ವಾಹನ ಸೌಕರ್ಯವಿರುವ್ಯದರಿಂದ ಶಾಲೆಗೆ ತಲುಪಲು ಅನುಕೂಲವಾಗುತ್ತದೆ. ಆದರೆ, ಸರಕಾರಿ ಅಥವಾ ಸರಕಾರಿ ಅನುದಾನಿತ ಶಾಲಾ ಕಾಲೇಜುಗಳಿಗೆ ತೆರಳುವ ವಿಧ್ಯಾರ್ಥಿಗಳು ಬಸ್ ಪಾಸ್ ಹೊಂದಿರುವುದರಿಂದ ಸರಕಾರಿ ಬಸ್‍ನ್ನೆ ಅವಲಂಭಿಸಿರಬೇಕಿದೆ. ಹಾಗಂತ ಮುಂಜಾನೆ ಬಸ್‍ಗಳಿಗೆ ಕೊರತೆಯಿಲ್ಲ. ಮುಂಜಾನೆ 7 ಕ್ಕೆ ಕುಮಟಾ-ಕಿಮಾನಿ ಬಸ್, ಕೋಡ್ಕಣಿಗೆ ಪ್ರತ್ಯೆಕ ಬಸ್ 7.30 ಕ್ಕೆ, ಕಾರವಾರ-ಕುಮಟಾ ಬಸ್ 8 ಕ್ಕೆ ಕೊಲ್ಲಾಪುರ-ಕುಮಟಾ 7.45 ಕ್ಕೆ ಗೊಕರ್ಣ-ಸಾಗರ ಇಷ್ಟೆಲ್ಲೆ ಈ ಮಾರ್ಗದಿಂದಲೇ ಹೊರಟರೂ ಇವೆಲ್ಲವು ಕುಮಟಾಕ್ಕೆ ತೆರಳುವ ಬಸ್‍ಗಳಾಗಿದ್ದರೂ ಆಯಾ ಭಾಗದ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿರುವುದರಿಂದ ಈ ಬಸ್‍ಗಳು ಮಿರ್ಜಾನನಲ್ಲಿ ನಿಲುಗಡೆಯಾಗುವುದೇ ಇಲ್ಲ.
ಬೆಳಗ್ಗೆ 8.30 ರ ನಚಿತರ ಬರುವ ಬಸ್‍ಗಳು ಮಾತ್ರ ಖಾಲಿ ಇರುವುದರಿಂದ ನಿತ್ಯ ಮುಂಜಾನೆ 8.30 ಕ್ಕೆ ಆರಂಭವಾಗುವ ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಪ್ರಥಮ ಪಿರಿಯೆಡ್ ಸೇರಲು ಅರ್ದತಾಸಿನ ವಿಳಂಬವಾಗುತ್ತದೆ. ಕೆಲವೊಮ್ಮೆ ಪ್ರಥಮ ಪಿರಿಯಡ್ ಹಾಜರಾಗದ ಸ್ಥಿತಿಯು ನಿರ್ಮಾಣವಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳಿಗೆ ಸರಿಯಾದ ವಿದ್ಯಾಭ್ಯಾಸ ಲಭಿಸದೆ ಹಾನಿ ಉಂಟಾಗುತ್ತದೆ. ಮಿರ್ಜಾನ ಊರಿಂದ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳ ದಂಡೆ ಕುಮಟಾಕ್ಕೆ ತೆರಳುತ್ತದೆ. ವಿದ್ಯಾರ್ಥಿಗಳ ಸಂಖ್ಯೆಗಣುಗುಣವಾಗಿ ಬಸ್ ಸೌಲಭ್ಯವಿಲ್ಲದ್ದಿರುವುದರಿಂದ ಪರಿತಪಿಸಬೇಕಾದ ಸ್ಥಿತಿ ಇದೆ. ಹಾಗಾಗಿ ಮಿರ್ಜಾನಿಂದ ಕುಮಟಾದ ಶಾಲಾ ಕಾಲೇಜುಗಳಿಗೆ ನಿತ್ಯ ಹೊರಡುವ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಸುವ ನಿಟ್ಟಿನಲ್ಲಿ ಮುಂಜಾನೆ 7.45 ಕ್ಕೆ ಮಿರ್ಜಾನ ಊರಿನಿಂದ ಪ್ರತ್ಯೆಕ ಬಸ್ ವ್ಯವಸ್ಥೆ ಕಲ್ಪಿಸುವಂತೆ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ. ವಿದ್ಯಾರ್ಥಿಗಳ ಪ್ರಾಮಾಣಿಕ ಬೇಡಿಕೆ ಮನ್ನಿಸಿ ಡಿಪೋ ವ್ಯವಸ್ಥಾಪಕರು ಮುಂಜಾನೆ 7.45 ಬಸ್ ವ್ಯವಸ್ಥೆ ಕಲ್ಪಸಿಕೊಟ್ಟು ವಿಧ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಸಲು ಶೀಘ್ರ ಕಾರ್ಯೋನ್ಮುಖರಾಗಬೇಕು ಎನ್ನುವ ಮಾತು ಪಾಲಕರದ್ದಾಗಿದೆ.

loading...