ಬಾಗಲಕೋಟ ನಗರಸಭೆ ಹೊಸಬರೋ…ಹಳಬರಿಗೆ ಮಣೆಯೋ?

0
0
loading...

ಬಾಗಲಕೋಟ-ಸ್ಥಳೀಯ ಸಂಸ್ಥೆಗಳಿಗೆ ಆ.31ರಂದು ನಡೆದ ಮತದಾನದ ಫಲಿತಾಂಶ ಸೆ.3ರಂದು ಘೋಷಣೆಯಾಗುತ್ತಲೇ ಸಂಜೆ ರಾಜ್ಯ ಸರಕಾರದಿಂದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮಿಸಲಾತಿ ಘೋಷಣೆ ಆಗಿದೆ. ಬಾಗಲಕೋಟ ನಗರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾದರೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.
ಸೋಮವಾರವಷ್ಟೆ ಫಲಿತಾಂಶ ಘೋಷಣೆ ಆಗಿದ್ದು ಸ್ಥಳೀಯ ನಗರಸಭೆಯ 35 ಸ್ಥಾನಗಳಲ್ಲಿ ಬಿಜೆಪಿ 29 ಸ್ಥಾನ ಗಳಿಸಿ ಬಹುಮತದೊಂದಿಗೆ ನಗರಸಭೆ ಅಧಿಕಾರದ ಚುಕ್ಕಾಣೆ ಹಿಡಿದಿದೆ. ಒಂದು ಸ್ಥಾನವನ್ನು ಅವಿರೋಧವಾಗಿ ಪಡೆದ ಕಾಂಗ್ರೆಸ್ ಚುನಾವಣೆ ಕಣದಲ್ಲಿ 4 ಸದಸ್ಯರ ಜಯದೊಂದಿಗೆ 5 ಸ್ಥಾನ ಹಾಗೂ ಒಂದು ಪಕ್ಷೇತರ ಸದಸ್ಯರ ಪಾಲಾಗಿದೆ.
ಸ್ಪಷ್ಟ ಬಹುಮತ ಹೊಂದಿರುವ ಬಿಜೆಪಿಯಲ್ಲಿ ಸರಕಾರದ ಮೀಸಲಾತಿಯಂತೆ ಪರಿಶಿಷ್ಟ ಜಾತಿ ಮಹಿಳಾ ಮೀಸಲಾತಿಯಲ್ಲಿ ಇಬ್ಬರು ಮಹಿಳೆಯರು ಆಯ್ಕೆ ಆಗಿದ್ದಾರೆ. ವಾರ್ಡ್-18ರಲ್ಲಿ ಜ್ಯೋತಿ ಕೇಶವ ಭಜಂತ್ರಿ ಹಾಗೂ ವಾರ್ಡ್-20 ರಿಂದ ನಾಗವ್ವ ಬಸವರಾಜ ಹೆಬ್ಬಳ್ಳಿ ಆಯ್ಕೆ ಆಗಿದ್ದಾರೆ.
ಇಬ್ಬರ ಪೈಕಿ ಜ್ಯೋತಿ ಕೇಶವ ಭಜಂತ್ರಿ ಅವರು 2009-13ರ ಅವಯಲ್ಲಿ 15 ತಿಂಗಳ ಕಾಲ ನಗರಸಭೆ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದ್ದಾರೆ. ವಾರ್ಡ್-20ರ ಸದಸ್ಯೆ ನಾಗವ್ವ ಬಸವರಾಜ ಹೆಬ್ಬಳ್ಳಿ ಹೊಸದಾಗಿ ಆಯ್ಕೆ ಆಗಿದ್ದಾರೆ. ಬಿಜೆಪಿ ಪಕ್ಷ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಈ ಬಾರಿ ಹೊಸಬರಿಗೆ ಟಿಕೇಟ್ ನೀಡಿ ಹೆಚ್ಚು ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದೆ. ಅದೇ ಮಾನದಂಡ ಮುಂದುವರೆದು ಹೊಸಬರಿಗೆ ಅವಕಾಶ ನೀಡುವ ನಿರ್ಧಾರಕ್ಕೆ ಬಂದಲ್ಲಿ ನಾಗವ್ವ ಬಸವರಾಜ ಹೆಬ್ಬಳ್ಳಿ ನಗರಸಭೆ ಅಧ್ಯಕ್ಷರಾಗುವುದು ಬಹುತೇಕ ನಿಶ್ಚಿತವಾಗುತ್ತದೆ. ಒಂದು ವೇಳೆ ಅಧ್ಯಕ್ಷ ಸ್ಥಾನ ಹಿರಿತನ ಹಾಗೂ ಅನುಭವಕ್ಕೆ ಕಟ್ಟು ಬಿದ್ದಲ್ಲಿ ಮತ್ತೆ ಜ್ಯೋತಿ ಕೇಶವ ಭಜಂತ್ರಿ ಅವರ ಪಾಲಾಗಲಿದೆ ಎನ್ನಲಾಗಿದೆ.
ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು ಬಿಜೆಪಿ ಪುರುಷ ಸದಸ್ಯರಲ್ಲಿ 7 ಹಾಗೂ ಮಹಿಳಾ ಸದಸ್ಯರಲ್ಲಿ 9 ಸದಸ್ಯರು ಆಯ್ಕೆ ಆಗಿದ್ದಾರೆ. ಹೀಗಾಗಿ ಉಪಾಧ್ಯಕ್ಷ ಸ್ಥಾನಕ್ಕೆ 16 ಸದಸ್ಯರಲ್ಲಿ ಪೈಪೆÇೀಟಿ ನಡೆದರೆ ಅಧ್ಯಕ್ಷ ಸ್ಥಾನಕ್ಕೆ ಇಬ್ಬರಲ್ಲಿ ಪೈಪೆÇೀಟಿ ನಡೆಯಲಿದೆ. ಹೊಸಬರಿಗೆ ಮಣೆ ಹಾಕಿದರೆ ನಾಗವ್ವ ಬಸವರಾಜ ಭಜಂತ್ರಿ, ಹಳಬರಿಗೆ ಮಣೆ ಹಾಕಿದರೆ ಜ್ಯೋತಿ ಕೇಶವ ಭಜಂತ್ರಿ ಅವರಿಗೆ ಅಧ್ಯಕ್ಷ ಸ್ಥಾನ ಒಲಿದು ಬರಲಿದೆ ಎಂದು ಮೂಲಗಳು ತಿಳಿಸಿವೆ.

loading...