ಬಿಜೆಪಿಯಲ್ಲಿ ನಾನು ಸಕ್ರೀಯನಾಗಿದ್ದೇನೆ: ಜನಾರ್ದನ ರೆಡ್ಡಿ

0
0
loading...

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ: ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರ್ಕಾರ ನೂರು ದಿನ ಪೂರೈಕೆ ಮಾಡಿದೆ. ಜನ ಅವರ ಅಧಿಕಾರ ಶೈಲಿಯನ್ನು ನೋಡುತ್ತಿದ್ದಾರೆ. ಇನ್ನು ಸ್ವಲ್ಪ ದಿನಗಳ ಕಾಲ ಅವಕಾಶ ಕೊಟ್ಟು ನೋಡೋಣ ಎಂದು ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿಯೇ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂಬುದು ಜನರ ಅಪೇಕ್ಷೆಯಾಗಿತ್ತು. ಸ್ವಲ್ಪದಲ್ಲಿ ಮಿಸ್​ ಆಗಿದೆ. ಮುಂದಿನ ದಿನಗಳಲ್ಲಿ ಏನಾಗಲಿದೆ ಎಂದು ನೋಡೋಣ. ಅಧಿಕಾರ ಕೈ ತಪ್ಪಿದೆ. ಆದರೆ ಬಿಜೆಪಿಯಲ್ಲಿ ನಾನು ಸಂಪೂರ್ಣ ಸಕ್ರಿಯವಾಗಿ ಇದ್ದೇನೆ ಎಂದು ಸ್ಪಷ್ಟಪಡಿಸಿದರು.

loading...