ಬಿತ್ತನೆ ಬೀಜ ರೈತ ಸಂಪರ್ಕ ಕೇಂದ್ರಗಳಿಂದ ಪೂರೈಸುವಂತೆ ಆಗ್ರಹ

0
0
loading...

ವಿಜಯಪುರ: ಬಿತ್ತನೆ ಬೀಜವನ್ನು ರೈತ ಸಂಪರ್ಕ ಕೇಂದ್ರಗಳಿಂದ ಪೂರೈಸುವಂತೆ ಆಗ್ರಹಿಸಿ ಭಾರತೀಯ ಕೃಷಿಕ ಸಮಾಜ ಕರ್ನಾಟಕ ರಾಜ್ಯ ರೈತ ಸಂಘಟನೆ ವತಿಯಿಂದ ಬುಧವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸಂಘಟನೆ ಮುಖಂಡ ಅರ್ಜುನ ಶಿರೂರ ಮಾತನಾಡಿ, ಈಗಾಗಲೇ ವಿಜಯಪುರ ಜಿಲ್ಲೆಗೆ ಬಿತ್ತನೆಗೆ ಮಳೆ ಇರುವದಿಲ್ಲ. ಆದ್ದರಿಂದ ಜಿಲ್ಲೆಯನ್ನು ಬರಗಾಲ ಜಿಲ್ಲೆಯನ್ನಾಗಿ ಘೋಷಿಸಿ ರೈತರಿಗೆ ಸಹಾಯಧನವನ್ನು ಮಂಜೂರು ಮಾಡಬೇಕಾಗಿದೆ. ಈಗಾಗಲೇ ಸರ್ಕಾರ ಆರ್.ಸಿ. ಪ್ರಕಾರ ರೈತ ಸಂಪರ್ಕ ಕೇಂದ್ರದಲ್ಲಿ ಹಿಂಗಾರು ಹಂಗಾಮಿಗೆ ಬಿತ್ತನೆ ಬೀಜ ಸಿಗುತ್ತಿಲ್ಲ. ಇದರಿಂದ ರೈತರಿಗೆ ಬಹಳ ತೊಂದರೆಯಾಗುತ್ತದೆ ಎಂದು ದೂರಿದರು.

ತೊಗರಿಯನ್ನು ಖರೀದಿ ಮಾಡಿದ ಬಿಲ್ಲುಗಳು ಇನ್ನೂ ಹಲವಾರ ರೈತರಿಗೆ ಸರಿಯಾಗಿ ಮುಟ್ಟಿರುವುದಿಲ್ಲ. ಈಗ ಜಿಲ್ಲೆಯಲ್ಲಿ ಅಲ್ಲಲ್ಲಿ ಅಲ್ಪಸ್ವಲ್ಪ ಮಳೆಯಾಗಿರುತ್ತದೆ. ರೈತರಿಗೆ ಬಿತ್ತನೆ ಮಾಡಲು ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜಗಳಾದ ಸೂರ್ಯಪಾನ, ಗೋವಿನ ಜೋಳ, ಕಡಲೆ ಬೀಳಿಜೋಳ ಸಿಗುತ್ತಿಲ್ಲ. ಆದ್ದರಿಂದ ಮುಂಗಾರಿ ಹಂಗಾಮಿನ ಸಬ್ಸಡಿಯನ್ನು ಇನ್ನು ಒಂದು ತಿಂಗಳ ಮುಂದುವರಿಸಿಲ್ಲ. ಸಹಾಯಧನದಲ್ಲಿ ಬಿತ್ತನೆ ಬೀಜವನ್ನು ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂಧರ್ಭದಲ್ಲಿ ಲಾಲು ರಾಠೋಡ, ಮಲ್ಲು ಬೆನಕಟ್ಟಿ, ಎಲ್.ಬಿ. ಪಾಟೀಲ, ಮೆಹಬೂಬ ತಾಳಿಕೋಟಿ, ಸಿ.ಎಸ್. ಪಾಟೀಲ, ಅಶೋಕ ರಾಠೋಡ ಮುಂತಾದವರು ಇದ್ದರು.

loading...