ಬೆಳಗಾವಿ ಜಿಲ್ಲಾ ಉಸ್ತುವಾರಿ ಮಂತ್ರಿ ಬದಲಾವಣೆ ಸಾದ್ಯತೆ !

0
2
loading...

ಬೆಳಗಾವಿ ಜಿಲ್ಲಾ ಉಸ್ತುವಾರಿ ಮಂತ್ರಿ ಬದಲಾವಣೆ ಸಾದ್ಯತೆ !

ಕನ್ನಡಮ್ಮ ಸುದ್ದಿ-ಬೆಳಗಾವಿ: ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ರಮೇಶ್ ಜಾರಕಿಹೋಳಿ ಅವರನ್ನು  ಕೈ ಬೀಡುವ ಚರ್ಚೆ ರಾಜ್ಯ ಮಟ್ಟದಲ್ಲಿ ಆರಂಭವಾಗಿರುವ ಮಾತು ಬೆಂಗಳೂರು ಮೂಲದಿಂದ ಕೇಳಿ ಬಂದಿದೆ .ಇಂದು ನಡೆದ ಪಿಎಲ್ ಡಿ ಬ್ಯಾಂಕ್ ಚುನಾವಣೆ ಇಪೆಕ್ಟ್ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕೆ ಕುತ್ತು ತಂದಿದೆ ಎಂದು ಹೇಳಲಾಗುತ್ತಿದೆ .

ಬೆಳಗಾವಿ ತಾಲೂಕಿನ ಪಿಎಲ್ ಡಿ ಬ್ಯಾಂಕ್ ಚುನಾವಣೆ ಸಂಬಂಧ ಜಿಲ್ಲೆಯ ಕಾಂಗ್ರೆಸ್ ಮುಖಂಡರಾದ ಶಾಸಕಿ ಹೆಬ್ಬಾಳಕರ್ ಮತ್ತು ಸತೀಶ ಜಾರಕಿಹೋಳಿ ನಡುವೆ ಕದನಕ್ಕೆ ಕಾರಣವಾಗಿತ್ತು.ಈ ಗಲಾಟೆಯನ್ನು ಸ್ಥಳೀಯ ಮಟ್ಟದಲ್ಲಿ ಬಗೆ ಹರಿಸಿಕೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೋಳಿ ವಿಫಲರಾದ ಹಿನ್ನೆಲೆ ಪಿಎಲ್ ಡಿ ಬ್ಯಾಂಕ್ ಗಲಾಟೆ ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತಂದಿದೆ.ಸಣ್ಣ ಸಮಸ್ಯೆ ನಿವಾರಿಸದ ಸಚಿವ ರಮೇಶ ಜಾರಕಿಹೋಳಿ ಅವರನ್ನು ಬದಲಾವಣೆ ಮಾಡುವಂತೆ ಕೆಲ ಕಾಂಗ್ರೆಸ್ ಮುಖಂಡ ಒತ್ತಡ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

ಪಿಎಲ್ ಡಿ ಬ್ಯಾಂಕ್ ಸಮಸ್ಯೆ ಸ್ಥಳೀಯ ಮಟ್ಟದಲ್ಲಿ ಬಗೆ ಹರಿಯದ ಕಾರಣ ಕೈ ಮುಖಂಡ ಈಶ್ವರ ಖಂಡ್ರೆ ಹೆಬ್ಬಾಳಕರ್ ಮತ್ತು ಜಾರಕಿಹೋಳಿ ನಡುವೆ ಸಂದಾನ ಮಾಡಿ ಸಮಸ್ಯೆ ಬಗೆ ಹರಿಸಿದ್ದಾರೆ .ಆದರೆ ಸಚಿವ ರಮೇಶ ಜಾರಕಿಹೋಳಿ ಸಮಸ್ಯೆ ಬಗೆ ಹರಿಸದೆ ಕೈ ನಾಯಕರಿಗೆ ಸವಾಲ್ ಹಾಕಿದ್ದು ಈಗ ಸಚಿವ ಸ್ಥಾನದಿಂದ ಕೈ ಬೀಡುವ ಮಾತು ಕೇಳಿ ಬಂದಿದೆ.

loading...