ಬ್ರಹ್ಮಶ್ರೀರವರ ಆದರ್ಶಗಳು ಇಂದಿಗೂ ಮಾದರಿ: ಮಂಜುನಾಥ

0
0
loading...

ಕನ್ನಡಮ್ಮ ಸುದ್ದಿ-ಮುಂಡರಗಿ: ಬ್ರಹ್ಮಶ್ರೀ ನಾರಾಯಣಗುರುಗಳು ಸಮಾಜದಲ್ಲಿನ ಮೂಢನಂಬಿಕೆಗಳನ್ನು ದೂರ ಮಾಡುವುದರ ಜೊತೆಗೆ ಜಾತ್ಯಾತೀತ ಸಮಾಜ ನಿರ್ಮಿಸಲು ಸದಾ ಶ್ರಮಿಸಿದರು. ಅವರ ತತ್ವಾದರ್ಶಗಳು ನಮಗೆಲ್ಲ ಮಾದರಿ ಎಂದು ಉಪನ್ಯಾಸಕ ಕೆ.ಮಂಜುನಾಥÀ ಹೇಳಿದರು.
ಸ್ಥಳೀಯ ತಹಸೀಲ್ದಾರ್ ಕಾರ್ಯಾಲಯದಲ್ಲಿ ತಾಲೂಕು ಆಡಳಿತವು ಗುರುವಾರ ಏರ್ಪಡಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರತಿಯೊಬ್ಬರು ಸುಂದರ ಸಮಾಜ ನಿರ್ಮಾಣಕ್ಕೆ ಶ್ರಮಿಸುವುದರ ಮೂಲಕ ನಮ್ಮ ಸಂಸ್ಕøತಿಯನ್ನು ಉಳಿಸಿ ಬೆಳೆಸಬೇಕು ಎಂದರು. ಉಪತಹಸೀಲ್ದಾರ್ ರಮೇಶ ಬಾಲೆಹೊಸೂರ, ಕಮಲಬಾಯಿ ಈಳಿಗೇರ ಮಾತನಾಡಿದರು. ಈಳಿಗೇರ ಸಮಾಜದ ಜಿಲ್ಲಾ ಉಪಾಧ್ಯಕ್ಷ ರವಿಕುಮಾರ ಹೊಸಪೇಟೆ, ನಂಜುಂಡಪ್ಪ ಈಳಿಗೇರ, ಮಾರುತಿ ಈಳಿಗೇರ, ಉಮೇಶ ಈಳಿಗೇರ, ಚಿದಂಬರ್ ಈಳಿಗೇರ, ಪ್ರದೀಪ ಈಳಿಗೇರ, ಎ.ಬಿ.ಪಾಟೀಲ, ಯಮನೂರಪ್ಪ ಈಳಿಗೇರ, ಉದಯಕುಮಾರ ಹೊಸಮನಿ, ಲಕ್ಷ್ಮೀಬಾಯಿ ಈಳಿಗೇರ, ಮತ್ತಿತರರು ಇದ್ದರು. ವಕೀಲರಾದ ಗುರುರಾಜ ಈಳಿಗೇರ ಕಾರ್ಯಕ್ರಮ ನಿರೂಪಿಸಿದರು.

loading...