ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಿಂದ ದ್ವೇಷದ ರಾಜಕೀಯ: ದಾದಾಪೀರ್‌ ಆರೋಪ

0
0
loading...

ಕನ್ನಡಮ್ಮ ಸುದ್ದಿ-ದಾಂಡೇಲಿ: ಪಕ್ಷ ವಿರೋಧಿ ಚಟುವಟಿಕೆಯ ಹಿನ್ನಲೆಯಲ್ಲಿ ನನ್ನನ್ನೂ ಸೇರಿದ ಹಾಗೆ ಐವರು ಕಾಂಗ್ರೆಸಿಗರನ್ನು ಉಚ್ಚಾಟನೆ ನೀಡಿರುವುದಾಗಿ ಪತ್ರಿಕಾ ಪ್ರಕಟಣೆ ನೀಡಿರುವ ದಾಂಡೇಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಯ್ಯದ್‌ ತಂಗಳರವರು ದ್ವೇಶದ ರಾಜಕೀಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ದಾದಾಪೀರ್‌ ನದಿಮುಲ್ಲಾ ಆಕ್ಷೇಪಿಸಿದ್ದಾರೆ.
ಈ ಬಗ್ಗೆ ಲಿಖಿತ ಪ್ರಕಟಣೆ ನೀಡಿರುವ ಅವರು ವಿಧಾನ ಸಭೆ ಚುನಾವಣೆ ಸಂದರ್ಭದಿಂದಲೂ ದಾಂಡೇಲಿ ಕಾಂಗ್ರೆಸ್‌ ಕಾರ್ಯರ್ತರು ಮತ್ತು ಬ್ಲಾಕ್‌ ಸಮಿತಿ ನಡುವೆ ಗುಂಪುಗಾರಿಕೆಯಿತ್ತು. ಆದರೆ ದೇಶಪಾಂಡೆಯವರ ಗೆಲುವಿಗಾಗಿ ಅವರ ನಿರ್ದೇಶನದಂತೆ ಕೆಲಸ ಮಾಡಿದೆವು. ಅದರಂತೆ ನಗರಸಭೆ ಚುನಾವಣೆಯಲ್ಲಿಯೂ ದೇಶಪಾಂಡೆಯವರ ನಿರ್ದೇಶನದಂತೆಯೇ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದೇವೆ.
ಈ ನಡುವೆ ಕಾಂಗ್ರೆಸ್‌ ಬಹುಮತ ಬಂದರೂ ಸಹ ವಾರ್ಡ ನಾಲ್ಲರಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ಎಸ್‌.ಪೂಜಾರ ವಿರುದ್ಧ ಬಂಡಾಯ ನಿಂತು ಗೆದ್ದ ಅಭ್ಯರ್ಥಿಯನ್ನು ಪಲಿತಾಂಶ ಬಂದ ದಿನವೇ ಕಾಂಗ್ರೆಸ್ಸಿಗೆ ಸೇರಿಸಿಕೊಂಡರು. ಹಾಗೂ ಅಧಿಕೃತ ಅಭ್ಯರ್ಥಿಯ ಸೋಲಿಗೆ ಕಾರಣರಾದ ಆ ವಾರ್ಡಿನ ಭೂತ್‌ ಕಮಿಟಿಯ ಸದಸ್ಯರನ್ನು ಯಾಕೆ ಉಚ್ಚಾಟಿಸಿಲ್ಲ. ಇದರ ಹಾಗೆಯೇ ಇನ್ನೂ ಹಲವು ವಾರ್ಡಗಳಲ್ಲಿ ಅಧಿಕೃತ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಸೋಲಿಸುವ ಪ್ರಯತ್ನ ನಡೆದಿದೆ. ಯಾಕೆ ಅವರೆಲ್ಲರ ಮೇಲೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ್ದಾರೆ.
ನಮ್ಮನ್ನು ಉಚ್ಚಾಟನೆ ಮಾಡುವ ಮುನ್ನ ಯಾಕೆ ಕಾರಣ ಕೇಳಿ ನೋಟೀಸ್‌ ನೀಡಲಿಲ್ಲ. ಇವರಿಗೆ ಉಚ್ಚಾಟನೆ ಮಾಡುವ ಅಧಿಕಾರವಿದೆಯೇ. ನಮ್ಮನ್ನು ಉಚ್ಚಾಟನೆ ಮಾಡಿರುವುದಾಗಿ ಹೇಳಿ ಪತ್ರಿಕಾ ಪ್ರಕಟಣೆ ನೀಡಿ ಅವಮಾನ ಮಾಡಿರುವ ನಿಮ್ಮ ಮೇಲೆ ಯಾಕೆ ಮಾನಹಾನಿ ಮೊಕದ್ದಮ್ಮೆ ಹಾಕಬಾರದು ಎಂದು ದಾದಾಪೀರ ನದಿಮುಲ್ಲಾ ಪ್ರಶ್ನಿಸಿದ್ದಾರೆ.

loading...