ಭಕ್ತಿ ಹಾಡು ಕಲಾಕಾರರ ವೈಶಿಷ್ಠಪೂರ್ಣವಾದ ಕೊಡುಗೆಯಾಗಿದೆ: ಗುರುಸಿದ್ಧ ಶ್ರಿÃ

0
1
loading...

ಭಕ್ತಿ ಹಾಡು ಕಲಾಕಾರರ ವೈಶಿಷ್ಠಪೂರ್ಣವಾದ ಕೊಡುಗೆಯಾಗಿದೆ: ಗುರುಸಿದ್ಧ ಶ್ರಿÃ
ಕನ್ನಡಮ್ಮ ಸುದ್ದಿ-ಬೆಳಗಾವಿ: ಗಣೇಶ ಚತುರ್ಥಿಯ ಮುನ್ನಾದಿನದಂದು ತೆರೆಕಂಡಿರುವ ಈ ಭಕ್ತಿ ಪ್ರಧಾನವಾದ ಈ ವ್ಹಿಡಿಯೋ ಗಾಯನವು ಬೆಳಗಾವಿ ಕಲಾಕಾರರ ವೈಶಿಷ್ಠಪೂರ್ಣವಾದ ಕೊಡುಗೆಯಾಗಿದೆ. ಇದರಲ್ಲಿ ಆರಾಧನಾ ಬುದ್ಧಿಮಾಂದ್ಯ ಮಕ್ಕಳೂ ಸಹ ಕಲಾವಿದರಾಗಿ ಭಾಗವಸಿದ್ದು ಇದು ದೇಶಾದ್ಯಂತ ಎಲ್ಲರ ಗಮನಸೆಳೆಯದೇ ಇರಲಾರದೆಂದರು ಕಾರಂಜಿಮಠದ ಪರಮಪೂಜ್ಯ ಗುರುಸಿದ್ಧ ಸ್ವಾಮಿಗಳು ಹೇಳಿದರು.
ನಗರದ ಉಮಾ ಸಂಗೀತ ಪ್ರತಿಷ್ಠಾನ ವತಿಯಿಂದ ೯ ರಂದು ಹಿಂದವಾಡಿ ಲೋಕಮಾನ್ಯ ಸಭಾಗ್ರಹದಲ್ಲಿ ಹಾಗೂ ಕ್ರಿÃಜ ವಾಯಿಜ ರೆಡಿಮೆಡ ಮತ್ತು ಬಿ ಇನ್‌ಸ್ಪಾಯರ್ಡ ವತಿಯಿಂದ ಆಯೋಜಿಸಲಾಗಿದ್ದ ಚಿತ್ರಿÃಕರಿಸಲಾದ ‘ಹೆ ಬಪ್ಪಾ ಮೊರಯಾ’ ಎಂಬ ಹಾಡಿನ ವ್ಹಿಡಿಯೋ ಬಿಡುಗಡೆಗೋಳ್ಳಿಸಿ ಮಾತನಾಡಿದರು.
ಈ ಚಿತ್ರಿÃಕರಣದ ಸಂಯೋಜಕ ಹಾಗೂ ಪ್ರಧಾನ ಕಲಾವಿದ ರಾಹುಲ ಮೊಹನದಾಸ ಪ್ರಾಸ್ಥಾವಿಕವಾಗಿ ಮಾತನಾಡುತ್ತಾ, ‘ಹೆ ಬಪ್ಪಾ ಮೊರಯಾ’ ಹಾಡಿನ ಚಿತ್ರಿÃಕರಣ ಬೆಳಗಾವಿಯಲ್ಲಿಯೇ ಆಗಿದ್ದು ಸುಮಾರು ಎಪ್ಪತ್ತು ಕಲಾಕಾರು ಭಾಗವಹಿಸಿದ್ದು ಇವರೆಲ್ಲಾ ಬೆಳಗಾವಿಯವರೇ ಆಗಿದ್ದಾರೆ. ಇದಕ್ಕಾಗಿ ಎಲ್ಲ ಕಲಾಕಾರರು ತಾಂತ್ರಿಕ ವರ್ಗದವರು ಪಟ್ಟ ಶ್ರಮವನ್ನು ವಿವರಿಸುತ್ತಾ, ಇದರ ಹಾಡು ಕನ್ನಡ ಮರಾಠಿ ಹಾಗು ಹಿಂದಿ ಭಾಷೆಗಳ ಸಮ್ಮಿಳಿತವಾಗಿದ್ದು ಸುಮಾರು ೪೫ ದಿನಗಳ ಸತತ ಪರಿಶ್ರಮದ ಫಲವಾಗಿದೆ. ಸುಮಾರು ೨೫ ತಾಂತ್ರಿಕ ತಜ್ಙರು ಕಾರ್ಯ ಮಾಡಿದ್ದಾರೆ. ಎಂದು ವಿವರಿಸಿದರು.
ಈ ಕಾರ್ಯಕ್ರಮಲ್ಲಿ ಚಿತ್ ಪ್ರಕಾಶಾನಂದ ಸ್ವಾಮಿಗಳು ಮಾತನಾಡುತ್ತಾ, ಈ ವ್ಹಿಡಿಯೋದ ವೈಶಿಷ್ಠö್ಯವೆಂದರೆ ಭಕ್ತಿ, ಗಾಯನ, ನೃತ್ಯದ ಜೊತೆಗೆ ಮನುಷ್ಯನ ಭಾವನಾನುಕಂಪದ ಲೇಪನವಿದ್ದು ಮಹಿಳೆಯಾಗಿ ಉಮಾ ಸಂಗೀತ ಪ್ರತಿಷ್ಠಾನÀದ ಮಂಗಲಾ ಮಠದ ಇವರ ಕಾರ್ಯ ದೇ±ದ ಎಲ್ಲ ಜನರಿಗೂ ವಿಶೇಷವಾಗಿ ಮಹಿಳೆಯರಿಗೆ ಒಂದು ಮಾರ್ಗದರ್ಶನವಾಗಿದೆ ಎಂದರು.
ಉಮಾ ಸಂಗೀತ ಪ್ರತಿÀಷ್ಠಾನÀದ ಕಾರ್ಯದರ್ಶಿಯಾದ ಡಾ. ರಾಜೇಂದ್ರ ಮಠದ ಮಾತನಾಡುತ್ತಾ, ಈ ವ್ಹಿಡಿಯೋ ಸಂಪೂರ್ಣ ನಿರ್ಮಿತಿಯಲ್ಲಿ ಭಾಗವಹಿಸಿದ ಎಲ್ಲ ಕಲಾಕಾರರು ತಜ್ಞ ವರ್ಗದವರು ಪ್ರಾಯೋಜಕರಿಗೆ ಧನ್ಯವಾದಗಳನ್ನು ಸಮರ್ಪಿಸುತ್ತಾ ಇವರೆಲ್ಲರ ಪರಿಶ್ರಮದ ಫಲ ಈ ವಿಡಿಯೋ ಗಾಯನವಾಗಿದ್ದು ಹೆಚ್ಚು ಹೆಚ್ಚು ಪ್ರೆÃಕ್ಷಕರು ವೀಕ್ಷಿಸಿ ಕಲಾವಿದರಿಗೆ ಪ್ರೊÃತ್ಸಾಹಿಸಬೇಕೆಂದರು.
ಈ ಕಾರ್ಯಕ್ರಮದಲ್ಲಿ ಚಿತ್ ಪ್ರಕಾಶಾನಂದ ಸ್ವಾಮಿಗಳು, ಮಂಗಲ ಮಠದ, ಪ್ರಕಾಶ ಘಾಳಿ, ಕೃಷ್ಣಾ ಭಟ್, ರಮೇಶ ಗಂಗುರ, ರಾಹಲ ಮೊಹನದಾಸ ಈ ಚಿತ್ರಿÃಕರಣದ ದಿಗ್ದರ್ಶಕ ಸಚಿನ ಭಟ್, ಸಂಕಲನಕಾರ ಸಂಕೇತ ಕುಲಕರ್ಣಿ, ಹಿನ್ನೆಲೆ ಗಾಯಕರಾದ ಉಮಾ ಸಂಗೀತ ಪ್ರತಿÀಷ್ಠಾನÀ ವಿಧ್ಯಾರ್ಥಿನಿಯರು, ಯೋಗೇಶ ರಾಮದಾಸ ಹಾಗೂ ಎಲ್ಲ ತಜ್ಞ ವರ್ಗದವರು, ಕಲಾಕಾರರು ಉಪಸ್ಥಿತರಿದ್ದರು.

loading...