ಭಾರತ್‌ ಬಂದ್‌ಗೆ ದಾಂಡೇಲಿಯಲ್ಲಿ ಉತ್ತಮ ಪ್ರತಿಕ್ರಿಯೆ

0
0
loading...

ಕನ್ನಡಮ್ಮ ಸುದ್ದಿ-ದಾಂಡೇಲಿ: ಏರುತ್ತಿರುವ ತೈಲ ಬೆಲೆಯನ್ನು ವಿರೋಧಿಸಿ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷ ಭಾರತ್‌ ಬಂದ್‌ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ನಗರದ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಕರೆ ನೀಡಿದ ದಾಂಡೇಲಿ ಬಂದ್‌ಗೆ ಸೋಮವಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಂದ್‌ ಕರೆಯನ್ನು ಬೆಂಬಲಿಸಿ ನಗರದ ಅಂಗಡಿ-ಮುಂಗಟ್ಟುಗಳು ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿದ್ದವು. ಬೆರಳಣಿಕೆಯಲ್ಲಷ್ಟೆ ಕೆಲ ಅಂಗಡಿಗಳು ವ್ಯವಹಾರ ನಡೆಸಿದ್ದು ಬಿಟ್ಟರೇ ಉಳಿದಂತೆ ಸಾರಿಗೆ ಬಸ್‌, ಖಾಸಗಿ ಟ್ರ್ಯಾಕ್ಷಿ ವಾಹನಗಳು, ಆಟೋ ರಿಕ್ಷಾಗಳು ಸೇವೆಯನ್ನು ಸ್ಥಗಿತಗೊಳಿಸಿ ಬಂದ್‌ಗೆ ಬೆಂಬಲವನ್ನು ನೀಡಿತು.
ನಗರದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸೈಯದ ತಂಗಳ ಅವರ ನೇತೃತ್ವದಲ್ಲಿ ನಡೆದ ಬಂದ್‌ ಹೋರಾಟವು ಯಶಸ್ವಿಯಾಗಿ ನಡೆಯಿತು. ಬ್ಲಾಕ್‌ ಕಾಂಗ್ರೆಸ್‌ ಕಚೇರಿಯಿಂದ ಪಾದಾಯಾತ್ರೆಯ ಮೂಲಕ ನಡೆದ ಪ್ರತಿಭಟನಾ ಮೆರವಣಿಗೆಯು ನಗರದ ಜೆ.ಎನ್‌.ರಸ್ತೆಯ ಮಾರ್ಗವಾಗಿ ಲಿಂಕ್‌ ರಸ್ತೆ, ಕೆ.ಸಿ.ವೃತ್ತವಾಗಿ ಪಟೇಲ್‌ ವೃತ್ತದಿಂದ ಹಾದು ನಗರದ ಬಸ್‌ ನಿಲ್ದಾಣದ ಮುಂಭಾಗದಲ್ಲಿ ಜಮಾವಣೆಗೊಂಡಿತು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸೈಯದ ತಂಗಳ ಅವರು ಕೇಂದ್ರ ಸರಕಾರವು ಪೆಟ್ರೋಲ್‌ ಮತ್ತು ಡಿಸೇಲ್‌ ಬೆಲೆಯನ್ನು ದಿನದಿಂದ ದಿನಕ್ಕೆ ಏರಿಸುತ್ತಿರುವುದರಿಂದ ದೈನಂದಿನ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದರಿಂದಾಗಿ ಜನಸಾಮಾನ್ಯರ ಜೀವನದ ಮೇಲೆ ವ್ಯತಿರೀಕ್ತ ಪರಿಣಾಮ ಬೀರುವಂತಾಗಿದೆ. ತೈಲ ಬೆಲೆ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ಬೆಲೆ ಸಹಜವಾಗಿ ಗಗನಕ್ಕೇರಿವೆ. ಬಡವರು, ಕೂಲಿ ಕಾರ್ಮಿಕರು ಈ ಸಮಸ್ಯೆಯಿಂದಾಗಿ ಬಸವಳಿದಿದ್ದಾರೆ. ಕೇಂದ್ರ ಸರಕಾರ ಉಳ್ಳವರ ಪರವಾಗಿ ನಿಂತಿದೆ. ಸುಳ್ಳು ಭರವಸೆಗಳನ್ನು ಕೊಡುವುದರ ಮೂಲಕ ಬಡವರ ವಿರೋಧಿಯಾಗಿರುವ ಬಿಜೆಪಿ ಸರಕಾರದಿಂದ ಬಡತನ ನಿರ್ಮೂಲನವಾಗಿಲ್ಲ. ಬಡವರನ್ನು ಮತ್ತಷ್ಟು ಅತಂತ್ರರನ್ನಾಗಿಸುವ ದುಸ್ಸಾಹಸಕ್ಕೆ ಕೇಂದ್ರ ಸರಕಾರ ಕೈ ಹಾಕುತ್ತಿರುವುದು ದೇಶದ ಒಳಿತಿಗೆ ಒಳ್ಳೆಯ ಬೆಳವಣಿಗೆಯಲ್ಲ ಎಂದ ಸೈಯದ ತಂಗಳ ಅವರು ಏರುತ್ತಿರುವ ತೈಲ ಬೆಲೆಯನ್ನು ವಿರೋಧಿಸಿ ಕಾಂಗ್ರೆಸ್‌ ಪಕ್ಷ ರಾಷ್ಟ್ರವ್ಯಾಪಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಪಕ್ಷ ಶಾತಿಯುತವಾಗಿ ಹೋರಾಟವನ್ನು ಮಾಡುವುದರ ಮೂಲಕ ಈ ದೇಶದ ಜನಸಾಮಾನ್ಯರ ಬದುಕು ಬವಣೆಗಳನ್ನು ಅರ್ಥೈಸಿ, ಅದಕ್ಕೆ ಪೂರಕವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಮುನ್ನಡೆಯುತ್ತಿದೆ. ಈ ಕೂಡಲೆ ಏರುತ್ತಿರುವ ತೈಲ ಬೆಲೆಗೆ ಕಡಿವಾಣ ಹಾಕಿ, ಜನ ಸಾಮಾನ್ಯರ ಬದುಕಿಗೆ ಭಾರವಾಗುತ್ತಿರುವ ಈ ಸಮಸ್ಯೆಯನ್ನು ಪರಿಹರಿಸಿ, ತೈಲಾ ಬೆಲೆಯನ್ನು ಪರಿಷ್ಕರಿಸಬೇಕೆಂದು ಸೈಯದ ತಂಗಳ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್‌ ಕ್ಷೇತ್ರಾಧ್ಯಕ್ಷ ರಾಜೇಶ ರುದ್ರಪಾಟಿ, ನಗರ ಸಭಾ ಸದಸ್ಯರುಗಳಾದ ಯಾಸ್ಮಿನ್‌ ಕಿತ್ತೂರು, ಆದಂ ದೇಸೂರು, ಮಜೀದ್‌ ಸನದಿ, ಮೌಲಾಲಿ ಮುಲ್ಲಾ, ಸರಸ್ವತಿ ರಜಪೂತ, ಅನಿಲ್‌ ನಾಯ್ಕರ, ಸಂಜು ಚಂದ್ರಕಾಂತ ನಂದ್ಯಾಳಕರ, ಆಸೀಪ್‌ ಮುಜಾವರ ಕಾಂಗ್ರೆಸ್‌ ಮುಖಂಡರುಳಾದ ತಸ್ವರ್‌ ಸೌದಾಗರ, ವಿ.ಆರ್‌.ಹೆಗಡೆ, ಬಸೀರ ಗಿರಿಯಾಳ, ದಿವಾಕರ ನಾಯ್ಕ, ರಾಮಲಿಂಗ ಜಾಧವ, ವೀರೇಶ ಯರಗೇರಿ, ಅವಿನಾಶ ಘೋಡಕೆ, ಮೋಜಸ್‌, ಸುಬ್ರಹ್ಮಣಿ ಸಮರು, ಜಾಫರ ಅನ್ವರ ಸಾಬ ಮಸನಕಟ್ಟಿ, ಪ್ರಭುದಾಸ, ಗೌರೀಶ, ರಫೀಕ ಖಾನ್‌, ಶಿವಪ್ಪ ನಾಯ್ಕ, ರೈಸಾ ಬಿಡಿಕರ ಮೊದಲಾದವರು ಉಪಸ್ಥಿತರಿದ್ದರು.

loading...