ಭಾರತ vs ಪಾಕಿಸ್ತಾನ ನಡುವಣ ಪಂದ್ಯ ವಿಕ್ಷಣೆಗೆ ದಾವೂದ್..?

0
0
loading...

ದುಬೈ: ಇಲ್ಲಿ ನಡೆಯಲಿರುವ ಸಾಂಪ್ರದಾಯಿಕ ಎದುರಾಳಿ ಭಾರತ-ಪಾಕಿಸ್ತಾನ ನಡುವಣ ಪಂದ್ಯ ವಿಕ್ಷಣೆ ಮಾಡಲು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬರುತ್ತಿದ್ದಾನೆಂದು ಮೂಲಗಳು ತಿಳಿಸಿವೆ. ಉಭಯ ದೇಶದ ಕ್ರಿÃಡಾಭಿಮಾನಿಗಳಲ್ಲಿ ಈಗಾಗಲೇ ಕುತೂಹಲ ಆರಂಭಗೊಂಡಿದೆ. ಇದರ ಮಧ್ಯೆ ಹೈವೋಲ್ಟೆÃಜ್ ಪಂದ್ಯ ವೀಕ್ಷಣೆಗಾಗಿ ಭೂಗತ ಪಾತಕಿ ಬರುತ್ತಾನೆ ಎಂಬ ಮಾಹಿತಿ ಹೊರಬಿದ್ದಿದೆ.
ಗುಪ್ತಚರ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ದಾವೂದ್ ಇಬ್ರಾಹಿಂ ಇಂದಿನ ಪಂದ್ಯ ವೀಕ್ಷಣೆಗಾಗಿ ದುಬೈಗೆ ಆಗಮಿಸಲಿದ್ದಾನೆ ಎಂದು ತಿಳಿಸಿದ್ದು, ಭದ್ರತಾ ಸಿಬ್ಬಂದಿ ಫುಲ್ ಅಲರ್ಟ್ ಆಗಿದೆ. ಗುಪ್ತಚರ ಇಲಾಖೆ ಮಾಹಿತಿ ನೀಡುತ್ತಿದ್ದಂತೆ ಆರು ದೇಶದ ಪೊಲೀಸರು ಅಲರ್ಟ್ ಆಗಿದ್ದು, ಎಲ್ಲಡೆ ಹದ್ದಿನ ಕಣ್ಣಿಟ್ಟಿದ್ದಾರೆ.

loading...