ಮಕ್ಕಳಲ್ಲಿ ನೈತಿಕ ಮಾನವೀಯ ಮೌಲ್ಯ ಬೆಳೆಸಿ:ಎಸ್.ಆರ್.ಪಾಟೀಲ

0
0
loading...

 

ಬೀಳಗಿ: ಮಕ್ಕಳಲ್ಲಿ ನೈತಿಕ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಶಿಕ್ಷಕರ ಜವಾಬ್ದಾರಿ ಅತ್ಯಂತ ಮಹತ್ವದ್ದಾಗಿದ್ದು ಶಿಕ್ಷಕರು ಸತ್ಯ ಹಾಗೂ ಸಂಸ್ಕೃತಿಯ ಪ್ರತಿರೂಪವಾಗಿದ್ದಾರೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಎಸ್.ಆರ್.ಪಾಟೀಲ ಹೇಳಿದರು.
ಬಾಡಗಂಡಿ ಎಸ್.ಆರ್.ಪಾಟೀಲ ಶಿಕ್ಷಣ ಪ್ರತಿಷ್ಠಾನದ ಬಾಪೂಜಿ ಅಂತರರಾಷ್ಟಿçÃಯ ಶಾಲೆ ಹಾಗೂ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ಶಿಕ್ಷಕ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಕ್ಕಳಲ್ಲಿ ಶಿಕ್ಷಣ ಎನ್ನುವ ಜ್ಞಾನದ ತಿಳಿವಳಿಕೆ ಮೂಡಿಸಲು ಶಿಕ್ಷಕರು ಸ್ರ‍್ಫರ್ತಿಯಾಗಿದ್ದಾರೆ. ನನ್ನ ಶಾಲೆ ಎನ್ನುವ ಅಭಿಮಾನದಿಂದ ಮಕ್ಕಳ ಭವಿಷ್ಯದ ಜೊತೆಗೆ ದೇಶÀವನ್ನು ಪ್ರಗತಿ ಪಥದತ್ತ ಕೊಂಡೊಯ್ಯುವ ಕರ್ತವ್ಯವನ್ನು ಕಳಕಳಿಯಿಂದ ನಿರ್ವಹಿಸಬೇಕು ಎಂದು ಮನವಿ ಮಾಡಿದರು. ನನಗೆ ಕಲಿಸಿದ ಗುರುವಿಗೆ ತಲೆಬಾಗಿ ನಮಸ್ಕರಿಸಿದ ಕ್ಷಣ ನನಗೆ ಜೀವನದಲ್ಲಿ ಸಾರ್ಥಕತೆ ತಂದು ಕೊಟ್ಟ ಘಳಿಗೆಯಾಗಿದೆ ಎಂದು ತಮ್ಮ ಗುರುಗಳನ್ನು ಸ್ಮರಣೆ ಮಾಡಿಕೊಂಡರು.

ಆಡಳಿತಾಧಿಕಾರಿ ಎಚ್.ಬಿ.ಧರ್ಮಣ್ಣವರ, ಕ್ಯಾಂಪಸ್ ನಿರ್ದೇಶಕ ಬೊಮ್ಮೆÃಗೌಡ, ರಾಜಶೇಖರ ಅಡಿಕೆಣ್ಣವರ ಮಾತನಾಡಿ, ಉತ್ತರ ಕರ್ನಾಟಕದ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಕಳೆದ ೧೦ ವರ್ಷದಿಂದ ಎಸ್.ಆರ್.ಪಿ. ಶಿಕ್ಷಣ ಪ್ರತಿಷ್ಠಾನ ಕಾರ್ಯ ನಿರ್ವಹಿಸುತ್ತಿದ್ದು, ಮಕ್ಕಳ ಶ್ರೆÃಯೋಭಿವೃದ್ಧಿಗೆ ಎಲ್ಲರೂ ಕೂಡಿ ಶ್ರಮಿಸೋಣ ಎಂದರು.
ಆಡಳಿತ ಮಂಡಳಿಯ ಸದಸ್ಯ ಎಸ್.ಆರ್.ಮೇಲ್ನಾಡ, ಪ್ರಾಚಾರ್ಯ ಎಚ್.ಎಸ್.ದುಡ್ಯಾಳ, ಕಾಲೇಜು ವಿಭಾಗದ ಪ್ರಾಚಾರ್ಯ ಡಾ. ವೆಂಕಟೇಶ ಜಿ. ವೇದಿಕೆಯಲ್ಲಿದ್ದರು. ಹಿರಿಯ ಉಪನ್ಯಾಸಕ ಆರ್.ಜಿ.ಕುಲಕರ್ಣಿ, ಪ್ರದೀಪ ಬಿ.ಎಸ್., ಶಿಲ್ಪಾ ಕೆ. ಕಾಂಚನ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಶಿಕ್ಷಕರಿಗಾಗಿ ವಿವಿಧ ಕ್ರಿÃಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕು.ವೈಭವಿ ದಿಕ್ಷಿÃತ ಕೊಳಲು ನುಡಿಸಿ ಕೇಳುಗರ ಗಮನ ಸೆಳೆದರು. ಸಂಗೀತ ಶಿಕ್ಷಕ ಪ್ರಮೋದ ಹರಿಮಂದಿರ ತಬಲಾ ಸಾಥ ನೀಡಿದರು. ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದರು. ಶಿಕ್ಷಕರು ಹಾಗೂ ಉಪನ್ಯಾಸಕರು ಪಾಲ್ಗೊಂಡಿದ್ದರು.
ಶಿಕ್ಷಕ ಶಂಕರಪ್ಪ, ಕು.ಸಮೀನಾ, ಸುಚಾ ನಿರೂಪಿಸಿದರು. ಶಾಲಾ ವಿದ್ಯಾರ್ಥಿ ಪ್ರತಿನಿಧಿ ಅಖಿಲೇಶ ಬಳಗಾನೂರ ವಂದಿಸಿದರು.

loading...