ಮಕ್ಕಳ ಪ್ರತಿಭೆ ಗುರುತಿಸಲು ಸೂಕ್ತ ತರಬೇತಿ ಅವಶ್ಯ: ಹೇಮಣ್ಣ

0
0
loading...

ಕನ್ನಡಮ್ಮ ಸುದ್ದಿ-ಹಿರೇಕೆರೂರ: ಮಕ್ಕಳಿಗೆ ಒದು ಎಷ್ಟು ಮುಖ್ಯನೋ ಅದರಂತೆ ಕ್ರೀಡೆಯೂ ಕೂಡ ಅತ್ಯವಶ್ಯಕವಾಗಿದ್ದು ಅದಕ್ಕಾಗಿ ಶಿಕ್ಷಕರು ಮಕ್ಕಳಲ್ಲಿರುವ ಪ್ರತಿಭೆಗಳನ್ನು ತಿಳಿದು ಅವರಿಗೆ ಉತ್ತಮ ತರಬೇತಿ ನೀಡಿದಲ್ಲಿ ದೇಶದ ಆಸ್ತಿಯಾಗಬಲ್ಲರು. ಅದಕ್ಕಾಗಿ ದೈಹಿಕಶಿಕ್ಷಕರು ಹಗಲಿರುಳು ಮಕ್ಕಳಿಗೆ ಉತ್ತಮವಾದ ತರಭೇತಿ ನೀಡಬೇಕು ಎಂದು ತಾಲೂಕು ಪಂಚಾಯತಿ ಅಧ್ಯಕ್ಷ ಹೇಮಣ್ಣ ಮುದರೆಡ್ಡಿ ತಿಳಿಸಿದರು.
ಪಟ್ಟಣದ ತಾಲೂಕು ಕ್ರೀಡಾಗಂಣದಲ್ಲಿ ಜಿಲ್ಲಾ ಪಂಚಾಯತಿ ಹಾವೇರಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾವೇರಿ ಪ್ರೌಢ ಹಾಗೂ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಹಾಗೂ ಶ್ರೀ ಮಾರಿತಿ ಪ್ರೌಢಶಾಲೆ ಹಿರೇಕೆರೂರ ಮತ್ತು ಪಾಥಮಿಕ ಶಾಲೆಗಳ ಎಲ್ಲ ಸಂಘಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ಪ್ರೌಢಶಾಲಾ ಹಾಗೂ ಪ್ರಾಥಮಿಕ ಶಾಲಾ ಮಕ್ಕಳ 2018-19ನೇ ಸಾಲಿನ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಕ್ರೀಡಾ ದ್ವಜ ಹಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದÀರು. ಮಕ್ಕಳಲ್ಲಿ ಅಡಿಗಿರುವ ಪ್ರತಿಭೆಗಳನ್ನು ಗುರುತಿಸುವ ಮೂಲಕ ಉತ್ತಮವಾದ ಕ್ರೀಢಾ ಪಟುವನ್ನಾಗಿ ಮಾಡಬೇಕು ಹಾಗೂ ಆ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು ಹಾಗೂ ಪ್ರಾಥಮಿಕ ಶಾಲಾ ಹಂತದಲ್ಲಿ ಉತ್ತಮವಾದ ಸಾಧನೆ ಮಾಡುವಂತೆ ಮಾಡುವುದರಜೋತೆಗೆ ಮಕ್ಕಳನ್ನು ದೇಶದ ಆಸ್ಥಿಯನ್ನಾಗಿ ಮಾಡಿದಾಗ ಮಾತ್ರ ಶಾಲೆಗೆ ಹಾಗೂ ತಾಲೂಕಿಗೆ ಹೆಸರು ಬರಲುಸಾಧ್ಯ ಅದಕ್ಕಾಗಿ ದೈಹಿಕ ಶಿಕ್ಷಕರು ಶ್ರಮಿಸಬೇಕು ಎಂದು ತಿಳಿಸಿದರು. ಜಿ.ಪಂ ಸದಸ್ಯರಾದ ನೀಲಪ್ಪ ಈಟೇರ ಹಾಗೂ ಎಸ್.ಕೆ.ಕರಿಯಣ್ಣನವರು ಮಾತನಾಡಿ ಮಕ್ಕಳು ಯಾವಸಂದರ್ಭದಲ್ಲಿಯೊ ಎದೆಗುಂದಭಾರದು ಅಂದಾಗ ಮಾತ್ರ ಹಿಡಿದ ಚಲವನ್ನು ಸಾಧಿಸಲು ಸಾದ್ಯ.ಸೋಲು ಗೇಲವುಗಳು ಸರ್ವೆಸಾಮಾನ್ಯ ಸೋತವರು ಎದೆಗುಂದದೆ ಸೋಲನ್ನು ಗೇಲುವಾಗಿ ಸ್ವಿಕರಿಸಿ ಅಂದಾಗ ಮಾತ್ರ ನೀವು ಗೇಲವುಸಾದಿಸಲು ಸಾಧ್ಯವಾಗುತ್ತದೆ ಅದಲ್ಲದೆ ಇಂದಿನ ಕ್ರೀಡಾಪಟುಗಳು ಕ್ರೀಡೆಯಲ್ಲಿ 69 ಫದಕಗಳನ್ನು ಗೆಲ್ಲುವ ಮೂಲಕ ನಮ್ಮದೇಶಕ್ಕೆ ಹೆಸರು ತಂದುಕೊಟ್ಟಿದ್ದಾರೆ ಇದಕ್ಕೆಲ್ಲ ಕಾರಣ ಕ್ರೀಡಾಪಟುಗಳಲ್ಲಿರುವ ದೈರ್ಯ ಅದಕ್ಕಾಗಿ ಮಕ್ಕಳು ದೈರ್ಯವನ್ನು ಕಳೆದು ಕೊಳ್ಳದೆ ಉತ್ತಮವಾದ ಆಟವನ್ನು ಪ್ರದರ್ಶಿಸುವ ಮೂಲಕ ತಾಲೂಕು,ಜಿಲ್ಲೆ,ರಾಜ್ಯಗಳಲ್ಲಿ ಗೆಲ್ಲುವ ಮೂಲಕ ದೇಶದಕ್ಕೆ ಹೆಸರು ತರುವಂತರಾಗಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಪರಿವೀಕ್ಷಕ ಪಿ.ಬಿ.ನಿಂಗನಗೌಡ್ರ ಪ್ರಾಸ್ಥಾವಕ ಮಾತನಾಡಿ ಕ್ರೀಡಾಕೊಟ ಶಿಕ್ಷಣದ ಒಂದು ಅವಿಭಾಜ್ಯ ಅಂಗವಾಗಿದೆ ಮಕ್ಕಳ ಸದೃಡತೆಗೆ ಅನುಕೊಲವಾಗಲಿ ಎಂದು ಈ ಕ್ರೀಡಾಕೊಟಗಳನ್ನು ನಡೆಸಲಾಗಿತ್ತಿದ್ದು ಈ ಕ್ರೀಡಾಕೊಟದಲ್ಲಿ ಮಕ್ಕಳು ಸೋತವೆಂಭ ಭಾವನೆಯನ್ನು ಮರೆತು ಗೆಲ್ಲುವೇವು ಎಂಭ ಭಾವನೆಯನ್ನು ಮಾಡಿಕೊಂಡು ಉತ್ತಮವಾದ ಪ್ರದರ್ಶನ ನೀಡಬೇಕು ಹಾಗೂ ನಿರ್ಣಾಯಕರು ಮಕ್ಕಳಿಗೆ ಭೇದಭಾವ ಮಾಡದೆ ನಿರ್ಣಾಯವನ್ನು ನೀಡಬೇಕು ಎಂದು ತಿಳಿಸಿದರು.
ಜಿ.ಪಂ ಸದಸ್ಯೆ ಮಾದೇವಕ್ಕ ಗೋಪಕಳ್ಳಿ, ತಾ.ಪಂ ಸದಸ್ಯೆ ಬಸವರಾಜ ಭರಮಗೌಡ್ರ, ಪಟ್ಟಣ ಪಂಚಾಯತ್ ಸದಸ್ಯ ಹರೀಶ ಕಲಾಲ, ಬಸವರಾಜ ಕಟ್ಟಿಮನಿ, ಅಶೋಕ ಜಾಡಬಂಡಿ, ಹನುಮಣತಪ್ಪ ಕುರುಬರ, ಸನಾವುಲ್ಲ ಮಕಾಂದಾರ, ಮಹೇಂದ್ರ ಭಡಳ್ಳಿ, ಅಲ್ತಾಪಖಾನ ಪಠಾಣ, ಶಾಲಾ ಸುಧಾರಣ ಸಮಿತಿ ಸದಸ್ಯ ರಾಘವೇಂದ್ರ ಸಿ.ಯು, ಎಸ್. ಸುರೇಶಕುಮಾರ, ಜಿ.ಹೆಚ್.ಪಾಟೀಲ, ಹೆಚ್.ಆರ್.ಪಾಟೀಲ ಇದ್ದರು.

loading...