ಮಗುವಿನ ಆಸಕ್ತಿ ಅರಿತು ಕಲಿಸಬೇಕು: ಪ್ರೊ. ಕುಂಬಾರ

0
0
loading...

 

ಜಮಖಂಡಿ: ಮಗುವಿನ ಮೇಲೆ ಶಿಕ್ಷಕರು ಮತ್ತು ಪಾಲಕರು ನಿಯಂತ್ರಣ ಇಡಬೇಕು. ಆದರೆ, ನಿಯಂತ್ರಣ ಇಟ್ಟ ಬಗ್ಗೆ ಮಗುವಿಗೆ ಗೊತ್ತಾಗಬಾರದು. ಮಗುವಿನ ಆಸಕ್ತಿ ಅರಿತು ಕಲಿಸಬೇಕು ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಎಸ್.ಎಂ. ಕುಂಬಾರ ಹೇಳಿದರು.
ಸ್ಥಳೀಯ ಬಸವಜ್ಯೊÃತಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂಸ್ಥೆಯ ಆಡಳಿತಾಧಿಕಾರಿ ಪ್ರೊ.ಬಸವರಾಜ ಕಡ್ಡಿ ಮುಖ್ಯ ಅತಿಥಿಯಾಗಿ ಮಾತನಾಡಿ, ಸಾಧಾರಣ ಶಿಕ್ಷಕರು ವಿದ್ಯಾರ್ಥಿಗಳಿಗೆ ವಿಚಾರಗಳ ವರ್ಗಾವಣೆ ಮಾಡುತ್ತಾರೆ. ಉತ್ತಮ ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ವ್ಯವಹರಿಸುತ್ತಾರೆ. ಆದರೆ, ಅತ್ಯುತ್ತಮ ಶಿಕ್ಷಕರು ವಿದ್ಯಾರ್ಥಿಗಳ ಬದುಕನ್ನು ರೂಪಿಸಬಲ್ಲರು ಎಂದರು.

ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳನ್ನು ಕೈ ಹಿಡಿದು ಮುನ್ನಡೆಸಬೇಕು. ವಿದ್ಯಾರ್ಥಿಗಳ ಮನಸ್ಸನ್ನು ತೆರೆದಿಡುವ ಮತ್ತು ಹೃದಯ ತಟ್ಟುವ ಕೆಲಸ ಮಾಡಬೇಕು ಎಂದರು.
ವಿದ್ಯಾರ್ಥಿಗಳಾದ ಶಿವಾನಂದ ಮಾಳೇದ, ಅಮೃತಾ ಪಾಟೀಲ, ಪ್ರಿಯಾ ಶಿರಗುಪ್ಪಿ, ಆನಂದಿ ಶಿಂಧೆ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಡಾ.ಗಿರೀಶ ಕಡ್ಡಿ ವೇದಿಕೆಯಲ್ಲಿದ್ದರು. ಲಕ್ಷಿö್ಮÃ ತಮದಡ್ಡಿ ಸ್ವಾಗತಿಸಿದರು. ಪ್ರಿಯಾ ನಾಗನೂರ ನಿರೂಪಿಸಿದರು.

loading...