ಮಹಾತ್ಮರ ವಚನ ಜೀವನದಲ್ಲಿ ಅಳವಡಿಸಿಕೊಳ್ಳದವರೇ ಹೆಚ್ಚು: ಗುಂಡಕಲ್ಲೆ

0
0
loading...

ಮಹಾತ್ಮರ ವಚನ ಜೀವನದಲ್ಲಿ ಅಳವಡಿಸಿಕೊಳ್ಳದವರೇ ಹೆಚ್ಚು: ಗುಂಡಕಲ್ಲೆ
ಕನ್ನಡಮ್ಮ ಸುದ್ದಿ-ಬೆಳಗಾವಿ : ಮಹಾತ್ಮರ ವಚನಗಳನ್ನು ಬರೀ ಬಾಯಿ ಮಾತಿನಲ್ಲಿ ಹೇಳುವವರು ಹೆಚ್ಚಾಗಿದ್ದು, ಜೀವನದಲ್ಲಿ ಅಳವಡಿಸಿಕೊಳ್ಳುವವರು ತೀರಾ ವಿರಳವಾಗಿದ್ದಾರೆ ಎಂದು ನಿವೃತ್ತ ತಹಶೀಲ್ದಾರ ಎಸ್.ಸಿ.ಗುಂಡಕಲ್ಲೆ ಬೇಸರ ವ್ಯಕ್ತಪಡಿಸಿದರು.
ರವಿವಾರ ಶ್ರಿÃ ಅಂiÀÄ್ಯಪ್ಪ ಮಂದಿರದಲ್ಲಿ ನಡೆದ ಮನೆ ಮನೆಯಲ್ಲಿ ವಚನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬರೀ ವಚನೋತ್ಸವ ಕಾರ್ಯಕ್ರಮದಲ್ಲಿ ವಚನ ಹೇಳಿ ಜೀವನದಲ್ಲಿ ಅನಾಚಾರ ಮಾಡುವದಕ್ಕಿಂತ ವಚನಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವದು ಅಗತ್ಯ ಎಂದು ಪ್ರತಿಪಾದಿಸಿದರು.
ಬೋರಪ್ಪ ಹಳ್ಳೂರಿ, ಗಂಗಾಧರಯ್ಯ ಸಾಲಿಮಠ, ಎಸ್.ಎಂ.ಪಾಟೀಲ, ವ್ಹಿ.ಸಿ.ರಾಮದುರ್ಗ, ಸಿದ್ದಪ್ಪ ಪೂಜಾರಿ ಇವರು ಕಾರ್ಯಕ್ರಮದಲ್ಲಿ ಮಾತನಾಡಿದರು. ಸುರೇಂದ್ರ ಗುರುಸ್ವಾಮಿ ಸಾನಿಧ್ಯ ವಹಿಸಿದ್ದರು.
ಶ್ರಿÃರಂಗ ಜೋಶಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಮಲ್ಲಿಕಾರ್ಜುನ ಶಿರಗುಪ್ಪಿ ಶೆಟ್ಟರ್ ಪ್ರಾಸ್ತಾವಿಕ ಮಾತನಾಡಿದರು. ಗೋಪಾಲ ಖಟಾವಕರ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಎಸ್.ಎಸ್. ರಾಮದುರ್ಗ, ಅಡವೇಶ ಹೀರೆಮಠ, ಪಿಂಟು ಸ್ವಾಮಿ, ಅರವಿಂದ ಪಾಟೀಲ, ಅನಿರುದ್ದ ಅನಗೋಳ, ಎಂ.ಎಸ್.ಪಾಟೀಲ, ಆಯ್.ಎಸ್.ಕುಲಕರ್ಣಿ, ಅಶೋಕ ಬಸ್ತವಾಡಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

loading...