ಮಹಿಳೆ-ಮಕ್ಕಳಿಗೆ ಸೌಲಭ್ಯಗಳ ಕುರಿತು ಗ್ರಾಮ ಮಟ್ಟದಲ್ಲಿ ಜಾಗೃತಿ ಮೂಡಿಸಲು ಕರೆ

0
0
loading...

 

ಕನ್ನಡಮ್ಮ ಸುದ್ದಿ-ಗದಗ: ಸಂಕಷ್ಠಕ್ಕಿÃಡಾಗುವ ಮಹಿಳೆ ಮತ್ತು ಮಕ್ಕಳ ಜೀವನದಲ್ಲಿ ಸಕಾಲಕ್ಕೆ ಸೌಲಭ್ಯ ಒದಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ಒದಗಿಸಿರುವ ಸೌಲಭ್ಯಗಳ ಕುರಿತು ನಗರ ಹಾಗೂ ಗ್ರಾಮ ಮಟ್ಟದಲ್ಲಿ ಮಾಹಿತಿ ಒದಗಿಸಿ ಜಾಗೃತಿ ಮೂಡಿಸಲು ಇಲಾಖಾ ಅಧಿಕಾರಿಗಳು ಮತ್ತು ಆ ಸೇವೆಗಳನ್ನು ಒದಗಿಸಲು ನೇಮಕಗೊಂಡ ಸ್ವಯಂ ಸಂಸ್ಥೆಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ಪ್ರಯತ್ನಿಸಬೇಕು ಎಂದು ಗದಗ ಜಿಲ್ಲಾ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ತಿಳಿಸಿದರು.
ಗದಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ದುರ್ಬಲ ಮತ್ತು ಸಂಕಷ್ಟಕ್ಕಿÃಡಾಗುವ ಮಹಿಳೆ, ಮಕ್ಕಳ ಸಂರಕ್ಷಣೆ ಮತ್ತು ಕಲ್ಯಾಣಕ್ಕಾಗಿ ಜಾರಿಯಾಗುತ್ತಿರುವ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ೨೦೦೫, ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಟ ತಡೆಕಾಯ್ದೆಗಳ ಜಾರಿ, ಸಾಂತ್ವನ, ಸ್ವಾಧಾರ, ಗೆಳತಿ ವಿಶೇಷ ಚಿಕಿತ್ಸಾ ಘಟಕ, ಬಾಲ್ಯವಿವಾಹ ತಡೆ ಹಾಗೂ ಸ್ಥೆöÊರ್ಯ ಯೋಜನೆಗಳ ತ್ರೆöÊಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ಯೋಜನೆಗಳ ಜಾರಿಗೊಳಿಸುತ್ತಿರುವ ಸಂಸ್ಥೆಗಳು ಸಭೆಗೆ ಹಾಜರಾಗುವಾಗ ಹಿಂದಿನ ತ್ರೆöÊಮಾಸಿಕದವರೆಗೂ ಸಂಸ್ಥೆ £ರ್ವಹಿಸಿದ ಕಾರ್ಯಗಳ ಹಾಗೂ ಅನುಪಾಲನಾ ವರದಿಗಳ ಕುರಿತು ಆಧಾರ ಸಹಿತವಾಗಿ ಮಾಹಿತಿ ಒದಗಿಸಲು ಕಟ್ಟುನಿಟ್ಟಿನ ಆದೇಶ ನೀಡಿದರು.
ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ ೨೦೦೫ ಕುರಿತು ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಕಾನೂನು ನೆರವು ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಧೀಶರಾದ ಶ್ರಿÃಮತಿ ರೇಣುಕಾ ಕುಲಕರ್ಣಿ ಮಾತನಾಡಿ ಈ ಕಾಯ್ದೆಯ ಪರಿಣಾಮಕಾರಿ ಜಾರಿಗೆಗೆ ಜಿಲ್ಲೆಯಲ್ಲಿ ವಿಧವಾ ಕೋಶವೊಂದನ್ನು ಪ್ರಾರಂಭಸಲಾಗಿದೆ.

ಗದಗ ಜಿಲ್ಲೆಯಲ್ಲಿ ಮಹಿಳೆಯರ ಮತ್ತು ಮಕ್ಕಳ ದೌರ್ಜನ್ಯ ತಡೆಗೆ ಸಂಬಂಧಿಸಿದಂತೆ ದೌರ್ಜನ್ಯಕ್ಕೆ ಒಳಪಟ್ಟ ಮಹಿಳೆಯರಿಗೆ ಕಾನೂನು ಸಲಹೆ, ಆರ್ಥಕ ಪರಿಹಾರ, ತಾತ್ಕಾಲಿಕ ಆಶ್ರಯ ನೀಡುವ ಸಾಂತ್ವನ ಕೇಂದ್ರಗಳಲ್ಲಿ ಒಟ್ಟು ೪೯೦ ಪ್ರಕರಣ ದಾಖಲಾಗಿದ್ದು ೩೩೮ ಇತ್ಯರ್ಥಗೊಂಡಿವೆ. ಕೌಟುಂಬಿಕ ಹಿಂಸೆ ಮಹಿಳಾ ಸಂರಕ್ಷಣೆ ಕಾಯ್ದೆಯಡಿ ೩೫ ಪ್ರಕರಣ ದಾಖಲಾಗಿದ್ದು ೨೩ ಇತ್ಯರ್ಥಗೊಂಡಿವೆ, ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ತುರ್ತು ವೈದ್ಯಕೀಯ ಚಿಕಿತ್ಸೆ, ಪೊಲೀಸ್, ಕಾನೂನು ನೆರವು ಹಾಗೂ ಸಮಾಲೋಚನಾ ಸೌಲಭ್ಯ ಕಲ್ಪಿಸುವ ಸಮಗ್ರ ಸೌಲಭ್ಯಕ್ಕಾಗಿ ಗದಗ ಜಿಲ್ಲಾಸ್ಪತ್ರೆಯಲ್ಲಿ ೨೦೧೪ರ ನವೆಂಬರ ಒಂದರಿಂದ ಕಾರ್ಯರಂಭಿಸಿರುವ ಗೆಳತಿ ವಿಶೇಷ ಚಿಕಿತ್ಸಾ ಘಟಕದಲ್ಲಿ ೧೬ ಪ್ರಕರಣಗಳು ದಾಖಲಾಗಿದ್ದು ನ್ಯಾಯಾಲಯದಲ್ಲಿವೆ. ದೌರ್ಜನ್ಯ, ಅಸಿಡ್ ದಾಳಿಗೆ ಒಳಗಾದ ಮಹಿಳೆಯರಿಗೆ ಆರ್ಥಿಕ ಪರಿಹಾರ ನೀಡುವ ಸ್ಥೆöÊರ್ಯ ಯೋಜನೆಯಡಿ ಒಂದು ಪ್ರಕರಣಕ್ಕೆ ಪರಿಹಾರ ನೀಡಲಾಗಿದೆ.
ಸಾಮಾಜಿಕ ರಕ್ಷಣೆ, ಬಹಿಷ್ಕಾರ, ಮನೆಯಿಂದ ಹೊರಬಂದ ಪಾಲಕರಿಲ್ಲದ ಬಡ ಮಹಿಳೆ ಅಥವಾ ಬಾಲಕಿ ಮುಂತಾದ ವಿವಿಧ ಕಾರಣಗಳಿಂದಾಗಿ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಆಶ್ರಯ ನೀಡಿ ಅವರ ಹಾಗೂ ಅವರ ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ರಕ್ಷಣೆ ಒದಗಿಸುವ ಹಾಗೂ ಅವರಿಗೆ ಪುನರ್ವಸತಿ ಕಲ್ಪಿಸಲು ಸ್ವಾಧಾರ ಗೃಹ ಸ್ಥಾಪಿಸಲಾಗಿದ್ದು ೨೦೧೮ರ ಎಪ್ರಿÃಲ ರಿಂದ ಅಗಸ್ಟ ಅವಧಿಯಲ್ಲಿ ೨೭ ಮಹಿಳೆಯರು ೯ ಮಕ್ಕಳು ಆಶ್ರು ಪಡೆದಿದ್ದಾರೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಡಾ.ಎಸ್.ಎಂ.ಹೊನಕೇರಿ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ಪಡಗಣ್ಣವರ, ನಿರೂಪಣಾಧಿಕಾರಿ ಅಕ್ಕಮಹಾದೇವಿ ಮುಂತಾದವರು ಪಾಲ್ಗೊÃಂಡಿದ್ದರು.

loading...