ಮಾಧಕ ವಸ್ತುಗಳಿಗೆ ಮುಕ್ತಿ ನೀಡಿ : ಸಂಕನಾಳ

0
0

loading...

ಮಾಧಕ ವಸ್ತುಗಳಿಗೆ ಮುಕ್ತಿ ನೀಡಿ : ಸಂಕನಾಳ
ಕನ್ನಡಮ್ಮ ಸುದ್ದಿ-ಸುರೇಬಾನ: ಶ್ರಿÃಮಂತ ಶಾಲಾ-ಕಾಲೇಜುಗಳಲ್ಲಿ ಶ್ರಿÃಮಂತರ ಮಕ್ಕಳು ಹೆಚ್ಚು ದುಶ್ಚಟ ಮಾಡಿ ಹಾಳಾಗುತ್ತಿದ್ದಾರೆ ಎಂದು ರಾಮದುರ್ಗ ಪಿ.ಎಸ್.ಐ ರಾಮನಗೌಡ ಸಂಕನಾಳ ಕಳವಳ ವ್ಯಕ್ತಪಡಿಸಿದ್ದರು.
ಇತ್ತಿÃಚೆಗೆ ಅವರು ಇಲ್ಲಿನ ಎಸ್.ಎ.ಸಾರಂಗಮಠ ಪದವಿ ಕಾಲೇಜಿನಲ್ಲಿ ಆಯೋಜಿಸಿದ ಮಾದಕ ವಸ್ತುಗಳ ವಿರೋಧಿ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡುತ್ತಾ, ಸರಕಾರದಿಂದ ಪರವಾಣಿಗೆ ಪಡೆದ ಪದಾರ್ಥಗಳೆ ಹೆಚ್ಚು ನಶೆ ಮಾಡುತ್ತದೆ, ಆದರೆ ಸರ್ಕಾರದಿಂದ ಪರವಾನಗಿ ಪಡೆಯದ ಪದಾರ್ಥಗಳಾದ ಗಾಂಜಾ, ಅಫೀಮು ಮನುಷ್ಯನಿಗೆ ನಿಶೆ ಮಾಡುತ್ತಿವೆ. ಅಂತಹ ವಸ್ತುಗಳನ್ನು ಯಾರೂ ಸೇವನೆ ಮಾಡಬಾರದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ರಾಮದುರ್ಗ ಸಿ.ಪಿ.ಐ ಶ್ರಿÃನಿವಾಸ ಹಂಡಾ ಈಗಿನ ಕಾಲದ ಯುವಕರು ಮಾದಕವಸ್ತುಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಸಿನಿಮಾ ಮತ್ತು ಧಾರಾವಾಹಿಗಳು ಯುವಕರ ಮೇಲೆ ದುಷ್ಪರಿಣಾಮ ಬೀರುತ್ತವೆ. ಅಶಿಕ್ಷಿತರಿಗಿಂತಲು ಸುಶಿಕ್ಷಿತರು ಮಾದಕವಸ್ತುಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ ಅದಕ್ಕೆ ನಾವೆಲ್ಲರೂ ಮಾದಕ ವಸ್ತುಗಳಿಗೆ ಮಾರುಹೋಗದಿರಿ ಎಂದು ಎಚ್ಚರಿಕೆ ನೀಡಿದರು.
ಪತ್ರಕರ್ತ ಎಸ್ ಆರ್ ಗುರುಬಸಣ್ಣವರ ಮಾತನಾಡುತ್ತಾ, ಯುವಕರಿಗಿಂತ ಯುವತಿಯರದೆ ಬಹು ಮುಖ್ಯವಾದ ಪಾತ್ರ. ಅದಕ್ಕೆ ತಾವು ತಮ್ಮ ಕುಟುಂಬದ ಸದಸ್ಯರುಗಳು ದುಶ್ಚಟಕ್ಕೆ ಬಲಿಯಾಗದಂತೆ ನೋಡಿಕೊಳ್ಳುವದು ತಮ್ಮ ಆಧ್ಯ ಕರ್ತವ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಯು ಎಮ್ ಶಿವನಗೌಡರ, ಬಿ ಎಫ್ ಕರಿಗಾರ, ಡಾ. ಪಿ.ಆರ್ ಮಳಲಿ, ಎಸ್ ಎನ್ ಮುಷ್ಠಿಗೇರಿ ಇದ್ದರು.ರವಿ ಎಸ್ ಗಡದೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

loading...