ಮಿನಿ ವಿಧಾನಸೌಧ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ

0
0
loading...

ಕನ್ನಡಮ್ಮ ಸುದ್ದಿ-ಕುಮಟಾ: ಕುಮಟಾ-ಹೊನ್ನಾವರ ವಿಧಾನಸಭಾ ಕ್ರೆÃತ್ರದ ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ ಅವರ ಅವಿರಥ ಪ್ರಯತ್ನದಿಂದ ಕುಮಟಾದ ಡಯಟ್ ಕಾಲೇಜ್‌ನ ಆವರಣದಲ್ಲಿ ೧೦ ಕೋಟಿ ರೂ. ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ದೊರೆತ್ತಿದ್ದು, ಜನ ಸಾಮಾನ್ಯರು ಸರ್ಕಾರಿ ಕಾರ್ಯಗಳಿಗಾಗಿ ವಿವಿಧ ಇಲಾಖೆಗಳ ಕಚೇರಿಗಳನ್ನು ಹುಡುಕಿಕೊಂಡು ಅಲೆದಾಡುವುದು ತಪ್ಪಿದಂತಾಗಿದೆ.
ಪಟ್ಟಣದಲ್ಲಿ ವಿವಿಧ ಇಲಾಖೆಗಳ ಕಚೇರಿಗಳು ಬೇರೆ ಬೇರೆ ಪ್ರದೇಶಗಳಲ್ಲಿರುವುದರಿಂದ ಕಚೇರಿ ಕಾರ್ಯಗಳಿಗಾಗಿ ಗ್ರಾಮೀಣ ಭಾಗಗಳಿಂದ ಆಗಮಿಸುವ ಜನರು ಕಚೇರಿ ಹುಡುಕಿಕೊಂಡು ಅಲೆದಾಡುವಂತಾಗಿದ್ದರಿಂದ ಸಮಸ್ಯೆಯಾಗಿತ್ತು. ಹಾಗಾಗಿ ಒಂದೇ ಸೂರಿನಡಿ ಎಲ್ಲ ಇಲಾಖೆಗಳ ಕಚೇರಿ ನಿರ್ಮಿಸಿಕೊಡುವ ಮೂಲಕ ಜನರಿಗಾಗುತ್ತಿರುವ ಸಮಸ್ಯೆಯನ್ನು ನಿವಾರಿಸಬೇಕೆಂದು ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರು ಪಣತೊಟ್ಟಿದ್ದರು. ಹಾಗಾಗಿ ಒಂದೇ ಕಟ್ಟಡದೊಳಗೆ ಎಲ್ಲ ಇಲಾಖೆಗಳ ಕಚೇರಿಗಳಿರುವಂತೆ ಮಿನಿ ವಿಧಾನಸೌಧ ನಿರ್ಮಿಸಲು ಅವರು ಶಾಸಕರಾಗಿದ್ದಾಗ ಸರ್ಕಾರದ ಮಟ್ಟದ ಪ್ರಯತ್ನ ಮಾಡಿ ಕುಮಟಾಕ್ಕೆ ಮಿನಿ ವಿಧಾನಸೌಧವನ್ನು ಮಂಜೂರಿ ಮಾಡಿಸಿದ್ದರು. ಆದರೆ ಇದಕ್ಕೆ ಅಗತ್ಯವಾದ ೩ ಎಕರೆ ಜಮೀನು ಹುಡುಕುವುದು ಕಷ್ಟವಾಗಿತ್ತು. ಆ ಸಂದರ್ಭದಲ್ಲಿ ಟಯಟ್ ಕಾಲೇಜ್‌ನ ಪ್ರಮುಖರ ಮನವೊಲಿಸಿ, ಕಾಲೇಜ್ ಆವರಣದಲ್ಲಿ ೩ ಎಕರೆ ಪ್ರದೇಶವನ್ನು ನಿಗಧಿಪಡಿಸಿ ಪ್ರಸ್ತಾವನೆ ಸಿದ್ದಗೊಳಿಸಿದ್ದರು. ಸುಮಾರು ೧೨.೫ ಕೋಟಿ ರೂ. ಅಂದಾಜು ವೆಚ್ಚದಲ್ಲಿ ಮಿನಿ ವಿಧಾನಸೌಧದ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಆದರೆ ಸಂಬಂಧಪಟ್ಟ ಇಲಾಖೆಯ ಸಚಿವರು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಗರಿಷ್ಠ ೧೦ ಕೋಟಿ ರೂ. ಯೋಜನೆಗೆ ಮಾತ್ರ ಮಂಜೂರಿ ನೀಡುವ ಅವಕಾಶವಿದೆ ಎಂದು ಸೂಚಿಸಿದ್ದರಿಂದ ಪ್ರಸ್ತಾವನೆಯನ್ನು ಪರಿಷ್ಕೃರಿಸಲಾಗಿತ್ತು. ಅದರಂತೆ ೧೦ ಕೋಟಿ ರೂ.ಗಳ ಅಂದಾಜುವೆಚ್ಚದಲ್ಲಿ ಪÅನಃ ಪ್ರಸ್ತಾವನೆ ಸಲ್ಲಿಕೆಯಾಗಿ ಮಂಜೂರಾಗಿತ್ತು. ಅಷ್ಟರಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಈ ಯೋಜನೆಯ ಆಡಳಿತಾತ್ಮಕ ಅನುಮೋದನೆ ಪ್ರಕ್ರಿಯೆ ತಟಸ್ತವಾಗಿತ್ತು. ಹೊಸ ಮೈತ್ರಿ ಸರ್ಕಾರ ರಚನೆಯಾಗಿ ಕೆಲ ತಿಂಗಳ ಬಳಿಕ ಕುಮಟಾ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಈಗ ಆಡಳಿತಾತ್ಮಕ ಅನುಮೋದನೆ ದೊರೆತ್ತಿರುವುದರಿಂದ ಜನ ಸಾಮಾನ್ಯರು ಸರ್ಕಾರಿ ಕಾರ್ಯಗಳಿಗಾಗಿ ವಿವಿಧ ಇಲಾಖೆಗಳ ಕಚೇರಿಗಳನ್ನು ಹುಡುಕಿಕೊಂಡು ಅಲೆದಾಡುವುದು ತಪ್ಪಿದಂತಾಗಿದೆ. ಕೊನೆಗೂ ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರ ಪ್ರಯತ್ನ ಫಲಕೊಟ್ಟಿರುವುದು ಸಾರ್ವಜನಿಕರಿಗೆ ಪ್ರಶಂಸೆಗೆ ಕಾರಣವಾಗಿದೆ.

ಈ ಕುರಿತು “ಕನ್ನಡಮ್ಮ” ಪತ್ರಿಕೆಯೊಂದಿಗೆ ಮಾತನಾಡಿದ ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ ಅವರು, ಜನರಿಗೆ ಅನುಕೂಲವಾಗಲೆಂದು ಮಿನಿ ವಿಧಾನಸೌಧ ನಿರ್ಮಾಣಕ್ಕೆ ಸರ್ಕಾರ ಮಟ್ಟದಲ್ಲಿ ಸತತವಾಗಿ ಪ್ರಯತ್ನಿಸಿದ್ದೆ. ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ತರುವಷ್ಟರಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಈ ಕಾರ್ಯಕ್ಕೆ ವಿಳಂಭವಾಗಿತ್ತು. ಈಗ ನಮ್ಮದೆ ಸರ್ಕಾರವಿರುವುದರಿಂದ ಈ ಬಗ್ಗೆ ಜಿಲ್ಲಾ ಉಸ್ತುವಾರಿ ಆರ್.ವಿ.ದೇಶಪಾಂಡೆ ಅವರನ್ನು ಈ ಸಂಬಂಧ ಒತ್ತಾಯಿಸಿದ್ದೆ. ಹಾಗಾಗಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆತ್ತಿದೆ. ಈ ಬಜೆಟ್‌ನಲ್ಲಿ ಹಣ ಕೂಡ ಬಿಡುಗಡೆಯಾಗಲಿದೆ ಎಂದರು.

loading...