ಮುಕ್ತಿಗೆ ಭಕ್ತಿ ಎಂಬುವದೊಂದು ಸಾಮಗ್ರಿ : ಶ್ರಿÃಗಳು

0
12
loading...

ಬೀಳಗಿ: ಎಲ್ಲಕ್ಕಿಂತ ಶ್ರೆÃಷ್ಠವಾದದ್ದು ಭಕ್ತಿ. ಮುಕ್ತಿ ಹೊಂದಲು ಭಕ್ತಿ ಎಂಬುವದೊಂದು ಸಾಮಗ್ರಿಯಾಗಿದೆ. ಬೇಡರ ಕಣ್ಣಪ್ಪ ಮಾಂಸದ ನೈವೇದ್ಯ ಅರ್ಪಿಸಿ ಶಿವನನ್ನು ಒಲಿಸಿಕೊಂಡ ಮಹಾನ್ ಶಿವಭಕ್ತನೆಂದು ಕೌದೇಶ್ವರ ಸಾಧು ಸಂಸ್ಥಾನ ಮಠದ ಮಾಧವಾನಂದ ಸ್ವಾಮಿಗಳು ಹೇಳಿದರು.
ತಾಲೂಕಿನ ಅರಕೇರಿ ಗ್ರಾಮದ ಎಸ್‌ಟಿ ಕಾಲನಿ ಶ್ರಿÃ ಬೇಡರ ಕಣ್ಣಪ್ಪ ಯುವಕ ಸಂಘದ ನಾಮಫಲಕ ಅನಾವರಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಪ್ರತಿಯೊಬ್ಬರು ಶ್ರದ್ಧೆ ಮತ್ತು ಭಕ್ತಿಯಿಂದ ನಡೆದು, ದಾನ ಧರ್ಮಾಧಿಗಳನ್ನು ಮಾಡಿ ಜೀವನ ಪಾವನ ಮಾಡಿಕೊಳ್ಳಬೇಕೆಂದು ಹೇಳಿದರು.

ತಾಲೂಕಾ ಬಿಜೆಪಿ ಮಾಜಿ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಮಾತನಾಡಿ, ಸಮಾಜದ ವಿಷಯ ಬಂದಾಗ ರಾಜಕಾರಣ ಬದಿಗೊತ್ತಿ ಸಂಘಟಿತಗೊಳ್ಳಬೇಕು. ದುಶ್ಚಟಗಳಿಂದ ಹೊರಬಂದು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕೆಂದು ಕಿವಿ ಮಾತು ಹೇಳಿದರು.
ಪಿಕೆಪಿಎಸ್ ಉಪಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಪ್ರಾಸ್ತಾವಿಕವಾಗಿ, ಪತ್ರಕರ್ತ ಡಿ.ಎಂ. ಸಾಹುಕಾರ ನಾಮಫಲಕ ಅನಾವರಣಗೊಳಿಸಿ ಮಾತನಾಡಿದರು.

ವೇದಿಕೆ ಮೇಲೆ ಯಮನಪ್ಪ ಮಲ್ಲಾರ, ಜಿ.ಟಿ. ಬೆನಕಟ್ಟಿ, ಎಫ್.ಆರ್. ಬಿಸನಾಳ, ಎಚ್.ಬಿ. ಆಗೋಜಿ, ಗ್ರಾಪಂ ಸದಸ್ಯರಾದ ಎಂ.ಸಿ. ಗಾಣಗೇರ, ಈರಪ್ಪ ಲಗಳಿ, ಎಚ್.ಬಿ. ಗುರಣ್ಣವರ, ಕಲ್ಲಪ್ಪ ಆಲಗುಂಡಿ, ಬಿ.ಎ. ಪಾಟೀಲ, ಬಿ. ಆರ್. ಪಾಟೀಲ, ಬಿ.ಎಸ್. ಕಾಜಗಾರ, ಬೇಡರ ಕಣ್ಣಪ್ಪ ಯುವಕ ಸಂಘದ ಅಧ್ಯಕ್ಷ ಪಡಿಯಪ್ಪ ಕಲ್ಲೊಳ್ಳಿ, ಉಪಾಧ್ಯಕ್ಷ ಪಾಂಡು ಚಂಡಕಿ, ಕಾರ್ಯದರ್ಶಿ ಸದಪ್ಪ ಭೂಷಣ್ಣವರ ಸೇರಿದಂತೆ ಮತ್ತಿತರರು ಇದ್ದರು.

loading...