ಮೈತ್ರಿ ಸರ್ಕಾರ ರೈತರ ಜೀವನ ಜೊತೆ ಚೆಲ್ಲಾಟವಾಡುತ್ತಿದೆ: ಸಂಸದ ಅಂಗಡಿ ಆರೋಪ

0
0
loading...

ಮೈತ್ರಿ ಸರ್ಕಾರ ರೈತರ ಜೀವನ ಜೊತೆ ಚೆಲ್ಲಾಟವಾಡುತ್ತಿದೆ: ಸಂಸದ ಅಂಗಡಿ ಆರೋಪ
ಬೈಲಹೊಂಗಲ :ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ರೈತರ ಆದಾಯ ದ್ವಿÃಗುಣ ಗೊಳಿಸುವ ಉದ್ದೆÃಶದಿಂದ ರೈತರ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ಘೋಷಿಸಿ ಖರೀದಿ ಕೇಂದ್ರ ತೆರೆಯುವಂತೆ ಸೂಚಿಸಿದರು ರಾಜ್ಯ ಸರ್ಕಾರ ಸ್ಪಂದಿಸದೆ ರೈತರ ಜೀವನ ಜೋತೆ ಚೆಲ್ಲಾಟವಾಡಿ ಅವರ ಕಣ್ಣಿಗೆ ಮಣ್ಣೆರೆಚುವ ಕಾರ್ಯಮಾಡುತ್ತಿದೆ ಎಂದು ಸಂಸದ ಸುರೇಶ ಅಂಗಡಿ ಗಂಭೀರವಾಗಿ ಆಪಾದಿಸಿದರು.
ಅವರು ರವಿವಾರ ಜಿಲ್ಲಾ ಭಾಜಪ (ಗ್ರಾ) ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಅವರ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ಉದ್ದೆÃಶಿಸಿ ಮಾತನಾಡಿ, ರಾಜ್ಯದ ರೈತರು ನಾಲ್ಕೆöÊದು ವರ್ಷಗಳಿಂದ ಸಮರ್ಪಕವಾಗಿ ಮಳೆಯಾಗದ ಕಾರಣ ತೀವ್ರ ಸಂಕಷ್ಟ ಪರÀಸ್ಥಿತಿ ಎದುರಿಸಿ ಧನಕರಗಳಿಗೆ, ಕುಡಿಯುವ ನೀರು ಮತ್ತು ಮೆವಿನ ಕೊರತೆ ಎದುರಿಸುವಂತಾಗಿತ್ತು. ಪ್ರಸಕ್ತ ಹಂಗಾಮಿನಲ್ಲಿ ಜಿಲ್ಲೆಯಾಧ್ಯಂತ ಉತ್ತಮ ಮಳೆಯಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಿ ರೈತರು ತಮ್ಮ ಫಲವತ್ತಾದ ಭೂಮಿಯಲ್ಲಿ ಬೆಳೆಗಳನ್ನು ಬೆಳೆದು ಉಲ್ಲಾಸ ಜೀವನ ನಡೆಸಬೇಕೆಂಬ ಆಸೆಯಿಂದ ಫಸಲಿನ ಉತ್ಪನ್ನ ಕೈಗೆ ಬಂದಿದೆ. ಕಳೆದ ಹಲವಾರು ವರ್ಷಗಳಿಂದ ರೈತರು ತಮ್ಮ ಬೆಳೆಗೆ ಬೆಂಬಲ ಬೆಲೆ ಕೊಡುವಂತೆ ಆಗ್ರಹಿಸಿ ಹೋರಾಟ ನಡೆಸಿದರು ಹಿಂದಿನ ಸರ್ಕಾರ ರೈತರಿಗೆ ಕವಡೆ ಕಾಸಿನ ಕಿಮ್ಮತ್ತು ನೀಡಿರಲಿಲ್ಲ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ರೈತರ ಬೆಳೆಗಳಾದ ಜೋಳ, ಹೆಸರು, ಸೋಯಾಬಿನ, ಗೋವಿನಜೋಳ, ಉದ್ದು, ಎಳ್ಳು, ಹತ್ತಿ, ಕಬ್ಬು, ಕಡಲೆ ಹೀಗೆ ೧೪ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿ ಖರೀದಿ ಕೇಂದ್ರ ತೆರೆಯುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದರು ಅತ್ತ ಗಮನಕೊಡದೆ ರೈತ ವಿರೋಧಿ ನೀತಿ ಅನುಸರಿಸುತ್ತಿರುವದು ತೀವ್ರ ಖಂಡನೀಯವಾಗಿದೆ ಎಂದರು.
ಮುಂಗಾರು ಬೆಳೆಯಾದ ಹೆಸರು ಬಂದು ಮಾರುಕಟ್ಟೆಗೆ ಪ್ರವೇಶವಾಗುತ್ತಿದ್ದರು ರಾಜ್ಯ ಅಪವಿತ್ರ ಮೈತ್ರಿಯ ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯನ್ನು ಮರೆತು ಒಕ್ಕುಟ ವ್ಯವಸ್ಥೆಯನ್ನು ಕಗ್ಗೊÃಲೆಮಾಡಲು ಹೋರಟಿರುವದು ಕಳವಳಕಾರಿಯಾಗಿದೆ ಎಂದರು. ಹೆಸರು ಬೆಳೆಗೆ ಕೇಂದ್ರ ಸರ್ಕಾರ ರೂ ೬೯೭೫/ಕ್ವಿ ನಿಗದಿಮಾಡಿದ್ದರೆ ಕಾಳ ಸಂತೆಯಲ್ಲಿ ದಲ್ಲಾಳಿಗಳು ರೂ೪೦೦೦ ದಿಂದ ೫೦೦೦ ವರೆಗೆ ಖರೀದಿ ಮಾಡುತ್ತಿರುವದರಿಂದ ರೈತರಿಗೆ ನಷ್ಟ ಉಂಟಾಗುತ್ತಿದೆ. ರಾಜ್ಯ ಸರ್ಕಾರಕ್ಕೆ ಜಿಲ್ಲಾಧಿಕಾರಿಗಳು ರೈತರ ಸಂಕಷ್ಟವನ್ನು ಅರಿತು ಪತ್ರ ಬರೆದ ಫಲಪ್ರದವಾಗಿ ರಾಜ್ಯ ಸರ್ಕಾರ ಅಗಷ್ಟ ೩೦ರಂದು ಸಹಕಾರ ಇಲಾಖೆಯ ಅಧೀನ ಕಾರ್ಯದರ್ಶಿ ವಿ.ರತ್ನಮ್ಮ ಆದೇಶ ಹೊರಡಿಸಿ ಅ೩೧ರಿಂದ ಸೆ.೯ರವರೆಗೆ ಹೆಸರು ಬೆಳೆದ ರೈತರ ಹೆಸರು ನೋಂದಣಿ ಕಾರ್ಯ ಮಾಡಬೇಕು ಮತ್ತು ಸೆ.೯ ರಿಂದ ಹೆಸರು ಖರೀದಿ ಪ್ರಾರಂಬಿಸುವಂತೆ ಆದೇಶ ಮಾಡಿದಾರೆ. ಆದರೆ ಈ ಕುರಿತು ಅಧಿಕಾರಿಗಳಿಗೆ ಸ್ಪಷ್ಟವಾದ ನಿರ್ದೇಶನ ಇಲ್ಲದಿರುವದನ್ನು ನೋಡಿದರೆ ರಾಜ್ಯ ಸಮ್ಮಿಶ್ರ ಸರ್ಕಾರ ಆಡಳಿತದ ಮೇಲೆ ಹಿಡಿತವಿಲ್ಲದಿರುವ ದಿವಾಳಿ ಸರ್ಕಾರವಾಗಿದೆ ಎಂಬುದನ್ನು ಸಾಬಿತು ಮಾಡಿದ್ದಾರೆ ಎಂದು ದೂರಿದರು.
ಇಲ್ಲಿಯವರೆಗೆ ಜಿಲ್ಲೆಯ ಬೈಲಹೊಂಗಲ, ಸವದತ್ತಿ ರಾಮದುರ್ಗ, ದೊಡವಾಡ, ಮೂರಗೋಡ ಮತ್ತು ಯರಗಟ್ಟಿಯಲ್ಲಿ ಯಾವುದೆ ಖರೀದಿ ಕೇಂದ್ರ ತೆರೆಯದೆ ಕಾಟಾಚಾರಕ್ಕೆ ರೈತರ ಹೆಸರುಗಳನ್ನು ತಾತ್ಕಾಲಿಕವಾಗಿ ಮಾತ್ರ ನೋಂದಣಿ ಕಾರ್ಯ ಮಾಡುತ್ತಿರುವದು ಕಂಡುಬಂದಿದೆ ವಿನಃ ಅಧಿಕೃತವಾಗಿ ಯಾವುದೆ ಪ್ರಕ್ರಿÃಯೆ ನಡೆಯದೆ ವ್ಯಾಪಾರಿಗಳ ಪರವಾಗಿ ರಾಜ್ಯ ಸರ್ಕಾರ ಟೊಂಕು ಕಟ್ಟಿ ನಿಂತಿರುವದು ಮೇಲ್ನೊÃಟಕ್ಕೆ ಕಂಡುಬಂದಿದೆ ಎಂದು ಗಂಭೀರವಾಗಿ ಆಪಾದಿಸಿ ಕಿಡಿ ಕಾರಿದರು. ರೈತರು ಬೀದಿಗಿಳಿದು ಹೋರಾಟಮಾಡುವ ಮುನ್ನವೆ, ತಕ್ಷಣ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಹೆಸರು ಖರೀದಿ ಕೇಂದ್ರ ಸ್ಥಾಪಿಸಬೇಕು. ಇಲ್ಲದಿದ್ದರೆ ಜಿಲ್ಲಾಯಾದ್ಯಂತ ಉಗ್ರ ಪ್ರತಿಭಟನೆಮಾಡಲಾಗುವದು ಎಂದು ಎಚ್ಚರಿಕೆ ನೀಡಿದರು.
ರಾಜ್ಯದ ಜನತೆ ಕಾಂಗೇಸ್ ಮತ್ತು ಜೆಡಿಎಸ್ ಪಕ್ಷವನ್ನು ತಿರಸ್ಕಾರಮಾಡಿದ್ದರು ಕೇವಲ ೩೮ ಸ್ಥಾನಹೊಂದಿದ ಜೆಡಿಎಸ್ ಪಕ್ಷ ಸರ್ಕಾರ ರಚನೆ ಕೇಳದಿದ್ದರು ಭಾಜಪಾವನ್ನು ಅಧಿಕಾರದಿಂದ ದೂರುಮಾಡುವ ಉದ್ದೆÃಶದಿಂದ ಅಪವಿತ್ರ ಮೈತ್ರಿಮಾಡಿಕೊಂಡು ಸರ್ಕಾರ ರಚಿಸಿ ೩ತಿಂಗಳು ಗತಿಸಿದರು ರಾಜ್ಯದಲ್ಲಿ ಅಭಿವೃಧ್ಧಿ ಕಾರ್ಯಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ ಎಂದು ಆಪಾದಿಸಿದರಲ್ಲದೆ, ರಾಜ್ಯ ಸರ್ಕಾರ ಸಂಪೂರ್ಣವಾಗಿ ರೈತರನ್ನು ಕಡೆಗೆನಿಸುತ್ತಿದ್ದು ರೈತರ ಫಸಲ್ ಭೀಮಾ ಯೋಜನೆಯಡಿ ಜಿಲ್ಲೆಗೆ ಬಂದು ರೂ ೧೦೯ಕೋಟಿಗಳ ಹಣವನ್ನು ಇಲ್ಲಿಯವರೆಗೆ ಸಮರ್ಪಕವಾಗಿ ರೈತರ ಖಾತೆಗಳಿಗೆ ಜಮೆಯಾಗಿಲ್ಲ. ರೈತರು ಉಳಿತಾಯಮಾಡಿ ಬ್ಯಾಂಕ್‌ಗಳಲ್ಲಿ ಡಿಪಾಜಿಟ್ ಮಾಡಿದರೆ ಅಂತಹ ರೈತರನ್ನು ಸಾಲಮನ್ನಾದಿಂದ ಹೊರಗಿಡುವ ಕುತಂತ್ರ ನಡೆಯುತ್ತಿದೆ. ಜಿಲ್ಲೆಯ ರೈತರ ಬಗ್ಗೆ ಕಾಳಜಿ ಹೊಂದಬೇಕಾಧ ಜಿಲ್ಲಾ ಉಸ್ತುವಾರಿ ಸಚಿವರು ರಾಜ್ಯ ಸರ್ಕಾರದ ಮಂತ್ರಿಮಂಡಲ ಅಧಿಕಾರಕ್ಕಾಗಿ ಕಚ್ಚಾಟದಲ್ಲಿ ತೋಡಗಿಕೊಂಡಿದ್ದಾರೆಂದರು.
ಭಾರತ ಬಂದ್‌ಗೆ ಬೆಂಬಲ ಬೇಡ: ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಕಾಂಗ್ರೆÃಸ್‌ನವರು ಕೇಂದ್ರ ಸಕಾರದ ಮೇಲೆ ಬೆಲೆ ಏರಿಕೆಯ ನೆಪ ಒಡ್ಡಿದೆ. ಯುಪಿಎ ಅವಧಿಯಲ್ಲಿ ಪೆಟ್ರೊÃಲ್ ಬೆಲೆ ರೂ ೮೨ಕ್ಕೆ ಏರಿಕೆಯಾಗಿ ಆರ್ಥಿಕ ಪರಸ್ಥಿತಿ ದಿವಾಳಿಗೆ ತಂದು ದೇಶವನ್ನು ಸಾಲದ ಸುಳಿಗೆ ಸಿಲುಕಿಸಿ ಸುಮಾರು ರೂ ೧೫ ಲಕ್ಷ ಕೋಟಿಗೆ ಮಿಗಿಲಾಗಿ ಸಾಲಮಾಡಿತ್ತು. ಮೋದಿಜಿಯವರ ಆಡಳಿತ ಚುಕ್ಕಾಣಿ ಹಿಡಿದ ನಾಲ್ಕುವರೆ ವರ್ಷದಲ್ಲಿ ಒಂದು ರೂಪಾಯಿ ಸಾಲ ಮಾಡದೆ ದೇಶದ ರೂ೭.೫ ಲಕ್ಷ ಕೋಟಿ ಸಾಲವನ್ನು ಮರುಪಾವತಿಸಿರುವದನ್ನು ದೇಶದ ಜನತೆ ನೋಡುತ್ತಿದೆ ಎಂದರು. ನಮ್ಮ ನೆಚ್ಚಿನ ಪ್ರಧಾನಿಗಳು ವಿಶ್ವದ ವಿವಿಧ ರಾಷ್ಟçಗಳ ಅಗ್ರ ಗಣ್ಯ ನಾಯಕರನ್ನು ಬೇಟ್ಟಿಯಾಗಿ ವಾಣಿಜ್ಯ ಒಪ್ಪಂದಗಳ ಮೂಲಕ ದೇಶದ ಆರ್ಥಿಕ ಪ್ರಗತಿಗೆ ಮುನ್ನೂಡಿ ಬರೆದಿರುವದು ಅವಿಸ್ಮರಣೀಯವಾಗಿದೆ ಎಂದರು
ಸೋಮವಾರ ಭಾರತ ಬಂದ್‌ಗೆ ಕರೆ ಕೊಟ್ಟಿರುವದಕ್ಕೆ ಯಾವುದೆ ಬೆಲೆ ಇಲ್ಲಾ. ಏಕೆಂದರೆ ಪೆಟ್ರೊÃಲಿಯಂ ಹಾಗೂ ಚಿನ್ನದ ಆಮದ ಬೆಲೆ ಅಂತರಾಷ್ಟಿçÃಯ ಮಾರುಕಟ್ಟೆ ನಿಯಂತ್ರಿಸುತ್ತಿದ್ದು ಅದು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಡುವದಿಲ್ಲ ಎಂಬುವದು ಗೊತ್ತಿದ್ದರು ಜನರನ್ನು ತಪ್ಪು ದಾರಿಗೆ ಎಳೆಯುತ್ತಿರುವ ಕಾಂಗ್ರೆÃಸ್ ನೀತಿಯನ್ನು ಉಗ್ರವಾಗಿ ಖಂಡಿಸಿ ಇದಕ್ಕೆ ಜನಸಾಮನ್ಯರು ವ್ಯಾಪಾರಸ್ಥರು ಕಿವಿಗೊಡದೆ ಎಂದಿನಂತೆ ತಮ್ಮ ವ್ಯಾಪಾರ ವಹಿವಾಟ ನಡೆಸಬೇಕೆಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಜಿಲ್ಲಾ ಭಾಜಪಾ ಗ್ರಾಮೀಣ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪಾದ ಕಳ್ಳಿ, ಮಂಡಲ ಅಧ್ಯಕ್ಷ ಮಡಿವಾಳಪ್ಪ ಹೋಟಿ ಇದ್ದರು

loading...