ಮೊಹರಂ ಹಬ್ಬ ಶಾಂತಿಯುವಾಗಿ ಆಚರಿಸಿ: ಸಿ.ಬಿ.ರಿಷಂತ

0
0
loading...

ಕಲಾದಗಿ : ಗಣೇಶ ಚತುರ್ಥಿ ಮೊಹರಂ ಹಬ್ಬಗಳನ್ನು ಹಿಂದೂ ಮುಸ್ಲಿಂ ಬಾಂಧವರು ಶಾಂತಿ ಸೌಹಾರ್ದತೆಯಿಂದ ಆಚರಿಸಬೇಕೆಂದು ಜಿಲ್ಲಾ ಪೊಲೀಸ ವರೀಷ್ಟ ಅಧಿಕಾರಿ ಸಿ.ಬಿ.ರಿಷಂತ ಹೇಳಿದರು.
ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಶನಿವಾರ ಸಾಯಂಕಾಲ ಕರೆದಿದ್ದ ಶಾಂತಿ ಪಾಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈ ಬಾರಿ ಹಬ್ಬಗಳನ್ನು ವಿಶೇಷವಾಗಿ ಆಚರಿಸಿಕೊಳ್ಳಲು ಮುಂದಾಗಬೇಕು ಗಣಪತಿ ಪ್ರತಿಷ್ಠಾಪಿಸಿದ ಕಮೀಟಿಯವರು ತಮ್ಮಲ್ಲೆ ಸ್ವಯಂ ಸೇವಕರನ್ನು ನೇಮಿಸಿಕೋಳ್ಳಿ ಬಹು ಸೂಕ್ತ ವಿಸರ್ಜನೆಗೊಳಿಸುವ ಸ್ಥಳದಲ್ಲಿ ಈಜು ಬರದಂತಹ ಜನರಿಗೆ ನೀರಿನ ಕಡೆ ಹೊಗದಂತೆ ನೋಡಿಕೊಳ್ಳಿ, ಪಟಾಕಿ ಹಚ್ಚುವಾಗ ಮುಂಜಾಗ್ರತದಿಂದ ಪಟಾಕಿ ಹಚ್ಚಿ ಪಟಾಕಿಯಿಂದಾಗುವ ಅನಾಹುತಗಳನ್ನು ತಪ್ಪಿಸಬೇಕು, ಸಮಯಕ್ಕೆ ಬೆಲೆ ಕೊಡಬೇಕು ರಾತ್ರಿ ೧೦ ಗಂಟೆಯೊಳಗಾಗಿ ಗಣಪತಿ ವಿಸರ್ಜನೆಗೊಳಿಸಿ ನಮ್ಮ ನಮ್ಮ ಇಲಾಖೆಯಿಂದ ಸದಾ ಸಹಕಾರ ನಿಡುತ್ತೇವೆ ಸಣ್ಣ ಪುಟ್ಟ ಘಟನೆಗಳು ನಡೆದರು ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೆಳೀದರು.

ಸಭೆಯಲ್ಲಿ ಜೆ.ಡಿ.ಚೌದರಿ, ಡಿ.ಡಿ. ದುರ್ವೆ, ಸಲಿಂ ಶೇಖ, ಹಸನ ಅಹ್ಮದ ರೋಣ ಮಾತನಾಡಿದರು ಈ ಸಭೆಯಲ್ಲಿ ಬಶೇಟೆಪ್ಪಅಂಗಡಿ, ಶ್ರೀಧರ ವಾಘ, ರಮೇಶ ಮಾದರ,ಮಲ್ಲಪ್ಪ ಜಮಖಂಡಿ, ಲತ್ತಿಪ್ ಚೀನಿ, ಸಂಗಪ್ಪ ಛಬ್ಬಿ, ಅಬ್ದುಲಖಾನ ಪಠಾಣ, ತಿಮ್ಮಣ್ಣ ಬಟಕುರರ್ಕಿ, ಬಂದೇನವಾಜ ಸೌದಾಗರ, ರಮೇಶ ವಾಲಿಕಾರ, ಹನಮಂತ ತಳವಾರ, ಮಹಮ್ಮದ ಸೋಲ್ಜರ್, ಮೊದಲಾದವರು ಇದ್ದರು.

loading...