ಯಲಬುರ್ಗಾ ಪಟ್ಟಣ ಪಂಚಾಯತಿ ಬಿಜೆಪಿಗೆ ಭರ್ಜರಿ ಗೆಲುವು: ಕಾಂಗ್ರೆಸ್‍ಗೆ ಹೀನಾಯ ಸೋಲು

0
0
loading...

ಮೌಲಾಹುಸೇನ ಬುಲ್ಡಿಯಾರ್
ಕೊಪ್ಪಳ: ಮಾಜಿ ಉನ್ನತ ಶಿಕ್ಷಣ ಮಂತ್ರಿ ಬಸವರಾಜ ರಾಯರೆಡ್ಡಿ ಅವರ ಸ್ವ-ಕ್ಷೇತ್ರ ಯಲಬುರ್ಗಾ ಪಟ್ಟಣ ಪಂಚಾಯಿತಿಯಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಹೀನಾಯ ಸೋಲನ್ನು ಕಂಡಿದ್ದು, ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರವನ್ನು ಪಡೆದುಕೊಂಡಿದೆ. ಪಟ್ಟಣ ಪಂಚಾಯತಿಯ ಒಟ್ಟು 15 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ 11 ಸ್ಥಾನಗಳಲ್ಲಿ ಗೆಲುವಿನ ನಗೆ ಬಿರಿದೆ. ಆದರೆ ಕಾಂಗ್ರೆಸ್ ಕೇವಲ 03 ಸ್ಥಾನಗಳನ್ನು ಪಡೆದು ಹೀನಾಯ ಸೋಲನ್ನು ಕಂಡಿದ್ದು, ಇದು ಮಾಜಿ ಸಚಿವ ಬಸವರಾಜ ರಾಯರೆಡ್ಡಿಗೆ ತೀವ್ರ ಮುಖಭಂಗವಾಗಿದೆ ಎಂದೆ ಹೇಳಲಾಗುತ್ತಿದೆ. ಕಳೆದ ಅವಧಿಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಹಾಲಪ್ಪ ಆಚಾರ ಅವರಿಂದ ಸೋಲನ್ನು ಕಂಡಿರುವ ಬಸವರಾಜ ರಾಯರೆಡ್ಡಿಯವರಿಗೆ ಈಗ ಕ್ಷೇತ್ರದಲ್ಲಿ ಹಿಡಿತ ತಪ್ಪುತ್ತಿದೆ, ತಾಲೂಕ ಕೇಂದ್ರವಾದ ಯಲಬುರ್ಗಾ ಪಟ್ಟಣದಲ್ಲಿ ಈ ಹಿಂದಿಗಿಂತಲ್ಲೂ ಕಾಂಗ್ರೆಸ್ ಈ ಚುನಾವಣೆಯಲ್ಲಿ ಕಳಪೆ ಸಾಧನೆ ಮಾಡಿದೆ, ಅಧಿಕಾರದಲ್ಲಿದ್ದಾಗ ಪಕ್ಷ ಹಾಗೂ ಕಾರ್ಯಕರ್ತರನ್ನು ಕಡೆಗಣಿಸಿದ್ದೇ ವಿಧಾನಸಭಾ ಚುನಾವಣೆ ಹಾಗೂ ಈ ಸ್ಥಳೀಯ ಚುನಾವಣೆಯಲ್ಲಿ ಮತದಾರ ಕಾಂಗ್ರೆಸ್‍ನಿಂದ ದೂರ ಸರಿಯುತ್ತಿರುವುದು ಕಂಡುಬಂದಿದೆ. ಪಟ್ಟಣದ 15 ವಾರ್ಡಗಳ ಪೈಕಿ ಬಿಜೆಪಿಯು 01, 02, 06, 07, 08, 09, 10, 11, 12, 13, 14 ವಾರ್ಡ್ ರಲ್ಲಿ ತನ್ನ ಪ್ರಾಭಲ್ಯವನ್ನು ಸಾಧಿಸಿಕೊಂಡಿದ್ದು, ಕಾಂಗ್ರೆಸ್ 03, 05, ಮತ್ತು 15 ನೇ ವಾರ್ಡನಲ್ಲಿ ಮಾತ್ರ ಗೆಲುವು ಕಂಡಿದ್ದು, ವಾರ್ಡ್ 04 ರಲ್ಲಿ ಓರ್ವ ಪಕ್ಷೇತರ ವಿಜಯ ಸಾಧಿಸಿದ್ದು, ಮೊದಲಿನಿಂದಲೂ ರಾಯರೆಡ್ಡಿಯ ಪ್ರಾಭಲ್ಯದಲ್ಲಿದ್ದ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ತೀರಾ ಹೀನಾಯ ಸೋಲನ್ನು ಅನುಭವಿಸಿದ್ದು ಇದೇ ಮೊದಲಭಾರಿಗೆ ಇದು ಮಾಜಿ ಮಂತ್ರಿ ಬಸವರಾಜ ರಾಯರೆಡ್ಡಿಗೆ ಹಿನ್ನಡೆಯಾಗಿದೆ.

ಸ್ಥಳೀಯ ಪಪಂ ಚುನಾವಣೆಯಲ್ಲಿ ಯಲಬುರ್ಗಾ ಇತಿಹಾಸದಲ್ಲೆ ಮೊಟ್ಟ ಮೊದಲ ಬಾರಿಗೆ ಬಿಜೆಪಿ ಅತೀ ಹೆಚ್ಚು ಸ್ಥಾನಗಳನ್ನ ಗೆಲ್ಲುವ ಮೂಲಕ ಹೊಸ ಇತಿಹಾಸವನ್ನ ಸೃಷ್ಠಿಸಿದೆ ಎಂದು ಶಾಸಕ ಹಾಲಪ್ಪ ಆಚಾರ್ ಹೇಳಿದ್ದಾರೆ. ಸ್ಥಳೀಯವಾಗಿ ಜನತೆ ಬಿಜೆಪಿ ಪಕ್ಷಕ್ಕೆ ಹೆಚ್ಚಿನ ಒಲವು ತೊರಿಸುತ್ತಿದ್ದು ಅದು ವಿಧಾನಸಭೆ ಹಾಗೂ ಪಪಂ ಚುನಾವಣೆಯಲ್ಲಿ ಸಾಭಿತಾಗಿದೆ, ಇದು ಮುಂಬರುವ ಲೋಕಸಭಾ ಚುನಾವಣೆಯ ದಿಕ್ಸೂಚಿಯಾಗಲಿದೆ ಎಂದಿದ್ದಾರೆ. ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿಗೆ ಕಾಂಗ್ರೆಸ್ ಮುಖಂಡರೇ ಕಾರಣವೆಂದು ಕಾಂಗ್ರೆಸ್ ಕಾರ್ಯಕರ್ತರು ಬಹಿರಂಗವಾಗಿ ಹೇಳುತ್ತಾರೆ, ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳ ಆಯ್ಕೆ, ಹಾಗೂ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇರುವುದು, ಮತ್ತು ಕೆಲ ಸ್ಥಳೀಯ ಮುಖಂಡರ ವರ್ತನೆಯಿಂದ ಕಾರ್ಯಕರ್ತರು ತಟಸ್ಥವಾಗಿದಿದ್ದು ಸೋಲಿಗೆ ಮುಖ್ಯ ಕಾರಣವೆಂದು ಹೇಳಲಾಗುತ್ತಿದ್ದು ಅದರಂತೆ ಮಾಜಿ ಸಚಿವರು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಪಕ್ಷ ಹಾಗೂ ಕಾರ್ಯಕರ್ತರನ್ನು ಕಡೆಗಣಿಸಿದ್ದೆ ಪಕ್ಷ ಹಿನ್ನಡೆಯಾಗಿದೆ ಎನ್ನಲಾಗಿದೆ. ಇನ್ನೂ ಜೆಡಿಎಸ್ 07 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೂ ಒಂದೇ ಒಂದು ಸ್ಥಾನವನ್ನು ಪಡೆದುಕೊಳ್ಳುವಲ್ಲಿ ವಿಫಲವಾಗಿದೆ, ವಾರ್ಡ ನಂಬರ 02, 03, ಹಾಗೂ 14 ರಲ್ಲಿ ಸ್ವಲ್ಪಮಟ್ಟಿನ ಸ್ಪರ್ಧೆಯನ್ನು ನೀಡಿತ್ತು, ವಾರ್ಡ 04 ರಲ್ಲಿ ಬಜೆಂತ್ರಿ ಸಮುದಾಯದ ಹನುಮಂತಪ್ಪ ಅವರು ಪಕ್ಷೇತರರಾಗಿ ಸ್ಪರ್ಧಿಸಿ ಮೊದಲ ಭಾರಿಗೆ ಆಯ್ಕೆಯಾಗಿದ್ದು ವಿಶೇಷವಾಗಿದೆ.

loading...