ಯುವಕನ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

0
0
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ವಾಲ್ಮಿÃಕಿ ಸಮುದಾಯದ ಯುವಕನ ಮೇಲೆ ನಡೆದಿರುವ ದೌರ್ಜನ್ಯ ಖಂಡಿಸಿ ಗುರುವಾರ ವಾಲ್ಮಿÃಕಿ ಸೇನೆಯ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ವಾಲ್ಮಿÃಕಿ ಸೇನೆಯ ಸದಸ್ಯರು ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ನಡೆಸಿ ನಂತರ ಮನವಿ ಸಲ್ಲಿಸಿದರು. ವಾಲ್ಮಿÃಕಿ ಸಮುದಾಯದ ರಾಜೀವ ಕಳೆನಟ್ಟಿ ಇವರ ಮೇಲೆ ಆದ ದೌರ್ಜನ್ಯದ ಕುರಿತು ಖಡೇ ಬಜಾರ ಪೊಲೀಸ್ ಠಾಣೆಯಲ್ಲಿ ಎಸ್.ಸಿ, ಎಸ್.ಟಿ ದೌರ್ಜನ್ಯ ತಡೆ (ಅಟ್ರಾಸಿಟಿ)ಖಾಯ್ದೆಯಡಿ ಅ.೧೪ ರಂದು ಫಿರ್ಯಾದಿ ಕೊಟ್ಟಿದ್ದರು. ಈ ಪ್ರಕರಣದಲ್ಲಿ ತನಿಖೆಯ ನೆಪದಲ್ಲಿ ಇನ್ನೂ ಯಾರನ್ನು ದಸ್ತಗಿರ ಮಾಡಿರುವುದಿಲ್ಲ. ಎಫ್‌ಐಆರ್ ಆಗಿ ೨೦ ದಿನಗಳಾದರೂ ಕೂಡ ಆರೋಪಿಗಳನ್ನು ಬಂಧಿಸಿರುವುದಿಲ್ಲ ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ವೇಳೆ ವಾಲ್ಮಿÃಕಿ ಸೇನೆ ಜಿಲ್ಲಾಧ್ಯಕ್ಷ ಬಸವರಾಜ ಬಡನಾಯಕ, ಸದಾನಂದ ಗೌಡರ, ರಾಜೀವ ಕಾಳೆನಟ್ಟಿ, ರವಿ ನಾಯಕ, ಅಂಜನಕುಮಾರ ಗಂಡಗುದರಿ, ಸುನೀಲ ನಾಯಕ ಸೇರಿದಂತೆ ಅನೇಕರು ಭಾಗವಹಿಸಿದರು.

loading...