ಯುವಕರಿಗೆ ಕೆಲಸ ಕೊಡಿಸುವುದಾಗಿ ದೋಖಾ, ದಂಪತಿಬ್ಬರು ಪರಾರಿ

0
1
loading...

ನಗರದ ದಂಪತಿಗಳಿಬ್ಬರು ನಿರುದ್ಯೊಗಿಗಳಿಗೆ ವಿದೇಶದಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಜೊತೆಗೆ ವಿದೇಶಕ್ಕೆ ಹೋಗಲು ನಕಲಿ ವಿಸಾ ಕೊಟ್ಟ ದಂಪತಿಗಳಾದ ರಿಜಾವಾನ ಮುಜಾವರ ಅವರ ಪತ್ನಿ ಶಬಾನಾ ಮುಜಾವರ ಇವರು ೨೦ಕ್ಕೂ ಹೆಚ್ಚು ಯುವಕರಿಗೆ ಉದ್ಯೊಗ ಕೊಡಿಸುವುದಾಗಿ ಹೇಳಿ, ಲಕ್ಷಾಂತರ ರೂ. ಹಣ ಪಡೆದು. ಯುವಕರಿಗೆ ಕೆಲಸ ಕೊಡಿಸದೇ ಹಣ ಪಡೆದು ಪರಾರಿಯಾಗಿದ್ದಾರೆ. ನ್ಯಾಯ ಕೂಡಿಸುವಂತೆ ಜಾಬೀರ್, ಇಸ್ಮಾಯಿಲ್, ರಫೀಕ್ ಸಾದೇಕರ, ಮೌಲಾ ಅಲಿ, ಅನಿಲ ಪಾಟೇವಾಲೆ, ಹಸನ ತಬೀಬ, ಸುಲ್ತಾನ ಸೇರಿದಂತೆ ಇತರರು ಮೋಸ ಹೋದ ಯುವಕರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

loading...