ಯುವಜನತೆ ಉತ್ತಮ ಸಾಮರ್ಥ್ಯ ಬೆಳೆಸಿಕೊಳ್ಳಿ: ವೀರಣ್ಣ

0
1
loading...

ಕನ್ನಡಮ್ಮ ಸುದ್ದಿ-ಧಾರವಾಡ: ಯುವ ಶಕ್ತಿ ರಾಷ್ಟ್ರದ ಶಕ್ತಿ ಯುವಕರು ಪ್ರವಾಹದ ವಿರುದ್ಧ ಈಜುವ ಸಾಮರ್ಥ್ಯ ಬೆಳೆಸಿಕೊಳ್ಳಿ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿ ಕಾರ್ಯದರ್ಶಿ ವೀರಣ್ಣ ಒಡ್ಡೀನ ಹೇಳಿದರು.
ಸಿದ್ಧರಾಮೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಭಾರತ ಸರಕಾರ ನೆಹರು ಯುವ ಕೇಂದ್ರ, ರುಕ್ಮೀಣ ಮಹಿಳಾ ಮಂಡಳ ಹೆಬ್ಬಳ್ಳಿ, ಯುವ ಸ್ಪಂದನ ಕೇಂದ್ರ ಸಯುಕ್ತ ಆಶ್ರಯದಲ್ಲಿ ನಡೆದ ನೆರೆ ಹೊರೆ ಯುವ ಸಂಸತ್ತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯುವ ಶಕ್ತಿ ದೇಶದ ಜವಾಬ್ಧಾರುಯುತ ಪ್ರಜೆಗಳಾಗಿ ದೇಶದ ಕಾನೂನು ಸಂವಿಧಾನದ ಬಗ್ಗೆ ಗೌರವ ಭಾವನೆ ಹೊಂದಬೇಕು, ಜ್ಞಾನ ಯಾವ ದಿಕ್ಕಿನಿಂದ ಬಂದರು ಸ್ವಿಕಾರ ಮಾಡಿಕೊಳ್ಳುವ ಗುಣ ನಿಮ್ಮದಾಗಲಿ ಎಂದು ಹೇಳಿದರು.
ರೇಶ ಸವದತ್ತಿ ಮಾತನಾಡಿ, ನೆರೆ ಹೊರೆ ಯುವ ಸಂಸತ್ತು ಕಾರ್ಯಕ್ರಮ ಯುವ ಜನರಿಗಾಗಿಯೇ ಇರುವ ಕಾರ್ಯಕ್ರಮ ಯುವ ಜನರು ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವದರ ಜೊತೆಗೆ ತಮ್ಮ ಜೀವನದಲ್ಲಿ ಬರುವ ಸಮಸ್ಯೆಗಳ ಎದುರಿಸು ಸಾಮರ್ಥ್ಯ ನಿಮ್ಮದಾಗುವುದು ಎಂದರು. ಡಾ. ಜಿ ಕೆ ಹೀರೆಮಠ ಅಧ್ಯಕ್ಷತೆವಹಿಸಿ ಮಾತನಾಡಿ, ಯುವಕರಲ್ಲಿ ನಾಯಕತ್ವ ಗುಣ, ಕೌಶಲ್ಯ ಮಾನವೀಯತೆ ಬೆಳೆಸಲು ಇತಂಹ ಕಾರ್ಯಕ್ರಮಗಳು ಸಹಾಯಕಾರಿಯಾಗಿವೆ. ಸಾಧಿಸುವ ಛಲ ಬೆಳೆಸಿಕೊಳ್ಳಿ ಎಂದರು. ಪಾಶ್ವನಾಥ ಪಾರಿಶ್ವಾಡ, ಬಸವರಾಜ ಎನ್‌, ಪ್ರದೀಪ ಮೇಲ್ಗಡೆ, ಪಿ ಎನ್‌ ವದರಿ, ಚಿದಾನಂದ ಪಡಿದಾಳ ಉಪಸ್ಥಿತರಿದ್ದರು.

loading...