ರಂಗಾಯಣದ ರಂಗತೇರು: ಜಿಲ್ಲೆಯಲ್ಲಿ ವಿವಿಧ ನಾಟಕ ಪ್ರದರ್ಶನ

0
0
loading...

ಬಾಗಲಕೋಟೆ: ಶಿವಮೊಗ್ಗದ ರಂಗಾಯಣದಲ್ಲಿ ನಿರ್ಮಿಸಲಾಗಿರುವ ಮೂರು ನಾಟಕಗಳನ್ನು ರಂಗಾಯಣದ ರಂಗತೇರು ಎಂಬ ಹೆಸರಿನಲ್ಲಿ ಜಿಲ್ಲೆಯಲ್ಲಿ ಕಳೆದ ೫ ದಿನಗಳಿಂದ ಪ್ರದರ್ಶನ ನೀಡುತ್ತಿರುವುದಾಗಿ ರಂಗಾಯಣದ ನಿರ್ದೇಶಕ ಡಾ.ಎಂ.ಗಣೇಶ ಹೇಳಿದರು.
ನವನಗರದ ಪತ್ರಿಕಾಭವನದಲ್ಲಿಂದು ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ವೃತ್ತಿ ರಂಗಭೂಮಿ ಹಾಗೂ ಆಧುನಿಕ ರಂಗಭೂಮಿಗಳ ಸಂಬಂಧವನ್ನು ಗಟ್ಟಿಗೊಳಿಸುವ ಹಿನ್ನಲೆಯಲ್ಲಿ ಬಿ.ಎಸ್.ಆರ್ ನಾಟಕ ಸಂಘ ಗುಬ್ಬಿ ಸಹಕಾರದೊಂದಿಗೆ ಜಿಲ್ಲೆಯ ಬಸವೇಶ್ವರ ಸರ್ಕಲ್ ಹತ್ತಿರ ಹಾಕಿರುವ ಗುಬ್ಬಿ ರಂಗಮಂದಿರದಲ್ಲಿ ಜೇವರ್ಗಿ ರಾಜಣ್ಣವರು ರಚಿಸಿ ನಿರ್ದೇಶಿಸಿದ ‘ದುಬೈ ಧೂಳಪ್ಪನ ಭರ್ಜರಿ ಗಾಳ’ ಎಂಬ ನಾಟಕ ಸೆಪ್ಟೆಂಬರ ೧೫ ರವರೆಗೆ ನಾಟಕಗಳನ್ನು ಪ್ರದರ್ಶಿಸಲಾಗುತ್ತಿದೆ. ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ನೋಡಲಿ ಎಂಬ ಉದ್ದೆÃಶದಿಂದ ಟಿಕೇಟ ದರ ೫೦ ರೂ.ಗಳನ್ನು ನಿಗದಿಪಡಿಸಲಾಗಿದೆ ಎಂದರು.

ಅಲ್ಲದೇ ಸೆಪ್ಟೆಂಬರ ೧೬ ಮತ್ತು ೧೭ ರಂದು ರಂಗಾಯಣ ನಿರ್ದೇಶಕ ಡಾ.ಎಂ.ಗಣೇಶ ನಿರ್ದೇಶನದ ‘ಆಷಾಢದ ಒಂದು ದಿನ’ ಮತ್ತು ೧೮ ಮತ್ತು ೧೯ ರಂದು ದೆಹಲಿಯ ರಾಷ್ಟಿçÃಯ ನಾಟಕ ಶಾಲೆ ಪದವೀದರೆ ಸವಿತಾರಾಣಿ ನಿರ್ದೇಶಿಸಿದ ‘ಟ್ರಾನ್ಸನೇಷನ್’ ಎಂಬ ಎರಡು ನಾಟಕಗಳನ್ನು ಪ್ರತಿ ೨ ಬಾರಿ ಮಧ್ಯಾಹ್ನ ೩.೧೫ ಹಾಗೂ ಸಂಜೆ ೭ ಗಂಟೆಗೆ ಪ್ರದರ್ಶನಗೊಳ್ಳಲಿದ್ದು, ಪ್ರೆÃಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಮೂರು ನಾಟಕಗಳನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ ಎಂದರು.
ಬಿ.ಎಸ್.ಆರ್ ನಾಟಕ ಸಂಘ ಗುಬ್ಬಿ ಮಾಲಿಕ ನಾಟಕಕಾರ ಜೇವರ್ಗಿ ರಾಜಣ್ಣನವರು ಮಾತನಾಡಿ ಹತ್ತು ನಾಟಕಗಳಲ್ಲಿ ಒಂದು ಆಧುನಿಕ ನಾಟಕ ಇರಬೇಕೆಂಬ ಉದ್ದೆÃಶಿದಿಂದ ರಾಜ್ಯಾದ್ಯಂತ ರಂಗಾಯಣ ನಾಟಕಗಳನ್ನು ಪ್ರದರ್ಶಿಸಲಾಗುತ್ತಿದೆ. ಇದರಲ್ಲಿ ಹಾಸ್ಯಕ್ಕೂ ಸಹ ಒತ್ತು ನೀಡಲಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿಯೂ ಕೂಡಾ ವೃತ್ತಿ ಹಾಗೂ ಆಧುನಿಕ ರಂಗಭೂಮಿ ನಾಟಕಗಳನ್ನು ಪ್ರದರ್ಶಿಸಲಾಗಿದೆ. ಬನಶಂಕರಿ ಜಾತ್ರೆ, ಇಲಕಲ್ಲಿನ ಸ್ನೆÃಹರಂಗದ ಮೂಲಕ ಹುಚ್ಚರ ಸಂತೆ ನಾಟಕ, ಧಾರವಾಡದಲ್ಲಿ ಕೃಷ್ಣ ಸಂದಾನ, ಬೆಳಗಾವಿಯಲ್ಲಿ ತಮಾಷ ನಾಟಕ ಪ್ರದರ್ಶಿಸಲಾಗಿದೆ ಎಂದು ತಿಳಿಸಿದರು.

loading...