ರಾಜ್ಯ ಮಟ್ಟದ ಕುಸ್ತಿ: ಜಿಲ್ಲೆಗೆ ೮ ಪದಕ

0
0
loading...

ಬಾಗಲಕೋಟೆ: ಜಿಲ್ಲಾ ಕುಸ್ತಿ ಸಂಘ ಹಾಗೂ ಯುವ ಸಬಲೀಕರಣ ಮತ್ತು ಕ್ರಿÃಡಾ ಇಲಾಖೆ ಸಹಯೋಗದಲ್ಲಿ ಇತ್ತಿÃಚೆಗೆ ದಾವಣಗೇರೆಯಲ್ಲಿ ಜರುಗಿದ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಜಿಲ್ಲೆಯ ಕ್ರಿÃಡಾ ಶಾಲೆ ಮತ್ತು ನಿಲಯದ ಕುಸ್ತಿ ಪಟುಗಳು ೪ ಚಿನ್ನ, ೧ಬೆಳ್ಳಿ ಮತ್ತು ೩ ಕಂಚಿನ ಪದಕಗಳನ್ನು ಪಡೆದುಕೊಂಡಿದ್ದಾರೆ.
ಹಿರಿಯ ವಿಭಾಗದ ೫೭ ದೇಹ ತೂಕಲದಲ್ಲಿ ಕೆಂಪನಗೌಡ ಕೆಂಪನ್ನವರ ಚಿನ್ನದ ಪದಕದೊಂದಿಗೆ ವಿಕಾಸಗೌಡ ಸ್ಮಾರಕ ಪ್ರಶಸ್ತಿ ಪಡೆದುಕೊಂಡಿದ್ದಾರೆ. ೩೫ ಕೆ.ಜಿ ದೇಹ ತೂಕ ವಿಭಾಗದಲ್ಲಿ ವಿಷ್ಣು ಬಿಜಗುಂಪಿ (ಪ್ರಥಮ), ೪೦ ಕೆ.ಜಿ ವಿಭಾಗದಲ್ಲಿ ಅಭಿಷೇಕ ಪವಾರ (ಪ್ರಥಮ), ೪೫ ಕೆಜಿ ವಿಭಾಗದಲ್ಲಿ ಆದರ್ಶ ತೋಟದಾರ (ಪ್ರಥಮ) ಚಿನ್ನದ ಪದಕ ಪಡೆದುಕೊಂಡರೆ, ಕಾರ್ತಿಕ ತಳವಾರ (ದ್ವಿತೀಯ) ಬೆಳ್ಳಿ ಪದಕ ಹಾಗೂ ಪ್ರಶಾಂತ ಚಲವಾದಿ (ತೃತೀಯ), ೫೦ ಕೆಜಿ ವಿಭಾಗದಲ್ಲಿ ಆಕಾಶ ಪಟೇದ ಹಾಗೂ ೩೦ ಕೆಜಿ ವಿಭಾಗದಲ್ಲಿ ಬಾಬುರಾವ್ ಮಾನೆ (ತೃತೀಯ) ಕಂಚಿನ ಪದಕ ಪಡೆದುಕೊಂಡಿದ್ದಾರೆ. ವಿಜೇತರಾದವರನ್ನು ಹಾಗೂ ತರಬೇತಿ ನೀಡಿದ ತುಕಾರಾಮ ಗೌಡಾ ಅವರನ್ನು ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರಿÃಡಾ ಇಲಾಖೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.

loading...