ರಾಷ್ಟಿçÃಯ ಅಂಧತ್ವ ನಿವಾರಣಾ ಕಾರ್ಯಕ್ರಮ ಅಗತ್ಯ

0
0
ಕನ್ನಡಮ್ಮ ಸುದ್ದಿ-ಬೆಳಗಾವಿ: ಕಣ್ಣು ಶರೀರದಲ್ಲಿ ಅತ್ಯಂತ ಶ್ರೆÃಷ್ಟ ಅಂಗ. ವಯಸ್ಸಾದಂತೆ ಶರೀರದಲ್ಲಾಗುವ ಕೆಲವು ಬದಲಾವಣೆ ಹಾಗೂ ಇನ್ನಿತರೆ ಕಾರಣಗಳಿಂದ ದೃಷ್ಟಿ ಮಂಜಾಗುವದಕ್ಕೆ ಕಾರಣವಾಗಿದೆ ಎಂದು ಕೆಎಲ್‌ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕ ಡಾ. ಎಸ್ ಸಿ ಧಾರವಾಡ ಹೇಳಿದರು.
ಅವರು ಶನಿವಾರ ಯಳ್ಳೂರ ರಸ್ತೆಯಲ್ಲಿನ ಕೆಎಲ್‌ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ರಾಷ್ಟಿçÃಯ ಅಂಧತ್ವ ನಿವಾರಣಾ ಕಾರ್ಯಕ್ರಮ ಅಡಿಯಲ್ಲಿ ಪ್ರಥಮ ಹೆಜ್ಜೆಯನ್ನುವಂತೆ ೫ ಜನರಿಗೆ ಉಚಿತ ಮೋತಿಬಿಂದು ಶಸ್ತçಚಿಕಿತ್ಸೆಯನ್ನು ನಡೆಸುವ ಕಾರ್ಯಕ್ರಮದ ಅಂಗವಾಗಿ ಮಾತನಾಡುತ್ತಿದ್ದರು.
ನಮ್ಮ ದೇಶದ ಒಟ್ಟು ಜನಸಂಖ್ಯೆಯಲ್ಲಿ ಸುಮಾರು ೮.೩೬ ನಷ್ಟು ಜನರು ದೃಷ್ಟಿಹೀನರಾಗಿರುವದು ನಿಜಕ್ಕೂ ಖೇದಕರ. ಈ ನಿಟ್ಟಿನಲ್ಲಿ ಸರ್ಕಾರವು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಸಹ ಅಂಧತ್ವದ ಪ್ರಮಾಣ ದಿನೇ ದಿನೇ ಏರುತ್ತಿರುವದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ. ಇಂತಹ ರಾಷ್ಟಿçÃಯ ಮಟ್ಟದ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ನಮ್ಮ ಯಳ್ಳುರ ರಸ್ತೆಯಲ್ಲಿನ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ರಾಷ್ಟಿçÃಯ ಅಂಧತ್ವ ನಿವಾರಣಾ ಕಾರ್ಯಕ್ರಮದ ಮಾನ್ಯತೆ ಪಡೆದಿದ್ದು ಅರ್ಹ ಫಲಾನುಭವಿಗಳಿಗೆ ಉಚಿತ ಶಸ್ತç ಚಿಕಿತ್ಸೆ ಮಾಡಲಾಗುವದು ಇದರ ಬಗ್ಗೆ ಅಧಿಕ ಮಾಹಿತಿಗಾಗಿ ಸಾರ್ವಜನಿಕ ಸಂಪರ್ಕಾಧಿಕಾರಿ ವಿಜಯ ಮುನವಳ್ಳಿಯವರನ್ನು ೯೦೩೫೩೩೫೪೩೨ ಸಂಪರ್ಕಿಸಿರಿ ಎಂದು ತಿಳಿಸಿದ್ದಾರೆ.
ನಂತರ ಆಸ್ಪತ್ರೆಯ ನೇತ್ರ ವಿಭಾಗದ ಮುಖ್ಯಸ್ಥೆ ಡಾ. ಹನು ಪದ್ಮಜಾ ಹಂಜಿ ಮಾತನಾಡಿ, ವಯೋವೃಧ್ದಿ ಹಾಗೂ ಇನ್ನಿತರೆ ದೈಹಿಕ ಬದಲಾವಣೆಗಳಿಂದಾಗಿ ಮೋತಿಬಿಂದು, ಸಮೀಪ ದೃಷ್ಟಿದೋಷ, ದೂರ ದೃಷ್ಟಿದೋಷ  ಹಾಗೂ ಇನ್ನಿತರೆ ಸಮಸ್ಯೆಗಳು ಉಧ್ಭವಿಸುತ್ತವೆ. ಆದ್ದರಿಂದ ಇವುಗಳಿಗೆ ಹೆದರದೇ ತಕ್ಷಣ ನೇತ್ರ ವೈದ್ಯರನ್ನು ಸಂಪರ್ಕಿಸಿದಲ್ಲಿ ಈ ಸಮಸ್ಯೆಯಿಂದ ದೂg Àಉಳಿಯಬಹುದಾಗಿದೆ ಎಂದು ತಿಳಿಸಿದ್ದಾರೆ.
ಹಿರಿಯ ನೇತ್ರ ತಜ್ಞ ಡಾ. ಅಡಿವೆಪ್ಪ ಪರಾಯಿ ಹಾಗೂ ತಂಡದವರಿಂದ ೫ ಜನರಿಗೆ ಯಶಸ್ವಿಯಾಗಿ ಶಸ್ತç ಚಿಕಿತ್ಸೆ ನೆರವೇರಿಸಲಾಯಿತು.
loading...