ರಾಷ್ಟç ನಾಯಕರ ಜೀವನದ ವಿಚಾರ ಮೂಡಿಸಿ: ಸಾಹಿತಿ ರಮಜಾನ್

0
0
loading...

ಸಿಂದಗಿ: ಭಾರತ ದೇಶದಲ್ಲಿನ ಮಣ್ಣಿನಲ್ಲಿರುವ ಶಕ್ತಿ ಯಾವುದರಲ್ಲಿ ಇಲ್ಲ ಹಾಗಾಗಿ ಜಗತ್ತಿಗೆ ಭಾರತ ಗುರುವಾಗುತ್ತಿದೆ ಶಿಕ್ಷಕರು ಮಕ್ಕಳಲ್ಲಿರುವ ಜಾತಿ ಮತ್ತು ಧರ್ಮಗಳನ್ನು ಬಿಗಸ್ಥನ, ನೆಂಟಸ್ಥನಕ್ಕೆ ಮಾತ್ರ ಬಳಸಿಕೊಂಡು ಸಮನ್ವತೆಯಿಂದ ಕಲಿಸುವಂತಾಗಬೇಕು ಆದರೆ ದೇಶದಲ್ಲಿ ಶಿಕ್ಷಣ ನೀತಿ ಇಲ್ಲವೇ ಇಲ್ಲ ಕೇವಲ ದಾಖಲೆಯಲ್ಲಿ ಮಾತ್ರ ಶಿಕ್ಷಣ ನೀತಿ ಇದೆ ಸರಕಾರಗಳು ಜನಾಂಗದ ಭವಿಷ್ಯ ಹೇಗೆ ಕಟ್ಟಬೇಕೇನ್ನುವದು ಕಾಣುತ್ತಿಲ್ಲ ಇದು ವಿಪರ್ಯಾಸ ಸಂಗತಿ ಎಂದು ಧಾರವಾಡದ ಹಿರಿಯ ಸಾಹಿತಿ ರಮಜಾನ್ ದರ್ಗಾ ಹೇಳಿದರು.
ಪಟ್ಟಣದ ಅಂಬೇಡ್ಕರ ಭವನದಲ್ಲಿ ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ ವಿಜಯಪುರ ಹಾಗೂ ಕ್ಷೆÃತ್ರ ಶಿಕ್ಷಣಾಧಿಕಾರಿಗಳ ಮತ್ತು ಕ್ಷೆÃತ್ರ ಸಮನ್ವಯಾಧಿಕಾರಿ ಕಾರ್ಯಾಲಯ ಹಾಗೂ ಶಿಕ್ಷಕರ ದಿನೋತ್ಸವ ಸಮಿತಿ ಹಮ್ಮಿಕೊಂಡ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನೋತ್ಸವದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಪ್ರಕರಣದಲ್ಲಿ ಬಂಧಿತರಾದ ಯಾವೊಬ್ಬರು ಅಪರಾಧಿಗಳಲ್ಲ ಯಾವುದೋ ಕಾಣದ ಕೈಗಳ ಶಕ್ತಿಯಿಂದ ವಾಘ್ಮೊÃರೆಯಂತಹ ಅಮಾಯಕ ನಿರಪರಾಧಿಯನ್ನು ಅಪರಾಧಿಯನ್ನಾಗಿ ಮಾಡಿ ಕೈತೊಳೆದುಕೊಳ್ಳುವಂತ ಶಢ್ಯಂತರ ನಡೆಯುತ್ತಿದ್ದು ಶಿಕ್ಷಕರು ಅಂತವುಗಳನ್ನು ಕಡಿವಾಣ ಹಾಕುವಲ್ಲಿ ಬೆಳೆಯುವ ಸಿರಿ ಮೊಳಕೆಯಲಿ ಎನ್ನುವಂತೆ ಅಂತಹ ಪ್ರಕರಣಗಳ ಬಗ್ಗೆ ವಿವರಣೆ ನೀಡುತ್ತ ನಿರಪರಾಧಿಗಳಾಗುವ ಶಿಕ್ಷೆಯನ್ನು ತಪ್ಪಿಸಲು ಮುಂದಾಗಬೇಕಲ್ಲದೆ ಮಕ್ಕಳಲ್ಲಿ ಮಾನಸಿಕ ಶಕ್ತಿಯನ್ನು ತುಂಬಬೇಕು ಮತ್ತು ಇಂದಿನ ಪಠ್ಯಕ್ರಮದಲ್ಲಿ ಮಾನವೀಯ ಮತ್ತು ರಾಷ್ಟç ನಾಯಕರ ಜೀವನದ ವಿಚಾರ ಮೂಡಬೇಕು ಎಂದರು.
ಮಾನವ ಸಂಪನ್ಮೂಲದಲ್ಲಿ ದೇಶದ ಶಿಕ್ಷಣ ನೀತಿಯಿಂದ ಇವತ್ತು ದೇಶ ಬಡವರಾಗಿದ್ದಾರೆ. ರೈತರಿಗೂ ಹಾಗೂ ದುಡಿಯುವ ಬಡಜನರಿಗೂ ಬೆಲೆಯಿಲ್ಲ ಸಾಹಿತ್ಯ ಹಾಗೂ ಸಂಸ್ಥಾನಗಳು ಹಾಳಾಗಿವೆ ಪೊಳ್ಳು ಸಂಸ್ಕೃತಿಗೆ ಮಾರಿ ಹೋಗುತ್ತಿದ್ದೆÃವೆ ನಮ್ಮ ಶಿಕ್ಷಣ ಐದು ವರ್ಷ ಕಳೆದರೆ ಐಟಿ ವಿದ್ಯಾರ್ಥಿಗಳು ಸಿಪಾಯಿ ಹುದ್ದೆಗೆ ಅಲೆದಾಡುವ ಪರಿಸ್ಥಿತಿ ಬರುತ್ತದೆ.

ಉದ್ಘಾಟಿಸಿದ ತಹಸೀಲ್ದಾರ ವಿಜಯಕುಮಾರ ಕಡಕಬಾವಿ, ಅಧ್ಯಕ್ಷತೆ ವಹಿಸಿದ ಶಿಕ್ಷಣಾಧಿಕಾರಿ ಆರೀಫ್ ಬಿರಾದಾರ ಮಾತನಾಡಿದರು. ಶಿಕ್ಷಕ ಸಂಘದ ರಾಜ್ಯ ಪರಿಷತ್ತ ಸದಸ್ಯ ಎಂ.ಜಿ.ಯಂಕಂಚಿ, ಶಿಕ್ಷಕ ಸಂಘದ ರಾಜ್ಯ ಉಪಾದ್ಯಕ್ಷ ಯು.ಆಯ್.ಶೇಖ, ದೈಹಿಕ ಶಿಕ್ಷಣಾಧಿಕಾರಿ ಎ.ಎಂ.ಬಿರಾದಾರ, ತಾಲೂಕಾಧ್ಯಕ್ಷ ಎಂ.ಎಸ್.ಚೌಧರಿ, ಸಿ.ಬಿ.ಗಡಗಿ, ಅಲ್ಪಾಫ್ ಸಾಲೋಟಗಿ, ಎಸ್.ಸಿ.ಹಳ್ಳೆÃಪ್ಪಗೊಳ, ಎಂ.ಎಂ.ಪಾತ್ರೊÃಟ್ಟಿ, ಜೆ.ಎಸ್.ಬೆಣ್ಣಿ, ಎಸ್.ಬಿ.ಚಿಗರಿ, ಎ.ಎಚ್.ವಾಲಿಕಾರ, ಆರ್.ಎಚ್.ಬಿರಾದಾರ, ಆರ್.ಎನ್.ಮುರಾಳ, ಎಸ್.ಬಿ.ಬಿರಾದಾರ, ಎಸ್.ಎಸ್.ಕತ್ನಳ್ಳಿ, ಅಶೋಕ ತೆಲ್ಲೂರ, ಎಸ್.ಜೆ.ರೂಗಿ, ಸೋಮಶೇಖರ ಪಾಟೀಲ, ಸೇರಿದಂತೆ ಇತರರು ವೇದಿಕೆ ಮೇಲಿದ್ದರು.
ಕ್ಷೆÃತ್ರ ಸಮನ್ವಯಾಧಿಕಾರಿ ಸಂತೋಷಕುಮಾರ ಬೀಳಗಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಸಿದ್ದಲಿಂಗ ಚೌಧರಿ ಆಶಯ ನುಡಿ ಹೇಳಿದರು. ಶಿಕ್ಷಕ ಎಸ್.ಎ.ಬಿರಾದಾರ ನಿರೂಪಿಸಿದರು. ಶಿಕ್ಷಕ ಎಸ್.ಬಿ.ಕಮತಗಿ ವಂದಿಸಿದರು.

loading...