ರೂಪಾಯಿ ಮೌಲ್ಯದಲ್ಲಿ ಕೊಂಚ ಚೇತರಿಕೆ

0
0
loading...

ಮುಂಬೈ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್​ ಎದುರು ಅಪಮೌಲ್ಯಗೊಳ್ಳುತ್ತಲೇ ಇದ್ದ ರೂಪಾಯಿ ಮೌಲ್ಯದಲ್ಲಿ ಇಂದು ಕೊಂಚ ಚೇತರಿಕೆ ಕಂಡಿದೆ. 50 ಪೈಸೆಯಷ್ಟು ಬಲಗೊಂಡಿರುವ ರೂಪಾಯಿ ಮೌಲ್ಯ ಡಾಲರ್​ಗೆ 71.68 ಆಗಿದೆ.

ವಿದೇಶಿ ವಿನಿಯಮ ಮಾರುಕಟ್ಟೆಯಲ್ಲಿ ರೂಪಾಯಿ ಸ್ಥಿತಿಗತಿ ಸುಧಾರಣೆ ಕಂಡಿದ್ದು, ಸರ್ಕಾರವು ಭರವಸೆ ನೀಡಿರುವ ಬೆನ್ನಲ್ಲೇ ಇಂತಹದೊಂದು ಪ್ರಗತಿ ಕಂಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್​ ಬೇಡಿಕೆ ಹೆಚ್ಚಿದ್ದರಿಂದ ರೂಪಾಯಿ ಮೌಲ್ಯ ತೀವ್ರ ಕುಸಿತ ಕಂಡಿತ್ತು. ಬುಧಾವರ 72.91 ರೂ. ಆಗಿ ಸಾರ್ವಕಾಲಿಕ ಪತನದ ಹಾದಿ ಹಿಡಿದಿತ್ತು. ಅಂದೇ 72.18 ರೂ.ಗೆ ಕೊನೆಗೊಂಡು ಅಲ್ಪ ಚೇತರಿಕೆ ಕಂಡಿತ್ತು. ನಿನ್ನೆ ಗಣೇಶ ಚತುರ್ಥಿ ಕಾರಣ ವಿದೇಶಿ ವಿನಿಮಯ ಮಾರುಕಟ್ಟೆ ಮುಚ್ಚಿತ್ತು.

ರೂಪಾಯಿ ಮೌಲ್ಯ ಸುಧಾರಣೆಯಿಂದ ಸೆನ್ಸೆಕ್ಸ್​ 38,000ದಿಂದ 38,036.81 ಅಂಕದೊಂದಿಗೆ ಆರಂಭ ಕಂಡಿದ್ದು, 318.85 (ಶೇ. 0.85) ಅಂಕಗಳಿಗೆ ಜಿಗಿದಿದೆ.  ನಿಫ್ಟಿಯು 11,454.80 ಅಂಕ ತಲುಪಿದ್ದು, 84.90 (0.75)ಗೆ ಏರಿದೆ.

 

loading...