ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿ :ಪ್ರಸನ್ನಕುಮಾರ

0
0
loading...

ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿ :ಪ್ರಸನ್ನಕುಮಾರ
ಕನ್ನಡಮ್ಮ ಸುದ್ದಿ-ಬೆಳಗಾವಿ: ಎಲ್ಲ ವೃತ್ತಿಗಳಿಂತ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾಗಿದ್ದು. ದೇಶದ ಏಳ್ಗಿಗೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದೆ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿ ಅವರಿಗೆ ಒಳ್ಳೆÃಯ ದಾರಿ ತೊರಿಸುವುದು ನಮ್ಮ ಕರ್ತವ್ಯವಾಗಿದೆ ಅದಕ್ಕಾಗಿ ವಿದ್ಯಾರ್ಥಿಗಳು ಸಹ ಗುರುವಿನ ದಾಸನಾದರೆ ಮಾತ್ರ ಜೀವನದಲ್ಲಿ ಉನ್ನತ್ತ ಮಟ್ಟಕ್ಕೆ ಬೆಳೆಯಲು ಸಾಧ್ಯ ಎಂದು ಪ್ರೌಢಶಿಕ್ಷಣ ಮಂಡಳಿ ಜಂಟಿ ಕಾರ್ಯದರ್ಶಿ ಎಂ. ಎಸ್. ಪ್ರಸನ್ನಕುಮಾರ ಹೇಳಿದರು.
ಸ್ಥಳೀಯ ಬ್ಯಾಂಕಿನ್ ಸಭಾಗೃಹ ಜಿಲ್ಲಾಧಿಕಾರಗಳ ಕಚೇರಿ ಆವರಣದಲ್ಲಿ ರವಿವಾರ ೨೩ ರಂದು ಜಿಲ್ಲಾ ಕಂದಾಯ ನೌಕರರ ಸಹಕಾರಿ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಮಂಡಳಿ ಜಂಟಿ ಕಾರ್ಯದರ್ಶಿ ಎಂ. ಎಸ್. ಪ್ರಸನ್ನಕುಮಾರ ಉದ್ಘಾಟಿಸಿ ಮಾತನಾಡಿದ ಅವರು.
ತಂತ್ರಜ್ಞಾನ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಕ ಅವಶ್ಯವಿದೆ ಅದಕ್ಕಾಗಿ ಶಿಕ್ಷಕರೂ ಸಹಕರಿಸಬೇಕು. ಅಜ್ಞಾನವೇಂಬ ಬೀಜ ಬಿತ್ತಿದರೆ ಮಾತ್ರ ಜ್ಞಾನ ಎಂಬ ಬೆಳಕು ಕಾಣಲು ಸಾಧ್ಯ ಅದೇ ಬೆಳೆದು ದೇಶದ ಕೀರ್ತಿ ಬೆಳಗಿಸಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಸಹಕಾರಿ ಸಂಘದ ಅಧ್ಯಕ್ಷ ಅಶೋಕ ಮಣ್ಣಿಕೇರಿ, ಬಿಇಓ ಲೀಲಾವತಿ ಹಿರೇಮಠ, ರಾಹುಲ ಮೇತ್ರಿ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರತಿಭಾನ್ವಿತ ಮಕ್ಕಳಿಗೆ ಸತ್ಕರಿಸಲಾಯಿತು.

loading...