ವಿದ್ಯಾರ್ಥಿಗಳಿಗೆ ಬೋನ್ಸಾಯ್ ಕೃಷಿ ಕುರಿತು ಜಾಗೃತಿ

0
0
loading...

ಕನ್ನಡಮ್ಮ ಸುದ್ದಿ-ಕುಮಟಾ: ಇಂದಿನ ಆಧುನಿಕ ಯುಗದಲ್ಲಿ ವನ ಮಹೋತ್ಸವ ಎಂಬುದು ಪ್ರಚಾರದ ವಸ್ತುವಾಗಿದೆ. ಕಾಟಾಚಾರಕ್ಕೆ ಗಿಡಗಳನ್ನು ನೆಟ್ಟು, ಪೋಷಿಸದೆ ಅವುಗಳ ಸಾವಿಗೆ ಕಾರಣರಾಗುವವರ ಸಂಖ್ಯೆಯೇ ಜಾಸ್ತಿಯಾಗಿರುವಾಗ ಆಧುನಿಕರಣ ಮತ್ತು ಐಶಾರಾಮಿ ಜೀವನ ನಡೆಸುವವರು ಅರಣ್ಯ ಬೆಳೆಸುವುದು ದೂರದ ಮಾತಾಗಿದೆ. ಆದರೆ, ಪರಿಸರಪರ ಕಾಳಜಿ ಮೆರೆಯುತ್ತಿರುವ ನಿವೃತ್ತ ಆರ್‌ಎಫ್‌ಒ ಎಲ್ ಆರ್ ಹೆಗಡೆ ಅವರು ಬೋನ್ಸಾಯ್ ಪದ್ದತಿಯ ಮೂಲಕ ಗಿಡ ಮರಗಳನ್ನು ಬೆಳೆಸಿ, ವಿದ್ಯಾರ್ಥಿಗಳಲ್ಲಿ ಬೋನ್ಸಾಯ್ ಕೃಷಿ ಕುರಿತು ಜಾಗೃತಿಮೂಡಿಸುವ ಕಾಯಕದಲ್ಲಿ ತೊಡಗಿದ್ದಾರೆ.
ಪಟ್ಟಣ ಬೆಳೆದಂತೆ ಸ್ಥಳಾವಕಾಶದ ಕೊರತೆಯಿಂದ ಗಿಡಮರಗಳನ್ನು ಬೆಳೆಸುವವರ ಸಂಖ್ಯೆಯೇ ಕಡಿಮೆಯಾಗಿದೆ. ಲಭ್ಯ ಸ್ಥಳಾವಕಾಶದಲ್ಲೆ ಬೃಹಧಾಕಾರವಾಗಿ ಬೆಳೆಯುವ ಮರಗಳನ್ನು ಕುಬ್ಜವಾಗಿ ಬೆಳೆಯಬಹುದು. ಇದರಿಂದ ಮನೆಯಲ್ಲೆ ಶುದ್ಧ ಆಮ್ಲಜನಕವನ್ನು ಪಡೆಯುವ ಮೂಲಕ ಆರೋಗ್ಯಕರ ವಾತಾವರಣವನ್ನು ನಿರ್ಮಿಸಿಕೊಳ್ಳಬಹುದಾಗಿದೆ.

ನೂರಾರು ವರ್ಷಗಳು ಬದುಕುವ ಹಾಗೂ ಬೃಹಧಾಕಾರವಾಗಿ ಬೆಳೆಯುವ ಆಲ, ಅರಳಿ, ಅತ್ತಿ ಮರಗಳನ್ನು ಕುಬ್ಜವಾಗಿ ಬೆಳೆಸಿದ್ದಾರೆ. ಈ ವನವನ್ನು ದೇವಸ್ಥಾನಗಳಲ್ಲಿ ನಿರ್ಮಿಸುವ ಮೂಲಕ ಭಕ್ತರ ಧಾರ್ಮಿಕ ಭಾವನೆಗೆ ಪÇರಕ ವಾತಾವರಣ ಕಲ್ಪಿಸಲು ಸಾಧ್ಯವಾಗುತ್ತದೆ. ಇನ್ನು ಮನೆಯ ಸುತ್ತಮುತ್ತಲೂ ಬೆಳೆಯುವ ಯಾವುದೇ ಜಾತಿಯ ಗಿಡಗಳನ್ನು ಬೋನ್ಸಾಯ್ ಪದ್ದತಿಯ ಮೂಲಕ ಅಲಂಕಾರಿಕ ಗಿಡಗಳನ್ನಾಗಿ ಬೆಳೆಸಬಹುದು. ಇದರಿಂದ ಮನೆಯ ಸೌಂದರ್ಯ ವೃದ್ಧಿಯಾಗುತ್ತದೆ. ಬಹುಮಳಿಗೆ ಕಟ್ಟಡಗಳಲ್ಲಿ ವಾಸಿಸುವವರು ಕೂಡ ತಮ್ಮ ಮನೆಯೊಳಗೆ ಅಥವಾ ಮೇಲ್ಛಾವಣಿಯ ಮೇಲೆ ಗಿಡಗಳನ್ನು ಬೆಳೆಸಬಹುದು. ಧಾರ್ಮಿಕ ಆಚರಣೆಗಳಿಗೆ ಅನುಕೂಲವಾಗುವ ನವಗ್ರಹ ವನ ಅಥವಾ ಔಷಧಿ ಗಿಡಗಳನ್ನು ಬೆಳೆಸುವ ಮೂಲಕ ಮನೆಯಲ್ಲಿಯೇ ಚಿಕ್ಕಪÅಟ್ಟ ಕಾಯಿಲೆಗಳಿಗೆ ಔಷಧವನ್ನು ಸಿದ್ಧಪಡಿಸಿಕೊಳ್ಳಬಹುದಾಗಿದೆ.
ಅಲ್ಲದೇ ಹಣ್ಣು, ತರಕಾರಿ, ಹೂವು ಮತ್ತು ಬೆಲೆಬಾಳುವ ಶ್ರಿÃಗಂಧ ಸೇರಿದಂತೆ ಇತರೆ ಜಾತಿಯ ಮರÀಗಳನ್ನು ಬೆಳೆಯಬಹುದಾಗಿದೆ. ಮರ ಕುಬ್ಜವಾಗಿದ್ದರೂ ಅದಕ್ಕೆ ಬೀಡುವ ಫಲ-ಪÅಷ್ಪಗಳ ಬೆಳವಣಿಗೆಯಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ.

ಬೋನ್ಸಾಯ ಪದ್ದತಿಯಲ್ಲಿ ಮರವನ್ನು ಕುಬ್ಜವಾಗಿ ಬೆಳೆಸುವುದು ಹೇಗೆಂಬ ಕುತೂಹಲ ನಿಮ್ಮಲ್ಲಿ ಮೂಡುವುದು ಸಹಜ. ಬೋನ್ಸಾಯ್ ಪದ್ದತಿಯನ್ನು ಬಳಸಿ ಯಾವುದೇ ಜಾತಿಯ ಗಿಡಗಳ ತಾಯಿ ಬೇರನ್ನು ೧/೩ ದಷ್ಟು ಕತ್ತರಿಸಿ ಕುಂಡದಲ್ಲಿ ನೆಡಬೇಕು. ಮಣ್ಣು, ನೀರು, ಗೊಬ್ಬರವನ್ನು ಕಾಲಕಾಲಕ್ಕೆ ಉಣಿಸಬೇಕು. ಗಿಡದ ರೆಂಬೆ,ಕೊಂಬೆಗಳನ್ನು ಬೇಕಾದ ಹಾಗೇ ಕತ್ತರಿಸಿಕೊಂಡು ಅಲಂಕಾರಿಕ ಗಿಡಗಳನ್ನಾಗಿ ರೂಪಿಸಿಕೊಳ್ಳಬಹುದು. ವರ್ಷ ಅಥವಾ ಎರಡು ವರ್ಷಕ್ಕೊಮ್ಮೆಯಾದರೂ ಗಿಡವನ್ನು ತೆಗೆದು ಅದರ ಬೇರುಗಳನ್ನು ಕುಂಡದ ಅಳತೆಗೆ ಕತ್ತರಿಸಿ, ಪÅನಃ ನೆಡಬೇಕು. ಇಲ್ಲವೇ ನೇರವಾಗಿ ಭೂಮಿಯಲ್ಲಿ ನೆಡುವ ಮೂಲಕ ಅರಣ್ಯಿÃಕರಣ ಬೆಳೆಸಬಹುದಾಗಿದೆ.
ಇನ್ನು ನಾವು ನಿವೃತ್ತ ವಲಯ ಅರಣ್ಯಾಧಿಕಾರಿ ಎಲ್ ಆರ್ ಹೆಗಡೆ ಅವರಿಗೆ ಖಂಡಿತ ಒಂದು ಸೆಲ್ಯೂಟ್ ಹೊಡೆಯಲೇ ಬೇಕು. ಸಾಮಾನ್ಯವಾಗಿ ಎಲ್ಲ ಸರ್ಕಾರಿ ನೌಕರರು ನಿವೃತ್ತರಾದ ಬಳಿಕ ಕುಟುಂಬಸ್ಥರೊಂದಿಗೆ ನೆಮ್ಮದಿಯ ಜೀವನ ನಡೆಸಲು ಇಚ್ಚಿಸುವುದು ಸಹಜ. ಆದರೆ ಎಲ್ ಆರ್ ಹೆಗಡೆ ಅವರು ನಿವೃತ್ತಿಯ ಬಳಿಕವು ಅರಣ್ಯ ಬೆಳೆಸುವ ಬಗ್ಗೆ ಯುವ ಪಿಳಿಗೆಯನ್ನು ಜಾಗೃತಗೊಳಿಸುವ ಕಾಯಕದಲ್ಲಿ ಯುವ ಉತ್ಸಾಹಿ ತರುಣನಂತೆ ತೊಡಗಿಕೊಂಡಿರುವುದು ಮೆಚ್ಚಲೇ ಬೇಕಾದ ಸಂಗತಿ. ಕುಬ್ಜವಾಗಿ ಬೆಳೆಯುವ ಗಿಡಮರಗಳು ವರ್ಷಕಳೆದಂತೆ ಕಾಂಡ ಬಲಗೊಳ್ಳುತ್ತದೆಯೋ ಹಾಗೆಯೇ ಎಲ್ ಆರ್ ಹೆಗಡೆ ಅವರಿಗೂ ಈ ಪದ್ದತಿಯಲ್ಲಿ ಪಕ್ವತೆ ವೃದ್ಧಿಗೊಳ್ಳುತ್ತಿದೆ. ಇವರ ಪರಿಸರಪರ ಕಾಳಜಿ ಇತರರಿಗೆ ಮಾದರಿಯಾಗಿದೆ. ಇವರು ಇನ್ನು ಹೆಚ್ಚಿನ ಪರಿಸರಸ್ನೆÃಹಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಯಶಸ್ಸು ಪಡೆಯಲಿ ಎಂಬುದು ಪ್ರಜ್ಞಾವಂತ ನಾಗರಿಕರ ಆಶಯವಾಗಿದೆ.

loading...