ವಿದ್ಯಾರ್ಥಿಗಳು ಉತ್ತಮ ಕಲೆ ಕರಗತ ಮಾಡಿಕೊಳ್ಳಿ: ಇಂದುಮತಿ

0
0
loading...

ಕನ್ನಡಮ್ಮ ಸುದ್ದಿ-ನರೇಗಲ್ಲ: ಪ್ರತಿಭೆ ಎಲ್ಲರಲ್ಲಿಯೂ ಇರುತ್ತದೆ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಕಲೆಯನ್ನು ವಿದ್ಯಾರ್ಥಿಗಳು ಕರಗತ ಮಾಡಿಕೊಳ್ಳಬೇಕೆಂದು ದೂರದರ್ಶನ ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ ಹೇಳಿದರು. ಪಟ್ಟಣದ ಅನ್ನದಾನೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಶನಿವಾರ ಜರುಗಿದ ಸಾಂಘಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ನಮ್ಮ ದೈಹಿಕ ಬಲ ಹೆಚ್ಚಾಗಬೇಕಾದರೆ ಕ್ರೀಡೆಗಳ ಅವಶ್ಯಕತೆ ಇದೆ. ಹಾಗೆಯೇ ಮನೋಲ್ಲಾಸವನ್ನು ಪಡೆಯಲು ಸಾಂಸ್ಕøತಿಕ ಚಟುವಟಿಕೆಗಳು ಬೇಕು. ಅದಕ್ಕೆ ಇಂತಹ ವೇದಿಕೆಗಳು ಸಹಾಯ ಮಾಡುತ್ತವೆ. ಅದಕ್ಕಾಗಿ ವಿದ್ಯಾರ್ಥಿಗಳು ತಮ್ಮಲ್ಲಿ ಸಾಹಿತ್ಯ, ಸಂಗೀತ ಇತ್ಯಾದಿ ಕಲೆಗಳನ್ನು ಬೆಳೆಸಿಕೊಳ್ಳಬೇಕು. ತಮ್ಮ ಅನೇಕ ಹಾಸ್ಯ ಚಟಾಕಿಗಳ ಮೂಲಕ ಸಭೆಯನ್ನು ನಗೆಗಡಲಲ್ಲಿ ತೇಲಿಸಿದ ಇಂದುಮತಿ, ಅನೇಕ ಹಾಡುಗಳನ್ನು ಹೇಳುವ ಮೂಲಕ ಮನಸ್ಸಿಗೆ ಮುದ ನೀಡಿದರು.ದಿವ್ಯ ಸಾನಿಧ್ಯ ವಹಿಸಿದ್ದ ಡಾ. ಅಭಿನವ ಅನ್ನದಾನ ಸ್ವಾಮೀಜಿ ಆಶೀರ್ವಚನ ನೀಡಿ, ಕಲೆ ಎಲ್ಲರಿಗೂ ಒಲಿಯುವಂತಹುದಲ್ಲ. ಒಲಿದ ಕಲೆಯನ್ನು ಕರಗತ ಮಾಡಿಕೊಳ್ಳಲು ಸಾಕಷ್ಟು ಶ್ರಮ ವಹಿಸಬೇಕು. ಇಂದುಮತಿ ಸಾಲಿಮಠರು ಅಂತಹ ಕಲೆಯನ್ನು ಕರಗತ ಮಾಡಿಕೊಂಡು ಎಲ್ಲರ ಮನಸ್ಸಿಗೂ ಸಂತೋಷ ನೀಡುತ್ತಿದ್ದಾರೆ ಎಂದರು. ವಿದ್ಯಾರ್ಥಿಗಳು ಇಂತಹ ಕಲೆಗಳನ್ನು ತಮ್ಮಲ್ಲಿ ಬೆಳೆಸಿಕೊಂಡು ತಮ್ಮ ಪ್ರತಿಭೆಯನ್ನು ತೋರುವ ಕಾರ್ಯಕ್ಕೆ ಮುಂದಾಗಬೇಕು. ಮೂರು ದಶಕಗಳ ಕಾಲ ನಮ್ಮ ಸಂಸ್ಥೆಯಲ್ಲಿ ಉಪನ್ಯಾಸಕರಾಗಿ, ಕಚೇರಿ ಸಿಬ್ಬಂದಿಯವರಾಗಿ ಸಮರ್ಪಕ ಕಾರ್ಯ ನಿರ್ವಹಿಸಿ ನಿವೃತ್ತಿಯಾದವರ ಬದುಕು ಸುಖಕರವಾಗಿರಲಿ. ಮುಂದೆ ಅವರ ಸೇವೆ ನಮ್ಮ ಶ್ರೀಮಠಕ್ಕೆ ಮತ್ತು ಸಮಾಜಕ್ಕೆ ಎಂದಿಗೂ ದೊರಕುವಂತಾಗಲಿ ಎಂದು ಹೇಳಿದರು.
ಈ ಸಮಯದಲ್ಲಿ ಸೇವಾ ನಿವೃತ್ತಿ ಹೊಂದಿದ ಕೆ.ಬಿ. ಇಳಕಲ್ಲ, ಎ.ವಿ. ರಡ್ಡೇರ, ಎ.ಜೆ. ಹಂಡಿ, ವಿ.ಎಸ್. ಪಾಟೀಲ, ರವಿತೇಜ ಅಬ್ಬಿಗೇರಿ, ಎ.ಎಚ್. ಬೇವಿನಕಟ್ಟಿ ಮತ್ತು ಸಿ.ಎ.ಅಂಗಡಿಯವರನ್ನು ಸನ್ಮಾನಿಸಲಾಯಿತು. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸೋಮಣ್ಣ ಹರ್ಲಾಪೂರ ಅಧ್ಯಕ್ಷತೆ ವಹಿಸಿದ್ದರು. ಶ್ರೀಮಠದ ನಿಯೋಜಿತ ಉತ್ತರಾಧಿಕಾರಿ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ವೇದಿಕೆಯ ಮೇಲೆ ಸಂಸ್ಥೆಯ ಆಡಳಿತಾಧಿಕಾರಿ ಎಸ್.ಜಿ.ಹಿರೇಮಠ, ಸದಸ್ಯರಾದ ಬಿ.ಜಿ.ವೀರಾಪೂರ, ವಿ.ವಿ.ವಸ್ತ್ರದ, ಮೇಘಾ ರೋಣದ ಉಪಸ್ಥಿತರಿದ್ದರು. ಪ್ರಾಚಾರ್ಯ ಎಸ್.ಜಿ.ಕೇಶಣ್ಣವರ ಸ್ವಾಗತಿಸಿದರು. ಡಾ. ಎ.ಬಿ.ಮಂಗಳೂರ ಮತ್ತು ಜಿ.ಜಿ.ಕೋಟಿ ನಿರೂಪಿಸಿದರು. ಎಸ್.ಎಚ್.ಕುಲಕರ್ಣಿ ಅತಿಥಿಗಳನ್ನು ಪರಿಚಯಿಸಿದರು. ಜಿಮಖಾನಾ ಕಾರ್ಯದರ್ಶಿ ನೀಲಮ್ಮ ಪಾಟೀಲ ವಂದಿಸಿದರು.

loading...