ವಿದ್ಯಾರ್ಥಿಗಳು ನಾಯಕತ್ವದ ಗುಣ ಬೆಳೆಸಿಕೊಳ್ಳಿ: ಬಣಕಾರ

0
1
loading...

ಕನ್ನಡಮ್ಮ ಸುದ್ದಿ-ಹಿರೇಕೆರೂರ: ಶಿಸ್ತು, ಸಂಸ್ಕೃತಿ, ಸಂಸ್ಕಾರಯುತ ಶಿಕ್ಷಣದ ಜೊತೆಗೆ ನಾಯಕತ್ವ ಗುಣಗಳನ್ನು ಅಳವಡಿಸಿಕೊಂಡರೆ ಮಾತ್ರ ವಿದ್ಯಾರ್ಥಿ ಜೀವನ ಸಾರ್ಥಕವಾಗುತ್ತದೆ ಎಂದು ಜಿಲ್ಲಾ ಮಾದ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಚ್‌.ಪಿ.ಬಣಕಾರ ಹೇಳಿದರು.
ಪಟ್ಟಣದ ಸಂಗಮೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಜರುಗಿದ ಶಾಲಾ ಕಾಲೇಜುಗಳ ಸಂಸತ್‌ನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣ ಎಂಬುದು ಜೀವನಕ್ಕೆ ಅತಿ ಮಹತ್ವವಾದ ಭಾಗವಾಗಿದ್ದು, ಈ ವೇಳೆಯಲ್ಲಿ ಸ್ವಲ್ಪ ಮೈಮರೆತರೆ ಅಥವಾ ನಿರ್ಲಕ್ಷವಹಿಸಿದರೆ ಜೀವನದ ಕೊನೆಯವರೆಗೆ ಅದರ ನೋವನ್ನು ನೀವು ಅನುಭವಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಪಠ್ಯ ವಿಷಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಉತ್ತಮ ಜ್ಞಾನರ್ಜನೆ ಪಡೆದು ಉನ್ನತ ಸ್ಥಾನ ಅಲಂಕರಿಸಿದರೆ ಮಾತ್ರ ಕಲಿಸಿದ ಶಿಕ್ಷಕರಿಗೆ, ಪಾಲಕರಿಗೆ, ಇಂತಹ ವಿದ್ಯಾಸಂಸ್ಥೆಗಳಿಗೆ ಕೀರ್ತಿ ಸಲ್ಲುತ್ತದೆ ಎಂದರು.
ಕಾಲೇಜು ಸಂಸತ್‌ನ್ನು ಉದ್ಘಾಟಿಸಿದ ಪ್ರಥಮ ದರ್ಜೆ ಗುತ್ತಿಗೆದಾರ ಜಿ.ಪಿ.ಪ್ರಕಾಶ, ಸನ್ಮಾನ ಸ್ವಿಕರಿಸಿದ ಬಿಇಒ ಯು.ಬಸವರಾಜಪ್ಪ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಪಿಎಸಿಎಂಎಸ್‌ ವ್ಯವಸ್ಥಾಪಕ ರವಿಶಂಕರ ಬಾಳಿಕಾಯಿ ಉಚಿತ ಸಮವಸ್ತ್ರಗಳನ್ನು ವಿತರಿಸಿದರು.
ಬಹುಮಾನ ವಿತರಣಾ ಕಾರ್ಯಕ್ರಮವನ್ನು ಉಪನ್ಯಾಸಕ ಎಸ್‌.ಪಿ.ಗೌಡರ್‌ ನಿರ್ವಹಿಸಿದರು.
ಇದೆ ವೇಳೆ ಪಿಯುಸಿಯಲ್ಲಿ ಕಾಲೇಜಿಗೆ ಪ್ರಥಮ ಸ್ಥಾನಗಳಿಸಿದ ವಿದ್ಯಾರ್ಥಿನಿ ಚೈತ್ರಾ ಲೋಕಾಪುರ ಅವರನ್ನು ಸಂಸ್ಥೆಯಿಂದ ಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಚಾರ್ಯ ಪಿ.ಎಸ್‌.ಕಬ್ಬಿಣಕಂತಿಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಶಿಕ್ಷಕ ಎಂ.ಬಿ.ಅರಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ, ಕಾಲೇಜುಗಳ ಸಂಸತ್‌ ಪದಾಧಿಕಾರಿಗಳು, ಆಡಳಿತ ಮಂಡಳಿಯವರು, ಶಿಕ್ಷಕರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಇದ್ದರು.
ಶಿಕ್ಷಕ ರಾಜು ತೆಂಬದ, ಕಾವ್ಯಾ ಅಜ್ಜಪ್ಪನವರ, ಎಸ್‌.ಎಚ್‌.ಸುಂಕಾಪುರ ನಿರ್ವಹಿಸಿದರು.

loading...