ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡಲಿ: ಪೀರಜಾದೆ

0
0
loading...

ಕನ್ನಡಮ್ಮ ಸುದ್ದಿ-ಹಾನಗಲ್ಲ: ಆಧುನಿಕ ಶೈಕ್ಷಣಿಕ ಸಾಮಾಜಿಕ ವ್ಯವಸ್ಥೆಯಲ್ಲ ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಸನಕ್ಕೆ ಮೊದಲ ಆದ್ಯತೆ ನೀಡಬೇಕಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪರ್ದೆಶಕ ಎಸ್.ಸಿ.ಪೀರಜಾದೆ ಹೇಳಿದರು.
ಹಾನಗಲ್ಲ ತಾಲೂಕಿನ ಅರಳೇಶ್ವರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸೌಲಭ್ಯಗಳ ಕೊರತೆಯಲ್ಲಿಯೂ ವಿದ್ಯಾರ್ಥಿಗಳು ಉತ್ತಮ ಕ್ರೀಡಾ ಪ್ರತಿಭೆ ಮೆರೆಯುತ್ತಿರುವುದು ಮೆಚ್ಚುಗೆಯ ಸಂಗತಿ. ಜ್ಞಾನ ಸಂಪಾದನೆಯ ಜೊತೆಗೆ ಕ್ರೀಡೆ ಸಾಂಸ್ಕøತಿಕ ಬೆಳವಣಿಗೆಯೂ ಬೇಕು. ನಾವು ಕೇವಲ ಅಂಕಪಟ್ಟೆಯ ಶಿಕ್ಷಣಕ್ಕೆ ಮುಂದಾಗದೇ ಅದರೊಂದಿಗೆ ದೇಶ ಪ್ರೇಮ, ದುರ್ಬಲರಿಗೆ ಸಹಾಯ ಸಹಕಾರ ನೀಡುವುದನ್ನೂ ಕಲಿಯಬೇಕು ಎಂದರು. ತಿಪ್ಪನಗೌಡ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಟಗಳಲ್ಲಿ ನಿರ್ಣಾಯಕರ ತೀರ್ಮಾನಕ್ಕೆ ತಲೆಬಾಗಲೇಬೇಕು. ಕ್ರೀಡೆ ಸ್ಪರ್ಧಾತ್ಮಕವಾಗಿರಬೇಕೆ ಹೊರತು ಇದರಲ್ಲಿ ದ್ವೇಶಕ್ಕೆ ಅವಕಾಶವಿರಬಾರದು ಎಂದರು.
ಜಗದೀಶಯ್ಯ ಹಿರೇಮಠ ಕ್ರೀಡಾ ಜ್ಯೋತಿ ಉದ್ಘಾಟಿಸಿ ಮಾತನಾಡಿದರು. ಪ್ರಾಚಾರ್ಯ ಎಚ್.ಜಿ.ಅರುಣಕುಮಾರ ಅಧ್ಯಕ್ಷತೆ ವಹಿಸಿದ್ದರು. ಡಾ. ಎನ್.ಎಫ್.ಕಮ್ಮಾರ, ಉದಯ ತಳವಾರ, ಪರ್ವಿನಬಾನು ಕಮ್ಮಾರ, ಚಿನ್ನಪ್ಪ ಬಡಿಗೇರ, ಕೆ.ಟಿ.ಕಲಗೌಡ್ರ, ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ, ಬಸವರಾಜ ತೋಟದ, ನಾಗಪ್ಪ ದೊಡ್ಡಮನಿ, ಮಾರುತಿ ಕರಭೀಮಣ್ಣನವರ, ಸುಧಾ ಗಾಜಿಪುರ, ಜಯಮ್ಮ ಮರೆಕ್ಕನವರ, ಪ್ರಾಚಾರ್ಯ ಎಂ.ಬಿ.ಮುದಗೋಳ, ನಾಗಪ್ಪ ಚಿಕ್ಕೇರಿ, ಶಿವಕುಮಾರ ಸಣ್ಣಗೌಡರ, ಶೇಕಣ್ಣ ಗೂಳಿ, ಮಲ್ಲೇಶ ಕೂಡಲ, ಮುರಿಗೆಪ್ಪ ಡಂಬಳಪ್ಪನವರ, ಎಂ.ಪಿ.ಮೂಡೂರ, ಬಿ.ಆರ್.ಹಂಚಿನಮನಿ, ಸುಮಿತ್ರವ್ವ ಮಡಿವಾಳರ, ಸುಮಂಗಲಾ ನಾಯಿನೇಗಿಲ, ಆನಂದ ಮುದುಕಣ್ಣನವರ ಇದ್ದರು. ಉಪನ್ಯಾಸಕ ಎಸ್.ಬಿ.ಕಮಾಟಿ ಸ್ವಾಗತಿಸಿದರು. ಉಪನ್ಯಾಸಕ ಗಣೇಶ ಕಾರ್ಯಕ್ರಮ ನಿರೂಪಿಸಿದರು.

loading...