ವಿದ್ಯಾರ್ಥಿ ಜೀವನ ಶ್ರೇಷ್ಠವಾದದ್ದು: ಸಂಗನಗೌಡ

0
0
loading...

ಕನ್ನಡಮ್ಮ ಸುದ್ದಿ-ರೋಣ: ವಿದ್ಯಾರ್ಥಿಯ ಜೀವನವು ನಿಜಕ್ಕೂ ಶ್ರೇಷ್ಠವಾದುದು. ನಮ್ಮ ಬದುಕಿನ ಜೀವನವನ್ನು ಉತ್ತಮ ರೀತಿಯಲ್ಲಿ ನಡೆಸಿಕೊಳ್ಳುವಂತಹ ಅಪೂರ್ವ ಮಾರ್ಗವೇ ವಿದ್ಯಾರ್ಥಿಗಳ ಜೀವನ. ಆ ನಿಟ್ಟಿನಲ್ಲಿ ನಮ್ಮ ಜೀವನವನ್ನು ರಾಷ್ಟ್ರದ ಏಳಿಗೆಗೆ ಶ್ರಮಿಸಿ ಸಮಾಜದ ಜನತೆಯಲ್ಲಿ ಒಂದು ಉಜ್ವಲವಾದ ಜ್ಯೋತಿ ಉರಿಸುವುದು ರಾಷ್ಟ್ರೀಯ ಸೇವಾ ಯೋಜನೆಗಳ ಮೂಲಕ ಎಂದು ಪುರಸಭೆ ನೂತನ ಸದಸ್ಯ ಹಾಗೂ ಆರ್‍ಜಿಎಸ್ ಸಂಸ್ಥೆಯ ಚೇರಮನ್ ಸಂಗನಗೌಡ ಪಾಟೀಲ ಹೇಳಿದರು.
ಪಟ್ಟಣದ ರಾಜೀವ ಗಾಂಧಿ ಶಿಕ್ಷಣ ಸಮಿತಿಯಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ಡಿಜಿಟಲ್ ಗ್ರಂಥಾಲಯ ಉದ್ಘಾಟಣಾ ಸಮಾರಂಭದಲ್ಲಿ ಮಾತನಾಡಿದರು. ಇಂತಹಯ ಮಹತ್ತರ ಎನ್‍ಎಸ್‍ಎಸ್ ಕಾರ್ಯವು ದೇಶಕ್ಕೆ ಅವಶ್ಯಕವಾದುದು. ದೇಶದ ಪ್ರಗತಿಯು ಇಂದಿನ ಯುವಕರಲ್ಲಿ ಅಳವಡಿಕೆಯಾಗಿದೆ.ಈ ಯೋಜನೆಯಿಂದ ಶಿಸ್ತು,ಸಂಯಮ,ತಾಳ್ಮೆ,ಸೇವಾ ಮನೋಭಾವನೆಯು ಮೊಳಗುವುದರ ಜೊತೆಗೆ ಕರ್ತವ್ಯದ ಅರಿವು ಮೂಢುತ್ತದೆ.ದೇಶವನ್ನು ಮುನ್ನಡೆಸುವ ಪ್ರತೀಕವಾಗುತ್ತದೆ ಎಂದರು.
ಎಚ್.ಆರ್.ಮೇಟಿ ಮಾತನಾಡಿ ಒಬ್ಬ ವಿದ್ಯಾರ್ಥಿಯು ಬರೀ ಶಿಕ್ಷಣವನ್ನು ಪಡೆದುಕೊಂಡರೇ ಸಾಲದು. ಇಂತಹ ರಾಷ್ಟ್ರೀಯ ಸೇವಾ ಯೋಜನೆಯಿಂದ ಗ್ರಾಮಗಳಿಗೆ ಸೇವೆಯನ್ನು ನೀಡುವ ಮೂಲಕ ನೆಮ್ಮದಿಯ ವಾತಾವರಣವನ್ನು ಕಂಡುಕೊಳ್ಳುವುದು ಅಷ್ಟೇ ಮುಖ್ಯವಾಗುತ್ತದೆ. ನಮಗಾಗಿ ಬದುಕುವುದಕ್ಕಿಂದ ಪರೋಪಕಾರಿಯಾಗಿ ಜೀವಿಸುವುದೇ ಮಹತ್ತರ ಎಂದರು. ದೀವ್ಯ ಸಾನಿಧ್ಯವನ್ನು ಗುರುಪಾದ ಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿದರು.
ವೇದಿಕೆಯಲ್ಲಿ ಮಿಥುನ ಪಾಟೀಲ, ಎಚ್.ಆರ್.ಮೇಟಿ, ಡಾ. ಕೆ.ಬಿ.ಧನ್ನೂರ, ಬಿ.ಎಫ್.ಚೇಗರಡ್ಡಿ, ವಾಯ್.ಎನ್.ಪಾಪಣ್ಣವರ, ಎಚ್.ಆರ್.ದೊಡ್ಡಮನಿ, ಸಂಸ್ಥೆಯ ಶಿಕ್ಷಕ ವೃಂದ ಹಾಗೂ ಸಿಬ್ಬಂದಿ ಇದ್ದರು.

loading...